ಆಧುನಿಕ ಭಗೀರಥ ಕಾಮೆಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಆಧುನಿಕ ಯುಗದ ಭಗೀರಥ ಎಂದೇ ಕರೆಯುತ್ತಿದ್ದ ಕೆರೆ ಕಾಮೆಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನ ಸುಮಾರು 500 ಸಸಿ ವಿತರಿಸುವುದರ ಮೂಲಕ ಅರ್ಥ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಪರ ಹೋರಾಟಗಾರರು ಹಾಗೂ ಸಮಾಜ ಸೇವಕರಾದ ಭುವನೇಶ್ವರಿ ಅಕ್ಕಮಹಾದೇವಿ ಹೆಚ್.ಎಂ.ಸೇವಾ ಯಾನ.

ಶಿವಮೊಗ್ಗದ ಆಧುನಿಕ ಭಗೀರಥ ಎಂದೇ ಕರೆಯುತ್ತಿದ್ದ ಕೆರೆ ಕಾಮೆಗೌಡರು ಬೆಟ್ಟದಿಂದ ಸಾಕಷ್ಟು ಪ್ರಮಾಣದ ನೀರು ಹರಿದು ಪೋಲಾಗುತ್ತಿರುವುದನ್ನು ಗಮನಿಸಿ ಸ್ವಂತ ಖರ್ಚಿನಲ್ಲೇ ಕೆರೆ ಕಟ್ಟೆಗಳನ್ನು ನಿರ್ಮಿಸಿ ಸಾವಿರಾರು ಜನರಿಗೆ ಉಪಕಾರ ಮಾಡಿರುವಾ ಆಧುನಿಕ ಭಗೀರಥ ಕೆರೆ ಕಾಮೆಗೌಡರ್ ರ ಭಾವಪೂರ್ಣ ಶ್ರದ್ಧಾಂಜಲಿ ಯನ್ನ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ರೈತಪರ ಹೋರಾಟಗಾರರು ಹಾಗೂ ಸಮಾಜ ಸೇವಕರಾದ ಶ್ರೀಮತಿ ಭುವನೇಶ್ವರಿ ಅಕ್ಕಮಹಾದೇವಿ ಹೆಚ್. ಎಂ.ಸೇವಾ ಯಾನ ವತಿಯಿಂದ ಇಂದು ಶಿವಮೊಗ್ಗದಲ್ಲಿ ಸುಮಾರು 500 ಸಸಿಗಳನ್ನು ವಿತರಣೆ ಮಾಡಿ ಗಿಡಗಳನ್ನು ನೆಡುವುದರ ಮುಖಾಂತರ ಕೆರೆ ಕಾಮೆಗೌಡರಿಗೆಯ ವಿಶಿಷ್ಟವಾಗಿ ಗೌರವ ನಮನ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಕೆರೆ ಕಾಮೆಗೌಡರ ಸಮಾಜಮುಖಿ ಚಿಂತನೆಯ ಬಗ್ಗೆ ಜನಪರ ಕಾಳಜಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಅವರನ್ನು ಸ್ಮರಿಸಿದರು. ಅವರು ಹತ್ತಾರು ಕೆರೆಗಳನ್ನು ನಿರ್ಮಿಸಿದ ಕಾರ್ಯ ಶ್ಲಾಘನೀಯ ಎಂದು ನುಡಿನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಾರಿಗಳು ಹಾಗೂ ಆಟೋ ರಿಕ್ಷಾ ಚಾಲಕರು ಪುನೀತ್ ರಾಜಕುಮಾರ.ಅಭಿಮಾನಿ ಬಳಗದವರು ಡಾ! ರಾಜ್ ಕುಮಾರ್ ಅಭಿಮಾನಿಗಳು
ಕಾರ್ಯದಲ್ಲಿ ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!