ದೇವಲಕೆರೆ ಕೆರೆ ತುಂಬಿ ಹರಿಯುತ್ತಿರುವ ಕೋಡಿಯಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಪೂಜೆ ಪೂಜಾ ಸಲ್ಲಿಸಿ ರಂದ್ರ ಸರಿಪಡಿಸುವಂತೆ ಅಧಿಕಾರಿಗಳಿಗೆ ಮಾತನಾಡಿದರು
ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ದೇವಲಕೆರೆ ಗ್ರಾಮದ ಹನುಮಂತ ದೇವರ ಕೆರೆ 41 ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಬಿದ್ದಿರುವುದಕ್ಕೆ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಗಂಗಾ ಪೂಜೆಯನ್ನು ಮಾಡಿದರು ನಂತರ ಮಾತನಾಡಿದ ಅವರು ಹಲವು ದಶಕಗಳ ನಂತರ ಕೆರೆಕೋಡಿ ಬಿದ್ದಿರುವುದು ಸಂತಸ ತಂದಿದೆ. ಕೆರೆಯ ಮಧ್ಯಭಾಗದಲ್ಲಿ ರಂಧ್ರ ಬಿದ್ದು ನೀರು ಪೋಲಾಗುತ್ತಿರುವುದನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಫೋನಿನ ಮೂಲಕ ಮಾತನಾಡಿ ರಂದ್ರ ಮುಚ್ಚಿಸುವಂತೆ ಸೂಚಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಜೀವ ರೆಡ್ಡಿ ಆದಿಲಕ್ಷ್ಮಿ ನರಸಿಂಹ ನಾಯಕ ಮುಖಂಡರುಗಳಾದ ಪಾಳೇಗಾರ ಲೋಕೇಶ್ ಅಜಯ್ ಕುಮಾರ್ ನಾರಾಯಣ ರೆಡ್ಡಿ ಕರೇಗೌಡ ಹೊನ್ನೂರಪ್ಪ ಕೆಪಿ ಜೀವಿಕ ಹನುಮಂತ್ರಾಯ ಮುಂತಾದವರು ಭಾಗವಹಿಸಿದ್ದರು