ಪಾವಗಡ ತಾಲೂಕಿನ ಜನತೆ ಸತತ ಬರಗಾಲದಿಂದ ನೊಂದಿದ್ದರು ಆದರೆ ಈ ವರ್ಷ ವರುಣನ ಕೃಪೆಯಿಂದ ಪಾವಗಡ ತಾಲೂಕಿನ ಕೆರೆಕಟ್ಟೆಗಳ ತುಂಬಿ ಪಾವಗಡ ತಾಲೂಕು ಮಲೆನಾಡಾಗಿ ಮಾರ್ಪಟ್ಟಿದೆ . ತಾಲೂಕಿನಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಪಾವಗಡ ತಾಲೂಕಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ರಸ್ತೆಗಳು ಹಾಳಾಗಿದ್ದು ಹೆಚ್ಚು ಮಳೆ ಆಗುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಹಾಗೂ ಹಳ್ಳಕೊಳ್ಳಗಳು ಕೆರೆಕಟ್ಟೆಗಳು ತುಂಬಿರುವ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆಗಳು ಹಾಳಾಗಿದ್ದು ತಾಲೂಕಿನಲ್ಲಿ ಸತತವಾಗಿ ಎರಡು ಮೂರು ತಿಂಗಳಿಂದ ಮಳೆ ಸುರಿಯುತ್ತಿದ್ದರು ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಇಲಾಖೆಗಳಿಗೆ ಯಾವುದೇ ಅನುದಾನ ನೀಡದಿರುವುದರಿಂದ ರಸ್ತೆಗಳನ್ನು ಸರಿಪಡಿಸಲಾಗದೆ ಅಧಿಕಾರಿಗಳು ನಿಸ್ಸಹಾಯಕರಾಗಿದ್ದಾರೆ
ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ತಾಲೂಕಿನಲ್ಲಿ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಅತಿ ಜರುರಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾಗಿ ಸಾರ್ವಜನಿಕರ ಒತ್ತಾಯವಾಗಿದೆ