ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ತಹಶೀಲ್ದಾರ್ ನಹಿದಾ ಜಮ್ ಜಮ್ .

.

ಕೊರಟಗೆರೆ :- ತಾಲ್ಲೂಕಿನಕಸಬಾ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನೇ ಪಾಳ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೂ ಪಿಂಚಣಿ ಕಣದ ಒಂದೇ ಗ್ರಾಮದ25ವೃದ್ಧರಿಗೆ ಸ್ಥಳದಲ್ಲಿಯೇ ಪಿಂಚಣಿ ಪತ್ರ ಮಂಜೂರಾತಿ ಸ್ಥಳೀಯ ಸಾರ್ವಜನಿಕರ ಹತ್ತಾರು ಸಮಸ್ಯೆಗಳಿಗೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಮುಖೇನ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕೆಲಸ ಮಾಡಿದರು ..

ಕೊರಟಗೆರೆ: ಮೂರು ವರ್ಷಗಳ ಹಿಂದೆ ಶಾಲೆಗೆ ಕಾಂಪೌಂಡ್, ಶೌಚಾಲಯ ಹಾಗೂ ಅಡುಗೆ ಕೋಣೆ ನಿರ್ಮಿಸುವಂತೆ ಮೂರು 3ವರ್ಷಗಳ ಹಿಂದೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿವರೆಗೆ ಯಾವುದೇ ಕೆಲಸವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಚ್. ಹರೀಶ್ ಬಾಬು ಆರೋಪ ಮಾಡಿದರು.

ತಾಲ್ಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕರ‍್ಯಕ್ರಮದಲ್ಲಿ ಬೋಡಬಂಡೇನಹಳ್ಳಿ ರ‍್ಕಾರಿ ಶಾಲೆ ಕಾಂಪೌಂಡ್ ಇತರೆ ಸಮಸ್ಯೆಗಳ ಬಗ್ಗೆ ರ‍್ಚೆ ವೇಳೆ ಅವರು ಮಾತನಾಡಿದರು.
೧ ರಿಂದ ೭ ನೇ ತರಗತಿ ವರೆಗೆ ೬೫ ಜನ ವಿದ್ಯರ‍್ಥಿಗಳು ಶಾಲೆಯಲ್ಲಿ ಈಗ ಕಲಿಕೆಯಲ್ಲಿದ್ದಾರೆ. ಶೌಚಾಲಯ ಸೇರಿದಂತೆ ಮೂಲಭೂತ ಸೌರ‍್ಯ ಇಲ್ಲದ ಕಾರಣದಿಂದಾಗಿ ಅನೇಕ ವಿದ್ಯರ‍್ಥಿಗಳು ಬೇರೆ ಶಾಲೆಗೆ ದಾಖಲಾಗಿದ್ದಾರೆ. ಇದರಿಂದ ನಮ್ಮೂರಿನ ರ‍್ಕಾರಿ ಶಾಲೆಯ ದಾಖಲಾತಿ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಶೀಘ್ರವಾಗಿ ಮೂಲಭೂತ ಸೌರ‍್ಯ ಒದಗಿಸದಿದ್ದರೆ ಇನ್ನಷ್ಟು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲು ಮಾಡಲು ಮುಂದಾಗುತ್ತಾರೆ ಆಗ ರ‍್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ನರ‍್ಮಾಣವಾಗಲಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ನರೇಗ ಯೋಜನೆಯಡಿ ಕಾಮಗಾರಿ ಮಾಡಲು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ಆರೋಪ ಮಾಡಿದರು.
ನಮ್ಮ ಕುರಿ ರೊಪ್ಪದಲ್ಲಿ ಕೂಡಿದ್ದ ೧೩ ಕುರಿಗಳು ಕಳವಾಗಿ ಮೂರು ತಿಂಗಳು ಕಳೆದಿದೆ. ಪೊಲೀಸ್ ಇಲಾಖೆಗೆ ದೂರು ನಿಡಲಾಗಿದೆ. ಇಲ್ಲಿವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ನಮ್ಮ ಕುಟುಂಬ ಈಗ ಬೀದಿಗೆ ಬಿದ್ದಿದೆ ಎಂದು ಬೋಡಬಂಡೇನಹಳ್ಳಿ ಗ್ರಾಮದ ಬಿ.ಎನ್.ರಮೇಶ್ ತಹಶೀಲ್ದಾರ್ ನಹಿದಾ ಜಮ್ ಜಮ್ ಎದುರು ಅಲವತ್ತುಕೊಂಡರು.
ಕರ‍್ಯಕ್ರಮದಲ್ಲಿ ೨೫ ನೂತನ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು. ವಿವಿಧ ಇಲಾಖೆಗೆ ಸಂಬಂಧಿಸಿದ ೪೭ ಅರ್ಜಿಗಳನ್ನು ಸ್ವೀಕೃತವಾಗಿದ್ದವು. ತಹಶೀಲ್ದಾರ್ ನಹಿದಾ ಜಮ್ ಜಮ್, ತಾ.ಪಂ. ಇಓ ಡಾ. ಡಿ.ದೊಡ್ಡಸಿದ್ದಯ್ಯ, ಕೃಷಿ ಇಲಾಖೆ ಎಚ್.ನಾಗರಾಜ, ಅರಣ್ಯ ಇಲಾಖೆ ಎಚ್.ಎಂ.ಸುರೇಶ್, ಗ್ರಾಮೀಣಭಿವೃದ್ಧಿ ಇಲಾಖೆ ಎಇಇ ರವಿಕುಮಾರ್, ಪಶು ಇಲಾಖೆ ಸಿದ್ದನಗೌಡ ಇತರರು ಇದ್ದರು.

ತಡವಾಗಿ ಬಂದ ಪಿಡಿಓ: ಸರ‍್ವಜನಿಕ ವಲಯದಲ್ಲಿ ರ‍್ಚೆ
ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕರ‍್ಯಕ್ರಮಕ್ಕೆ ಹಂಚಿಹಳ್ಳಿ ಗ್ರಾ.ಪಂ. ಪಿಡಿಓ ಮಂಜುಳಾ ಅವರು ತಡವಾಗಿ ಬಂದುದರ ಬಗ್ಗೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದು ಸರ‍್ವಜನಿಕ ವಲಯದಲ್ಲಿ ರ‍್ಚೆಗೀಡಾಯಿತು. ರ‍್ಕಾರಿ ಕರ‍್ಯಕ್ರಮಕ್ಕೆ ಪಿಡಿಓ ಅವರು ತಡವಾಗಿ ಬರುವ ಮೂಲಕ ನರ‍್ಲಕ್ಷ ತೋರಿದ್ದಾರೆ. ಈ ಹಿಂದೆ ಜಟ್ಟಿಅಗ್ರಹಾರ ಗ್ರಾ.ಪಂ. ವ್ಯಾಪ್ತಿಯ ನವಿಲುಕುರಿಕೆಯಲ್ಲಿ ಕಳೆದ ತಿಂಗಳು ನಡೆದ ಕರ‍್ಯಕ್ರಮಕ್ಕೂ ಆಗ ಅಗ್ರಹಾರ ಪಂಚಾಯಿತಿ ಪಿಡಿಓ ಆಗಿದ್ದ ಮಂಜುಳ ಅವರು ತಡವಾಗಿ ಬರುವ ಮೂಲಕ ನರ‍್ಲಕ್ಷ ತೋರಿದ್ದರು ಎಂಬೆಲ್ಲಾ ಮಾತುಗಳು ಕೇಳಿ ಬಂದವು. ಹಾಗೂ ಹಂಚಿಹಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ರಂಗನಾಥ್, ಸದಸ್ಯ ರಾಜಶೇಖರ್ ಹೊರತುಪಡಿಸಿ ಅಧ್ಯಕ್ಷರು ಹಾಗೂ ಉಳಿದ ಸದಸ್ಯರ ಗೈರು ಹಾಜರಿ ಬಗ್ಗೆಯೂ ಸರ‍್ವಜನಿಕ ವಲಯದಲ್ಲಿ ರ‍್ಚೆಯಾದವು.

:
ಕೊರಟಗೆರೆ ತಾಲ್ಲೂಕು ದಿನ್ನೆಪಾಳ್ಯದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೆರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೋ ಪೂಜೆ ಸಲ್ಲಿಸಿದರು .

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!