ಮಳೆ ಹಾನಿ ಮಾಹಿತಿಗೆ ಹೆಲ್ಪ್ ಲೈನ್ ತೆರೆಯಲಾಗಿದೆ : ತಹಶೀಲ್ದಾರ್ ಬಿ.ಆರತಿ ಹೇಳಿಕೆ

ಗುಬ್ಬಿ: ತಾಲ್ಲೂಕಿನಲ್ಲಿ ಕೆಲ ದಿನದಲ್ಲಿ 105 ಮನೆಗಳು ಧರಶಾಹಿ ಆಗಿವೆ. ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಸರ್ಕಾರದ ಮಾನದಂಡ ಬಳಸಿ ನೀಡಲಾಗುತ್ತಿದೆ. ಬಾರಿ ಮಳೆಯಿಂದ ಅನಾಹುತಗಳು, ಸಮಸ್ಯೆಗಳನ್ನು ಆಲಿಸಲು ತಾಲ್ಲೂಕು ಆಡಳಿತ ಹೆಲ್ಪ್ ಲೈನ್ ತೆರೆದು ದೂರವಾಣಿ 08131-222234 ನಂಬರ್ ಗೆ ಸಂಪರ್ಕಿಸಲು ಮನವಿ ಮಾಡಿದೆ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆರೆಕಟ್ಟೆಗಳು ಭರ್ತಿಯಾಗಿ ಅಪಾಯದಂಚಿನಲ್ಲಿರುವ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಈಗಾಗಲೇ ಬಿದ್ದ ಮನೆಗಳನ್ನು ಈ ಎ ಬಿ ಸಿ ಕ್ಯಾಟಗರಿ ನಿರ್ಧರಿಸಿ ಪರಿಹಾರ ನೀಡಲಾಗಿದೆ. ಬಾರಿ ಮಳೆ ಹಿನ್ನಲೆ 24/7 ಅವಧಿ ಕೆಲಸ ಮಾಡುವ ಹೆಲ್ಪ್ ಲೈನ್ ಬಳಿಸಿಕೊಳ್ಳಲು ತಿಳಿಸಿದ ಅವರು ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲು ಸೂಕ್ತ ಸಾಧಕರ ಆಯ್ಕೆಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ಕೆಲವು ಕ್ಷೇತ್ರವನ್ನು ಗುರುತಿಸಿ ಗಣ್ಯರ ಆಯ್ಕೆ ನಡೆದಿದೆ. ಈ ಜೊತೆಗೆ ಇದೇ ತಿಂಗಳ 28 ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಹಾಡಲು ಇಚ್ಛಿಸುವವರು ನಿಗದಿತ ಆರು ಕನ್ನಡ ಗೀತೆಗಳನ್ನು ಹಾಡಬೇಕಿದೆ. ಇಚ್ಚೆಯುಳ್ಳವರು ನೋಂದಾಯಿಸಿಕೊಳ್ಳಿ ಎಂದರು.

ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!