ಪ್ರತಿ ಮನೆ ಮೇಲೆ ಕನ್ನಡ ಬಾವುಟ ಹಾರಿಸಿ ನಾಡ ಪ್ರೇಮ ಪ್ರದರ್ಶಿಸಿ : ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಕರೆ

ಗುಬ್ಬಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷ ಮೂಲಕ ಕರೆ ನೀಡಿದ ಕನ್ನಡ ಬಾವುಟವನ್ನು ಪ್ರತಿ ಮನೆ ಮೇಲೆ ಹಾರಿಸುವ ಮೂಲಕ ನಾಡ ಪ್ರೇಮವನ್ನು ಪ್ರದರ್ಶಿಸಿ ಎಂದು ತಾಲ್ಲೂಕಿನ ಜನತೆಗೆ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಕರೆ ನೀಡಿದರು.

ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಬೆಟ್ಟದಹಳ್ಳಿ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯರಾದ ಬಿ.ಆರ್.ಬಸವರಾಜು ಅವರ ನೇತೃತ್ವದಲ್ಲಿ ಹಲವಾರು ಮುಖಂಡರು ಜೆಡಿಎಸ್ ಸೇರ್ಪಡೆಗೊಂಡ ಹಿನ್ನಲೆ ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಅವರು ಜೆಡಿಎಸ್ ಪಕ್ಷ ಪ್ರಾದೇಶಿಕ ಎಂದೆನಿಸಿ ನಾಡು ನುಡಿ ಬಗ್ಗೆ ವಿಶೇಷ ಕಾಳಜಿವಹಿಸಿದೆ. ಈ ನಿಟ್ಟಿನಲ್ಲಿ ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಕರೆ ನೀಡಿ ಭಾಷಾಭಿಮಾನ ಮತ್ತೊಮ್ಮೆ ವ್ಯಕ್ತಪಡಿಸಿದೆ ಎಂದರು.

ಹಿಂದಿ ಹೇರಿಕೆ ಬಗ್ಗೆ ಕೆಲ ದಿನಗಳ ಹಿಂದೆ ಹೋರಾಟವನ್ನೇ ಹಮ್ಮಿಕೊಂಡ ಜೆಡಿಎಸ್ ಕನ್ನಡ ಮಾತೃ ಭಾಷೆ ಮೇಲೆ ವಿಶೇಷ ಕಾಳಜಿ ವಹಿಸಿದೆ. ಪಂಚರತ್ನ ಯೋಜನೆಯಲ್ಲಿ ಮಾತೃ ಶಿಕ್ಷಣಕ್ಕೆ ಒತ್ತು ನೀಡಿದೆ. ಮತ್ತೊಂದು ವಿಶೇಷವಾಗಿ ಸರ್ಕಾರಿ ಶಾಲೆಯಲ್ಲೇ ಕೆಜಿ ಶಿಕ್ಷಣದಿಂದ ಪಿಎಚ್ ಡಿ ಪದವಿ ವರೆಗೆ ಉಚಿತ ಶಿಕ್ಷಣ ನೀಡುವ ಮಹತ್ತರ ಯೋಜನೆ ರೂಪಿಸಿಕೊಂಡಿದೆ. ಈ ಹಿನ್ನಲೆ ಜೆಡಿಎಸ್ ಗೆ ಅಧಿಕಾರ ತರುವಲ್ಲಿ ಕಾರ್ಯಕರ್ತರ ಪಡೆ ಹುಮ್ಮಸ್ಸಲಿದೆ. ಗುಬ್ಬಿ ಕ್ಷೇತ್ರದಲ್ಲಿ ಸಹ ಕುಮಾರಣ್ಣ ಅವರ ಮಹತ್ತರ ಯೋಜನೆ ಒಪ್ಪಿ ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್ ನತ್ತ ಬರುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬಿ.ಆರ್.ಬಸವರಾಜು ನೇತೃತ್ವದಲ್ಲಿ ಸಿದ್ದೇಶ್, ಗಂಗಣ್ಣ, ಮಧುಸೂದನ್, ಸಂತೋಷ್, ಯತೀಶ್, ಬಸವರಾಜು, ಗಂಗಾಧರ್, ಜಗದೀಶ್ ಸೇರ್ಪಡೆಗೊಂಡರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!