ಗುರುವಂದನಾ ಹಾಗೂ ಗುರುಸ್ವಾಮಿ ಜಿ.ಎಸ್.ರೇಣುಕಾಪ್ರಸಾದ್ ಅವರಿಗೆ ಜನಸೇವಾ ಶಬರೀಶ ಪ್ರಶಸ್ತಿ ಪುರಸ್ಕಾರಕ್ಕೆ ಸಕಲ ಸಿದ್ಧತೆ.

ಗುಬ್ಬಿ: ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಹಾಗೂ ಮಣಿಕಂಠ ಕಲಾ ಸಂಘ ಸಹಯೋಗದಲ್ಲಿ ಇದೇ ತಿಂಗಳ 16 ರಂದು ಗುರುವಂದನಾ ಹಾಗೂ ಜನಸೇವಾ ಶಬರೀಶ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎಂದು ಮಣಿಕಂಠ ಕಲಾ ಸಂಘ ನಿರ್ದೇಶಕ ಪ್ರಹ್ಲಾದ್ ಹಾಗೂ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಶಿ ಜಂಟಿ ಹೇಳಿಕೆ ನೀಡಿದರು.

ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 33 ವರ್ಷದಿಂದ ಗುರುಸ್ವಾಮಿಗಳಾಗಿ ಎಲ್ಲಾ ಭಕ್ತರಿಗೆ ಮಾಲೆ ಧರಿಸಿ ದೀಕ್ಷೆ ಮೂಲಕ ಅಯ್ಯಪ್ಪಸ್ವಾಮಿ ಶಬರಿ ಗಿರಿ ದರ್ಶನ ಮಾಡಿಸುತ್ತಾ ಧರ್ಮ ನಿಷ್ಠೆ ತೋರಿ 51 ಬಾರಿ ಶಬರಿಗಿರಿ ಯಾತ್ರೆ ಮಾಡಿದ ಜಿ.ಆರ್.ರೇಣುಕಾಪ್ರಸಾದ್ ಅವರಿಗೆ ಜನಸೇವಾ ಶಬರೀಶ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಇರುಮುಡಿ ಹೋಮಗಳು, ಅನೇಕ ಉತ್ಸವಗಳು ಸಂಗೋಪವಾಗಿ ನಡೆಸಿದ ಗುರುಸ್ವಾಮಿ ರೇಣುಕಾಪ್ರಸಾದ್ ಅವರು ಕಳೆದ 15 ವರ್ಷದ ಹಿಂದೆ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೂ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸೇವೆ ಗುರುತಿಸಿ ಮಣಿಕಂಠ ಕಲಾ ಸಂಘ ಹಾಗೂ ಯಶ್ ಅಭಿಮಾನಿಗಳ ಸಂಘ ಈ ಗೌರವ ಸಮರ್ಪಣೆ ಮಾಡಲಿದೆ ಎಂದು ತಿಳಿಸಿದರು.

ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿ ಇದೇ ತಿಂಗಳ 16 ರಂದು ಬೆಳಿಗ್ಗೆ 11 ಕ್ಕೆ ನಡೆಯುವ ಈ ಧಾರ್ಮಿಕ ಸಮಾರಂಭಕ್ಕೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳು, ತೆವಡೆಹಳ್ಳಿ ಗದ್ದುಗೆ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು ಹಾಗೂ ಕೋಡಿಹಳ್ಳಿ ಮಠದ ಶ್ರೀ ಬಸವ ಬೃಂಗೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸತೀಶ್ ಶಿವಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಹ್ಲಾದ್ ತಿಳಿಸಿದರು.

ಯಶ್ ಅಭಿಮಾನಿಗಳು ಕಳೆದ ಮೂರು ವರ್ಷದಿಂದ ಹತ್ತು ಹಲವು ಸೇವಾ ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಸಾಮಾಜಿಕ ಕಾರ್ಯ ಜೊತೆಗೆ ಧಾರ್ಮಿಕ ಕಾರ್ಯಗಳಿಗೂ ಒತ್ತು ನೀಡಿ ದೇವಾಲಯಗಳಿಗೆ ಬಣ್ಣದ ಕೆಲಸ ಮಾಡಿಸುವುದು, ಕಲ್ಯಾಣಿ ಪುಷ್ಕರಣಿಗಳ ಸ್ವಚ್ಚತೆ, ಅನ್ನದಾನ ಹೀಗೆ ಹಲವು ಕಾರ್ಯ ಮಾಡಿದ್ದೇವೆ ಎಂದು ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಶಿ ವಿವರಿಸಿದರು.

ಈ ಸಂದರ್ಭದಲ್ಲಿ ಮಣಿಕಂಠ ಕಲಾ ಸಂಘದ ಅಧ್ಯಕ್ಷ ರಾಜಣ್ಣ, ಸದಸ್ಯರಾದ ಬ್ಯಾಟರಾಯಪ್ಪ, ಜಿ.ಡಿ.ಮೋಹನ್, ಜಗದೀಶ್, ಮಂಜುನಾಥ್, ದಿನಕರ್, ಮುರುಳಿ, ನಾಗರಾಜ್, ಯಶ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಣಿಕಂಠ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!