ಮಹಿಳೆ ಏಕಾಂಗಿ ಧರಣಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ

ಪಾವಗಡ ತಾಲ್ಲೂಕು ಮಂಗಳವಾಡ ಗ್ರಾಮ ಪಂಚಾಯಿತಿ ಮುಂದೆ ಪರಿಶಿಷ್ಟ ಪಂಗಡ ನಾಯಕ ಜನಾಂಗದ ಮಂಜಮ್ಮ ಎಂಬುವವರು ಅನಿರ್ದಿಷ್ಟಾವಧಿ ದರಣಿಸತ್ಯಾಗ್ರಹ ಹಮ್ಮಿಕೊಂಡಿದ್ದು ಈಕೆಗೆ ಸೇರಿದ ನಿವೇಶನದಲ್ಲಿ ಶ್ರೀದೇವಿ ಕೋಂ ಶ್ರೀನಿವಾಸ ಗುಪ್ತ ಎಂಬುವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ . ನಮ್ಮ ಒತ್ತುವರಿ ನಿವೇಶವನ್ನು ಬಿಡಿಸಿ ಕೊಡಬೇಕೆಂದು ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಕಛೇರಿಗೆ ಅಲೆದಾಡಿಸಿ ಇನ್ನೂ ನಿವೇಶನ ತೆರವು ಮಾಡಿಸದೆ ಇರುವುದರಿಂದ ಮಹಿಳೆಗೆ ಅನ್ಯಾಯವಾಗುತ್ತಿದೆ ಈ ಮಹಿಳೆಗೆ ಸರ್ಕಾರದ ವತಿಯಿಂದ 2010 ರಲ್ಲಿ ಆಶ್ರಯ ಮನೆ ಮಂಜೂರಾಗಿದ್ದು ಮಂಜೂರಾದ ಮನೆಯನ್ನು ನಿರ್ಮಿಸಲು ಬಿಡದೇ ಮನೆ ಮಂಜೂರು ರದ್ದಾಗುವಂತೆಮಾಡಿ ಸದರಿ ಮಂಜಮ್ಮ ರವರ ನಿವೇಶನದಲ್ಲಿ ಜಾಗದಲ್ಲಿ ಕೆಲವು ಅಡಿಗಳ ಜಾಗವನ್ನು ಹೊತ್ತುವರಿ ಮಾಡಿ ಕಟ್ಟಡವನ್ನು ನಿರ್ಮಾಣ ಮಾಡಿಕೊಂಡು ಪರಿಶಿಷ್ಟ ಪಂಗಡದ ನಾಯಕ ಜನಾಂಗದ ಮಂಜಮ್ಮ ನವರಿಗೆ ತೊಂದರೆ ಕೊಟ್ಟಿರುವ ಶ್ರೀನಿವಾಸ ಗುಪ್ತ ಹಾಗೂ ಆತನ ಪತ್ನಿ ಶ್ರೀದೇವಿ ಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಂಡು ಒತ್ತುವರಿ ಜಾಗವನ್ನು ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಮಂಜಮ್ಮ ಎಂಬುವವರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!