ಕಾಂಗ್ರೆಸ್ ಸಿದ್ದಾಂತ ಗಾಳಿಗೆ ತೂರಿದ ಎಂ ಎಲ್ ಸಿ ರಾಜೇಂದ್ರ ಸ್ಪಷ್ಟನೆ ನೀಡಬೇಕು : ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಆಗ್ರಹ

ಗುಬ್ಬಿ: ಹತ್ತಾರು ವರ್ಷದಿಂದ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿದ ಮುಖಂಡರು ಕಾರ್ಯಕರ್ತರನ್ನು ಕಡೆಗಣಿಸಿ ಗುಬ್ಬಿ ಶಾಸಕರ ಋಣ ತೀರಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರು ಈ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಆಗ್ರಹಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ವೈಯಕ್ತಿಕ ಋಣಕ್ಕೂ ಪಕ್ಷದ ಸಿದ್ಧಾಂತಕ್ಕೂ ಸಾಕಷ್ಟು ಅಂತರವಿದೆ. ಈ ಹಿಂದೆ ಹಾಗಲವಾಡಿ ಜಿಪಂ ಕ್ಷೇತ್ರದಲ್ಲಿ ಅವರ ಮಾತೃಶ್ರೀ ಅವರ ಗೆಲುವಿಗೆ ಸಹಕರಿಸಿದಕ್ಕೆ ಅಥವಾ ನಿಮ್ಮ ಬದ್ದ ವೈರಿ ಎಂದು ದೇವೇಗೌಡ ಅವರ ಸೋಲಿಸಲು ಸಹಕರಿಸಿದ್ದಕ್ಕೆ ಋಣ ತೀರಿಸಬೇಕೇ ಎಂದು ಪ್ರಶ್ನೆಯ ಸುರಿಮಳೆ ಸುರಿದರು.

ಕಾಂಗ್ರೆಸ್ ಪಕ್ಷ ನಡಾವಳಿ ತಿಳಿದು ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಲು ಗುಬ್ಬಿ ಶಾಸಕರ ಹಿಂದೆ ಓಡಾಡುವುದು ಸರಿಯಲ್ಲ. ಇದಲ್ಲದೆ ವೇದಿಕೆಯಲ್ಲಿ ಗುಬ್ಬಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳುವರು. ಕಾಂಗ್ರೆಸ್ ಟಿಕೆಟ್ ಅವರಿಗೆ ಎನ್ನುವ ಮಾತುಗಳು ಅಸಂಬದ್ಧತೆ ಹೇಳಿಕೆಯಾಗಿದೆ ಎಂದ ಅವರು ಗುಬ್ಬಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ. ಗುರುತರ ಕೆಲಸಗಳು ಎಲ್ಲಿಯೋ ಇಲ್ಲ. ಹಿರಿಯ ರಾಜಕಾರಣಿ ಸಂಸದರ ಬಗ್ಗೆ ಅವಹೇಳನಕಾರಿ ಮಾತನಾಡಿ ತಮ್ಮ ಹರಕು ಬಾಯಿಯ ಪ್ರದರ್ಶನ ಮಾಡಿದ್ದು ಎಲ್ಲರಿಗೂ ತಿಳಿದಿದೆ ಎಂದ ಅವರು ಕಾಂಗ್ರೆಸ್ ಪಕ್ಷ ಆಳ್ವಿಕೆ ಬರುವ ಖಚಿತತೆ ತಿಳಿದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈಗ ಪಕ್ಷ ಸಂಘಟನೆ ನಾನೇ ಮಾಡಬೇಕು ಎಂದು ಹೇಳಿ ಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ರೆಡಿ ಇರುವ ಕೇಕ್ ಕತ್ತರಿಸಲು ಇಲ್ಲಿಗೆ ಬರುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಹಲವಾರು ವರ್ಷದಿಂದ ಕಾಂಗ್ರೆಸ್ ಕಟ್ಟಿದವರನ್ನು ಕಡೆಗಣಿಸಿದ್ದು ತರವಲ್ಲ. ಎಂ ಎಲ್ ಸಿ ರಾಜೇಂದ್ರ ಅವರು ಶಾಸಕರ ಹಿಂಬಾಲಕರ ರೀತಿ ಓಡಾಡುತ್ತಿದ್ದಾರೆ. ಇನ್ನೂ ಪಕ್ಷಕ್ಕೆ ಬಾರದ ಗುಬ್ಬಿ ಶಾಸಕರ ಬಗ್ಗೆ ಒಲವು ತೋರುವ ಮುನ್ನ ಪಕ್ಷದ ಸಿದ್ಧಾಂತ ತಿಳಿದುಕೊಳ್ಳಬೇಕು. ಗುಬ್ಬಿ ಕ್ಷೇತ್ರಕ್ಕೆ ಯಾವಾಗಲೂ ಒಮ್ಮೆ ಭೇಟಿ ಕೊಡುವ ರಾಜೇಂದ್ರ ಅವರು ಹತ್ತಾರು ವರ್ಷದಿಂದ ಪಕ್ಷ ಕಟ್ಟಿದವರ ಬಗ್ಗೆ ಗೌರವ ಕೊಡಬೇಕು. ನಿರ್ಲಕ್ಷ್ಯ ತೋರಬಾರದು ಎಂದರು.

ಸರ್ಕಾರದ ಮೀಸಲು ಅನುದಾನವನ್ನು ಗುತ್ತಿಗೆದಾರರು ತರುತ್ತಿದ್ದಾರೆ. ಅದರ ಗುದ್ದಲಿಪೂಜೆ ಮಾಡುವುದೇ ಸಾಧನೆ ಅಲ್ಲ. ಈಗಾಗಲೇ ತಾಲ್ಲೂಕಿನ ಸಾಕಷ್ಟು ರಸ್ತೆಗಳು ಹಾಳಾಗಿವೆ. ಅಧಿಕಾರಿಗಳು ಸಹ ಕೈಗೊಂಬೆಯಾಗಿದ್ದಾರೆ. ಕೇವಲ ಪೂಜೆ ನೋಡುವುದಕ್ಕಿಂತ ಕೆಲಸ ಆರಂಭಿಸಿದ ಬಗ್ಗೆ ಗಮನ ಹರಿಸಬೇಕು. ನಾವು ಮಾಹಿತಿ ತೆಗೆದುಕೊಳ್ಳುತ್ತಿದ್ದೇವೆ. ಕೆಲಸ ಎಲ್ಲೆಲ್ಲಿ ನಡೆದಿಲ್ಲ ಅದರ ಬಗ್ಗೆ ಅಧಿಕಾರಿಗಳು ಉತ್ತರ ನೀಡಬೇಕು ಎಂದರು.

ಕಾಂಗ್ರೆಸ್ ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮತ್ತು ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೇಕಟ್ಟೆ ಜಯಣ್ಣ ಮಾತನಾಡಿ ಗುಬ್ಬಿ ಶಾಸಕರು ಮರು ಆಯ್ಕೆ ಬಯಸಿ ಕಾಂಗ್ರೆಸ್ ಗೆ ಬರುವುದರ ಬಗ್ಗೆ ವಿರೋಧವಿದೆ ಎಂದು ಹೇಳಿಕೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಶ್ರೀನಿವಾಸ್, ಪಪಂ ಸದಸ್ಯ ಮಹಮದ್ ಸಾದಿಕ್, ಜಿ.ವಿ.ಮಂಜುನಾಥ್, ಸಲೀಂಪಾಷ, ಸೌಭಾಗ್ಯಮ್ಮ, ರೂಪಾ, ಜಿ.ಎಂ.ಶಿವಾನಂದ್, ಜಿ.ಎಲ್.ರಂಗನಾಥ್, ಸಿದ್ದೇಶ್, ಹೇಮಂತ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!