ತುಮಕೂರು: ಮದಕರಿ ನಾಯಕ ಜಯಂತಿ ಆಚರಣೆ ಭಾವಚಿತ್ರಕ್ಕೆ ಪುಷ್ಪ ನಮನ

ತುಮಕೂರು ನಗರದ ಬಿಜಿಎಸ್ ವೃತ್ತದಲ್ಲಿರುವ ನಾಗರಕಟ್ಟೆ ದೇವಸ್ಥಾನದಲ್ಲಿ ಮದಕರಿ ನಾಯಕರ ಜಯಂತಿಯನ್ನು ಆಚರಿಸಿ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು

ಈ ವೇಳೆ ಮಾತನಾಡಿದ ಜಿಲ್ಲಾ ಎಸ್.ಟಿ ಮೊರ್ಚಾ ಕಾರ್ಯದರ್ಶಿ ರಾಕೇಶ್ ರವರು ಏಷ್ಯಾದಲ್ಲಿ ಅತ್ಯಂತ ಬಲಿಷ್ಠ ಕೋಟೆ ಕಟ್ಟಿ ದಕ್ಷಿಣ ಭಾರತದಲ್ಲಿ ಅದಮ್ಯ ಸಾಹಸ ಶೌರ್ಯ ಪರಾಕ್ರಮ ಮತ್ತು ಸ್ವಾಭಿಮಾನಿಯಾಗಿ ಬಾಳಿದಂತಹ ಏಕೈಕ ರಾಜ ಅದು ಮದಕರಿ ನಾಯಕ ಎಂದು ಹೇಳಿದರು

ವಾಲ್ಮೀಕಿ ಜಯಂತಿ ರಜೆಯ ಜೊತೆಗೆ 3.5 ಇಂದ 7%ಗೆ ಮೀಸಲಾತಿಯನ್ನು ಹೆಚ್ಚಿಸಿದ ಯಡಿಯೂರಪ್ಪ ಹಾಗೊ ಬೋಮ್ಮಯಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಬಿಜೆಪಿ ನಗರ S.T ಮೋರ್ಚಾ ಪ್ರಧಾನ ಕಾರ್ಯದರ್ಶಿ ದಯಾನಂದ ಮಾತನಾಡಿ ಸರ್ಕಾರ ನೀಡಿರುವ ಮೀಸಲಾತಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ಸಮಾಜ ವಿದ್ಯಾವಂತ ಹಾಗೊ ಸುಶಿಕ್ಷಿತರಾಗಿ ಜಾಗೃತಗೊಂಡು ಒಗ್ಗಟ್ಟಾಗಿರಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಂಜುನಾಥ್ ಪವನ್ ಸಣ್ಣ ರಂಗಯ್ಯ ದೀಕ್ಷಿತ್ ಗೋಪಾಲ್ ಹಾಗೊ ಮುಖಂಡರುಗಳಿದ್ದರು….

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!