ಕೊರಟಗೆರೆ ಪಪಂ ಪಿಠೋಪಕರಣ ಜಪ್ತಿಗೆ ಮಧುಗಿರಿ ನ್ಯಾಯಾಲಯ ಆದೇಶ

ಜೆಟ್ಟಿಅಗ್ರಹಾರದ ಇಬ್ಬರು ರೈತರಿಗೆ ೪೮ಲಕ್ಷ ಬಾಕಿ ಉಳಿಸಿದ ಪಪಂ

ಕೊರಟಗೆರೆ ಪಪಂಗೆ ಎಚ್ಚರಿಕೆ ರವಾನಿಸಿದ ಮಧುಗಿರಿಯ ಸಿವಿಲ್ ನ್ಯಾಯಾಲಯ

ಕೊರಟಗೆರೆಯ ನ್ಯಾಯಾಲಯದ ಸಿಬ್ಬಂಧಿಗಳ ಉಪಸ್ಥಿತಿಯಲ್ಲಿ ಪಿಠೋಪಕರಣ ಜಪ್ತಿ

ಪಪಂಯ ಮುಖ್ಯಾಧಿಕಾರಿ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪಿಠೋಪಕರಣ ಜಪ್ತಿ

ನ್ಯಾಯಾಲಯದ ಆದೇಶ ಉಲ್ಲಂಘನೆ ಪರಿಣಾಮ ಪಿಠೋಪಕರಣ ಜಪ್ತಿಗೆ ಆದೇಶ

ಕೊರಟಗೆರೆ:- ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ 2009-10ರಲ್ಲಿ ಜೆಟ್ಟಿಅಗ್ರಹಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿನ ಭೂಪರಿಹಾರವನ್ನು 2018ರಲ್ಲಿ ನ್ಯಾಯಾಲಯದ ಆದೇಶದ ನಂತರವು ನೀಡದಿರುವ ಪರಿಣಾಮ ಪಪಂಯ ಪಿಠೋಪಕರಣ ವಶ ಪಡಿಸಿಕೊಳ್ಳುವಂತೆ ಮಧುಗಿರಿ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿರುವ ಘಟನೆ ಗುರುವಾರ ನಡೆದಿದೆ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಬಸವರಾಜು ಮತ್ತು ನಂದೀಶ್ ಎಂಬ ರೈತರ ಜಮೀನನ್ನು ೨೦೦೯ರಲ್ಲೇ ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ೨೦೧೮ರಲ್ಲೇ ಅಗ್ರಹಾರ ರೈತರಿಗೆ ತಕ್ಷಣ ಭೂಪರಿಹಾರ ನೀಡುವಂತೆ ಕೊರಟಗೆರೆ ಪಪಂಗೆ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.

ಜೆಟ್ಟಿಅಗ್ರಹಾರ ಗ್ರಾಮದ ರೈತ ಬಸವರಾಜು ಮಾತನಾಡಿ ಹೇಮಾವತಿ ನೀರಿನ ಘಟಕ ನಿರ್ಮಾಣಕ್ಕಾಗಿ ೨೦೦೯ರಲ್ಲಿ ನಮ್ಮ ಜಮೀನು ಸ್ವಾಧೀನ ಮಾಡಿದ್ದಾರೆ. ೨೦೧೮ರಲ್ಲಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ನಮಗೇ ಇನ್ನೂ ೪೮ಲಕ್ಷಕ್ಕೂ ಅಧಿಕ ಭೂಪರಿಹಾರ ಬರಬೇಕಿದೆ. ನ್ಯಾಯಾಲಯದ ಆದೇಶವನ್ನು ಪಪಂಯು ಪಾಲನೆ ಮಾಡದಿರುವ ಹಿನ್ನಲೆ ಇಂದು ಪಿಠೋಪಕರಣ ಜಪ್ತಿಗೆ ಆದೇಶ ಮಾಡಲಾಗಿದೆ ಎಂದರು.

:- ಬಸವರಾಜು. ರೈತ. ಜೆಟ್ಟಿಅಗ್ರಹಾರ.

ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನ್‌ರಾದ ಮಂಜುನಾಥ ಮಾತನಾಡಿ ಜೆಟ್ಟಿಅಗ್ರಹಾರದ ಇಬ್ಬರು ರೈತರಿಗೆ ೪೮ಲಕ್ಷಕ್ಕೂ ಅಧಿಕ ಭೂಪರಿಹಾರ ನೀಡಲು ನ್ಯಾಯಾಲಯ ೨೦೧೮ರಲ್ಲೇ ಆದೇಶ ಮಾಡಿದೆ. ರೈತರಿಗೆ ಜಮೀನು ಸ್ವಾಧೀನದ ಪರಿಹಾರ ನೀಡುವಲ್ಲಿ ಕೊರಟಗೆರೆ ಪಪಂ ವಿಳಂಭ ಮಾಡಿದೆ. ಇಂದು ಮಧುಗಿರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪಪಂಯ ಪಿಠೋಪಕರಣವನ್ನು ಜಪ್ತಿ ಮಾಡಿದ್ದೇವೆ ಎಂದು ತಿಳಿಸಿದರು.

:- ಮಂಜುನಾಥ. ಅಮೀನ್. ಸಿವಿಲ್ ನ್ಯಾಯಾಲಯ. ಕೊರಟಗೆರೆ

ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ನ್ಯಾಯಾಲಯದ ಆದೇಶವನ್ನು ಕಾರ್ಯಗತ ಮಾಡುವುದು ಪಪಂ ಅಧಿಕಾರಿಗಳ ಪ್ರಮುಖ ಜವಾಬ್ದಾರಿ. ಪಪಂಯಿAದ ಆದೇಶ ನಿರ್ಲಕ್ಷ ಮಾಡಿರುವ ಪರಿಣಾಮ ಈಗ ಸಮಸ್ಯೆ ಆಗಿದೆ. ನ್ಯಾಯಾಲಯ ಪಿಠೋಪಕರಣ ವಶಕ್ಕೆ ಪಡೆದಿರುವ ಬಗ್ಗೆ ನನಗೇ ಮಾಹಿತಿ ಇಲ್ಲ. ಸರಕಾರದ ಅನುಧಾನ ಮತ್ತು ಪಪಂಯಿAದ ತಕ್ಷಣ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆ ಎಂದರು.
:- ಡಾ.ಜಿ.ಪರಮೇಶ್ವರ್. ಶಾಸಕ. ಕೊರಟಗೆರೆ

ಮಧುಗಿರಿಯ ಘನ ಸಿವಿಲ್ ನ್ಯಾಯಾಲಯವು ೨೦೧೮ರಲ್ಲೇ ಆದೇಶ ಮಾಡಿದೆ. ಕೊರಟಗೆರೆ ಪಪಂ ಮುಖ್ಯಾಧಿಕಾರಿಗೆ ಈ ಹಿಂದೆಯೇ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಕೊರಟಗೆರೆ ಪಪಂಯ ಮುಖ್ಯಾಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಚೇರಿಯ ಪಿಠೋಪಕರಣ ಜಪ್ತಿ ಮಾಡಿ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.

ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನರಾದ ಮಂಜುನಾಥ ಮತ್ತು ಪರಮೇಶ್ವರಯ್ಯ ನೇತೃತ್ವದಲ್ಲಿ ಪಪಂ ಕಚೇರಿಯ ಪಿಠೋಪಕರಣವನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಪಪಂಯ ಮುಖ್ಯಾಧಿಕಾರಿ ಭಾಗ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂಧಿವರ್ಗ ಉಪಸ್ಥಿತರಿದ್ದರು.

ಎನ್.ಮೂರ್ತಿ. ಅಮೋಘ ಟಿವಿ.. ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!