ಪತ್ರಕರ್ತರ ಮೇಲೆ ಸುಳ್ಳು ದೂರು ನೀಡಿದ ವೈದ್ಯ ಡಾ. ನವೀನನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು: ಶಿರಾ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊರಟಗೆರೆ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗಿ ಪತ್ರಕರ್ತರ ಮೇಲೆ ಸುಳ್ಳು ದೂರು ನೀಡಿದ ವೈದ್ಯ ಡಾ. ನವೀನ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ಹಾಗು ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಪಿ ಎಸ್ ಐ ರವರನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮಮತ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿರಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್. ಜಯಪಾಲ್, ಜಿಲ್ಲಾ ಕಾರ್ಯದರ್ಶಿ ದಶರಥ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜು.ಎನ್, ಖಜಾಂಚಿ ಎಸ್.ಕೆ.ಕುಮಾರ್, ನಿರ್ದೇಶಕರಾದ ಟಿ. ಎಲ್.ನಟರಾಜು, ಸದಸ್ಯರಾದ ಶಿವಕುಮಾರ್, ವಿಜಯಕುಮಾರ್, ವಿನೋದ್ ಕುಮಾರ್, ಲಕ್ಷ್ಮಿಕಾಂತ್, ಮಂಜುನಾಥ್, ಮಧುಸೂಧನ್ ಹಾಜರಿದ್ದರು.

ತುರುವೇಕೆರೆ: ಕೊರಟಗೆರೆಯಲ್ಲಿ ನಡೆದ ಪತ್ರಕರ್ತರ ಮೇಲೆ ‌ಹಲ್ಲೆ ಖಂಡಿಸಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ ನವೀನ್ ಹಾಗೂ ಪಿ.ಎಸ್.ಐ.ನಾಗಾರಾಜು, ನಂದೀಶ್ ಬಿ.ಎಲ್. ಬಂಧದಿಸುವಂತೆ ಆಗ್ರಹಿಸಿ ತುರುವೇಕೆರೆ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಗುಬ್ಬಿ: ಕೊರಟಗೆರೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗಿರುವುದು, ಹಾಗೂ F IR ದಾಖಲು ಮಾಡಿದ್ದರ ವಿರುದ್ಧವಾಗಿ ಗುಬ್ಬಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಸಿಸ್ಟೆಂಟ್ ಕಮಿಷನರ್ ಅಜಯ್ ಹಾಗೂ ತಹಸಿಲ್ದಾರ್ ಬಿ ಆರತಿ ಅವರಿಗೆ ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷ ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಮೇಳಕಲ್ಲಹಳ್ಳಿ, ಖಜಾಂಚಿ ಕೆಂಪರಾಜು ನಿರ್ದೇಶಕರಾದ ಬಸವರಾಜು, ಸತೀಶ್,ಗಂಗಾಧರಸ್ವಾಮಿತೆಲುಗುಖಜಾಂಚಿ ಕೆಂಪರಾಜು, ಸೋಮಸುಂದರ್, ಮಂಜುನಾಥ್, ಸೇರಿದಂತೆ ಇನ್ನಿತರರು ಮನವಿ ಪತ್ರ ಸಲ್ಲಿಸಿದರು.


.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!