ಬಾದಾಮಿ: ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಭಾಸ್ವಾಧೀನಕ್ಕೆ ಸಂಬಂಧಪಟ್ಟಂತೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಮುಂದುವರಿದ ಗ್ರಾಮಸ್ಥರ ಅಹೋರಾತ್ರಿ ಧರಣಿ ಸತ್ಯಾಗ್ರಹದ ಬೆಂಬಲಕ್ಕೆ ನಿಂತ ಶಿವಮೊಗ್ಗದ ರೈತಪರ ಹೋರಾಟಗಾರರು ಹಾಗೂ ಸಮಾಜ ಸೇವಕಿ ಯರಾದ ಭುವನೇಶ್ವರಿ ಅಕ್ಕಮಹಾದೇವಿ ಹೆಚ್.ಎಂ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಗ್ರಾಮಸ್ಥರು ಸಚಿವ ಮುರಾಗೇಶ್ ನಿರಾಣಿ ವಿರುದ್ಧ ಸತತ 22 ನೆಯ ದಿನವಾದ ಧರಣಿ ಸತ್ಯಾಗ್ರಹ ಪ್ರತಿಭಟನೆ ಮುಂದುವರಿದಿದೆ. ಬಾದಾಮಿ ತಾಲೂಕಿನ ಹಲಕೂರ್ಕಿ ಗ್ರಾಮಕ್ಕೆ ಶಿವಮೊಗ್ಗದ ರೈತ ಪರ ಹೋರಾಟಗಾರರು ಹಾಗೂ ಸಮಾಜ ಸೇವಕಿ ಯರಾದ ಭುವನೇಶ್ವರಿ ಅಕ್ಕಮಹಾದೇವಿ ಹೆಚ್.ಎಂ. ಹ ಲಕುರ್ಕಿ ಗೆ ಆಗಮಿಸಿ ಅಹೋರಾತ್ರಿ ದರಣಿ ಯಲ್ಲಿ ಪಾಲ್ಗೊಂಡು ಮಾತನಾಡಿ ಸಚಿವ ಮುರಾಗೇಶ್ ನಿರಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಮ್ಮ ರೈತರ ಭೂ ಸ್ವಾಧೀನ ಕೈ ಬಿಡದೇ ಹೋದರೆ ಈ ಶಾಂತಿಯುತ ಹೋರಾಟ ಉಗ್ರ ಹೋರಾಟವಾಗಿ ಪರಿವರ್ತನೆ ಆಗುತ್ತದೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು. ಸರಕಾರಕ್ಕೆ ಹಾಗೂ ಮಾನ್ಯ ಮುಖ್ಯಮಂತ್ರಿ ಯವಾರಿಗೂ ಮಾಧ್ಯಮದ ಮೂಲಕ ಸಂದೇಶ ರವಾನೆ ಮಾಡಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ