ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಬಾಲಾಜಿ ಸೇವಾ ಟ್ರಸ್ಟ್ ಸದಾ ಸಿದ್ದ ; ಬಾಲಾಜಿ ಕುಮಾರ್ ವಾಗ್ದಾನ

ಗುಬ್ಬಿ: ಪುರಾತನ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ ಧಾರ್ಮಿಕ ಕಾರ್ಯಗಳಿಗೆ ನಿರಂತರ ಸಹಕಾರ ನೀಡಿದ ಬಾಲಾಜಿ ಸೇವಾ ಟ್ರಸ್ಟ್ ಸಾಮಾಜಿಕ ಸೇವಾ ಕಾರ್ಯದಲ್ಲಿ ಸಹ ತೊಡಗಿಸಿಕೊಂಡು ಬಡವರ ಪರ ಕೆಲಸ ಮಾಡಿ ಟ್ರಸ್ಟ್ ಎಂದಿಗೂ ಸಮಾಜಕ್ಕೆ ಮುಡುಪಾಗಿದೆ ಎಂದು ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಾಜಿ ಕುಮಾರ್ ಭರವಸೆ ನೀಡಿದರು.

ಸಾಗರನಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಎರಡು ಲಕ್ಷ ರೂಗಳ ದೇಣಿಗೆ ನೀಡಿ ಮಾತನಾಡಿದ ಅವರು ಸಮಾಜದ ಹಿತ ಕಾಯುವ ದೇವಾಲಯಗಳು ಶಾಂತಿ ನೀಡುವ ಧಾಮಗಳಾಗಿವೆ. ಗ್ರಾಮದಲ್ಲಿ ಹಿರಿಯರು ನಿರ್ಮಿಸಿದ ಪುರಾಣ ಪ್ರಸಿದ್ದ ದೇವಾಲಯಗಳ ಕಾಯಕಲ್ಪಕ್ಕೆ ಉಳ್ಳವರ ಸಹಕಾರ ಅತ್ಯಗತ್ಯ ಎಂದರು.

ದೇಣಿಗೆ ಪಡೆದ ಹಿರಿಯ ಮುಖಂಡ ಎಸ್.ನಂಜೇಗೌಡ ಮಾತನಾಡಿ ಸಾಗರನಹಳ್ಳಿ ಗ್ರಾಮದಲ್ಲಿ ಯೋಗಿಗಳಿಂದ ನಿರ್ಮಾಣವಾದ ಚಂದ್ರ ಮೌಳೇಶ್ವರ ದೇವಾಲಯ ಈಗ ಸುಮಾರು 70 ಲಕ್ಷ ಅಂದಾಜಿನಲ್ಲಿ ಪುನರುಜ್ಜೀವನಗೊಳ್ಳುತ್ತಿದೆ. ಹಲವು ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ. ಈ ಪೈಕಿ ಬಾಲಾಜಿ ಕುಮಾರ್ ಅವರ ಸೇವೆ ಸ್ಮರಣೀಯ. ದೇವಾಲಯದ ಮತ್ತಷ್ಟು ಕೆಲಸಕ್ಕೆ ಸಹಕಾರ ನೀಡುವ ಭರವಸೆ ನೀಡಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದರು.

ಮುಖಂಡ ಎಸ್.ವಿಜಯ್ ಕುಮಾರ್ ಮಾತನಾಡಿ ಮೊದಲಿನಿಂದ ಆಚಾರ ವಿಚಾರದಲ್ಲಿ ಶ್ರದ್ದಾ ಭಕ್ತಿಯಲ್ಲಿ ನಡೆದು ಬಂದ ಈ ಪುರಾತನ ದೇವಾಲಯಗಳ ಜಾತ್ಯಾತೀತೆ ಸಾರಿದೆ. ಊರಿನಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಈ ದೇವರ ಅನುಗ್ರಹ ಇದೆ ಎಂಬ ನಂಬಿಕೆ ಗಟ್ಟಿಯಾಗಿದೆ. ಈ ಹಿನ್ನಲೆ ದೇವಾಲಯ ಜೀರ್ಣೋದ್ಧಾರಕ್ಕೆ ಆಯ್ಕೆ ಮಾಡಿದ ಭಕ್ತರಿಂದ ಮಾತ್ರ ದೇಣಿಗೆ ಸಂಗ್ರಹಿಸಲಾಗಿದೆ. ಬಾಲಾಜಿ ಕುಮಾರ್ ಅವರ ಸಹಕಾರಕ್ಕೆ ಇಡೀ ಗ್ರಾಮವೇ ಧನ್ಯವಾದ ಸಮರ್ಪಿಸಿದೆ ಎಂದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!