ಕುಣಿಗಲ್ : ಕಳೆದ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಮನೆಯಿಂದ್ದಾಗಿ ಅಡಿಕೆ, ತೆಂಗು, ಬಾಳೇ ತೋಟಗಳು ಜಾಲಾವೃತಗೊಂಡಿವೆ, ನಾಗಿನಿ ನದಿ, ಅಪಾಯ ಮಟ್ಟ ಮೀರಿ ಹರಿಯುತ್ತಿದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ನೀರು ಪಾಲಾಗಿದೆ, ಇಡೀ ರಾತ್ರಿ ನಿದ್ರೆ ಇಲ್ಲದೆ, ಮನೆಯವರು ನೀರು ಹೊರ ಹಾಕುವಂತ ಕೆಲಸದಲ್ಲಿ ನಿರಂತರಾಗಿದ್ದು, ಜನ ಜೀವನ ಅಸ್ತವ್ಯಸ್ಥದಿಂದ ಕೂಡಿದೆ,
ಗುರುವಾರ ರಾತ್ರಿ 9 ಗಂಟೆಗೆ ಗುಡುಗು ಸಿಡಿಲಿನೊಂದಿಗೆ ಪ್ರಾರಂಭವಾದ ಮಳೆ ಬೆಳಗಿನ ಜಾವ ಮೂರು ಗಂಟೆಯ ವರೆಗೂ ಧಾರಾಕಾರವಾಗಿ ಸುರಿಯಿತು, ಭಾರಿ ಮಳೆಯಿಂದ್ದಾಗಿ ಕಸಬಾ ಹೋಬಳಿ ಬೋರಲಿಂಗನಪಾಳ್ಯ ಗ್ರಾಮದ ಚಂದ್ರನಾಯ್ಕ್ ಅವರ ಮನೆಗೆ ನೀರು ನುಗ್ಗಿ ಜೀವನಕ್ಕಾಗಿ ಇಟ್ಟಿದ ಎಂಟು ಚೀಲ ರಾಗಿ ಸೇರಿದಂತೆ ದವಸ ಧಾನ್ಯಗಳು ನೀರು ಪಾಲಾಗಿದೆ,
ಕುಂಭದ್ರೋಣ ಮಳೆ ಜವಾವೃತಗೊಂಡ ತೋಟ : ನೆನ್ನೆ ರಾತ್ರಿ ಸುರಿದ ಕುಂಭದ್ರೋಣ ಮಳೆ ಹಾಗೂ ಹೇಮಾವತಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿರುವ ಹಿನ್ನಲೆ ಕುಣಿಗಲ್ ದೊಡ್ಡಕೆರೆ ತುಂಬಿ ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಡಲಾಗುತ್ತಿದೆ, ಇದರಿಂದ್ದಾಗಿ ದೊಡ್ಡಕೆರೆಯ ಅಚ್ಚುಕಟ್ಟು ಪ್ರದೇಶದ ಅಕ್ಕಪಕ್ಕದ ಜಮೀನಿಗಳು ಹಾಗೂ ತೋಟಗಳು ಜಲಾವೃತಗೊಂಡು ಅಡಿಕೆ, ತೆಂಗು, ಬಾಳೇ, ಮೊದಲಾದ ವಾಣಿಜ್ಯ ಬೆಳೆಗಳು ಹಾಳಾಗಿವೆ, ನಾಗಿನಿ ನದಿ ಮೈ ದುಂಬಿ ಹರಿಯುತ್ತಿದೆ, ಮಲ್ಲಿಪಾಳ್ಯ ಹಾಗೂ ಬೋರಲಿಂಗನಪಾಳ್ಯ ಗ್ರಾಮದ ಸ್ಮಶಾಣಗಳು ನೀರಿನಿಂದ ಜಲಾವೃತಗೊಂಡಿದೆ,
ಅಡಿಕೆ, ತೆಂಗಿಗೂ ಪರಿಹಾರ ನೀಡಿ : ಸರ್ಕಾರ ಹೂ, ಹಣ್ಣು, ತರಕಾರಿ ಬೆಳೆಗಳಿಗೆ ಪರಿಹಾರ ನೀಡುತ್ತಿದೆ ಆದರೆ ತೋಟಗಾರಿಕೆ ಬೆಳೆಯಾದ ತೆಂಗು ಹಾಗೂ ಅಡಿಕೆಗೆ ಪರಿಹಾರ ನೀಡುತ್ತಿಲ್ಲ, ಒಂದು ಚೀಲಗೊಬ್ಬರ 1200 ರೂ ಆಗಿದೆ, ಐದು ಆರು ಲಕ್ಷ ಖರ್ಚು ಮಾಡಿ ಅಡಿಕೆ ತೆಂಗು ಬೆಳೆದಿದ್ದೇವೆ, ಮೂರು, ನಾಲ್ಕು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಸುಮಾರು ಎರಡು ಸಾವಿರ ಅಧಿಕ ಅಡಿಕೆ ಬೆಳೆ ಹಾಳಾಗಿದೆ, ಈ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಿ ರೈತರನ್ನು ತೋಟಗಾರಿಕೆ ಬೆಳೆ ರೈತರನ್ನು ಉಳಿಸಬೇಕು ಎಂದು ಎಂದು ಪ್ರಗತಿ ಪರ ರೈತರಾದ ಕೃಷ್ಣಪ್ಪ(ಕಟ್ಟಿ) ನಿಂಗಪ್ಪ ತಿಳಿಸಿದರೇ ಮತ್ತೋಬ್ಬ ರೈತ ಬಿಳಿದೇವಾಲಯ ರವಿ ಮಾತನಾಡಿ ತೊರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಾರಣ ನಮ್ಮ ಜಮೀನಿಗುಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ ಎಂದು ತಮ್ಮ ನೀವನ್ನು ಹೋಳಿಕೊಂಡರು, ಈ ಸಂಬಂಧ ತಾಲೂಕು ಆಡಳಿತ ಕ್ರಮಕೈಗೊಂಡು ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು,