ಗ್ರಾಮೀಣಾಭಿವೃದ್ದಿ ಜೊತೆ ಜನರ ಆರೋಗ್ಯ ಕಾಪಾಡುವುದು ಮುಖ್ಯ : ಜಿಪಂ ಅಭಿವೃದ್ದಿ ಉಪ ಕಾರ್ಯದರ್ಶಿ ಅತಿಕ್ ಪಾಷ

.

ಗುಬ್ಬಿ: ಗ್ರಾಮೀಣಾಭಿವೃದ್ದಿ ಜೊತೆಗೆ ಜನರ ಆರೋಗ್ಯ ಕಾಪಾಡಿ ಮಾನವ ಸಂಪನ್ಮೂಲ ಕಾಪಾಡುವ ನಿಟ್ಟಿನಲ್ಲಿ ದೈಹಿಕ ಮಾನಸಿಕ ಆರೋಗ್ಯಕ್ಕೆ ಸರ್ಕಾರ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಿದೆ. ಇದರ ಪ್ರಯೋಜನವನ್ನು ಆರೋಗ್ಯಕರ ಪೈಪೋಟಿಯಲ್ಲಿ ಪಡೆಯಿರಿ ಎಂದು ಜಿಪಂ ಅಭಿವೃದ್ದಿ ಉಪ ಕಾರ್ಯದರ್ಶಿ ಅತಿಕ್ ಪಾಷ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಥಳೀಯವಾಗಿ ನಡೆಯುವ ಕ್ರೀಡೆ ಉತ್ತಮ ವೇದಿಕೆ ಆಗಲಿದೆ. ಗ್ರಾಮೀಣ ಸೊಗಡಿನ ಕಬಡ್ಡಿ ಖೋಖೊ ಆಟವನ್ನು ಮಾತ್ರ ಈ ಬಾರಿ ಅಡಿಸಲಾಗಿದೆ ಎಂದರು.

ಶಾಲಾ ಮಕ್ಕಳಿಗೆ ಕ್ರೀಡೆಯ ಅವಕಾಶ ಶಿಕ್ಷಣ ಇಲಾಖೆ ಆಯೋಜಿಸುತ್ತದೆ. ಆದರೆ ಗ್ರಾಮೀಣ ಜನರಿಗೆ ಈ ಅವಕಾಶ ಕಲ್ಪಿಸಲು ಸರ್ಕಾರ ಈ ವೇದಿಕೆ ಕಲ್ಪಿಸಿದೆ. ಸ್ಪರ್ಧಾತ್ಮಕ ಮನಸ್ಥಿತಿಯಲ್ಲಿ ಆಟವಾಡಿ ಸೋಲು ಗೆಲುವು ನಂತರ ಆಲೋಚಿಸಿ ಎಂದು ಸಲಹೆ ನೀಡಿದ ಅವರು ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಎಂಟು ಲಕ್ಷ ಮಂದಿಗೆ ಅವಕಾಶ ಕಲ್ಪಿಸಿದೆ. ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.

ತಾಪಂ ಇಓ ಶಿವಪ್ರಕಾಶ್ ಮಾತನಾಡಿ ಗ್ರಾಮೀಣ ಭಾಗದ ರೈತಾಪಿ ವರ್ಗದವರಿಗೆ ಈ ಕ್ರೀಡೆ ಉತ್ತಮ ಆರೋಗ್ಯ ಕಲ್ಪಿಸಲಿದೆ. ಪ್ರತಿ ವರ್ಷ ನಡೆಸುವ ಕ್ರೀಡಾಕೂಟ ಉತ್ತಮ ಕ್ರೀಡಾಪಟುಗಳ ತಯಾರಿಕೆಗೂ ಸೂಕ್ತ ವೇದಿಕೆ ಆಗಲಿದೆ. ತಾಲ್ಲೂಕಿನ 34 ಪಂಚಾಯಿತಿ ವ್ಯಾಪ್ತಿಯ ಕ್ರೀಡಾ ಪ್ರತಿಭೆಗಳು ತಾಲ್ಲೂಕು ಮಟ್ಟದಲ್ಲಿ ತಮ್ಮ ಆಟದ ಕೌಶಲ್ಯ ತೋರಲಿದ್ದಾರೆ ಎಂದರು.

ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳೇ ಇಂದು ಉತ್ತಮ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾಗಿ ಹೊರ ಹೊಮ್ಮಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಹಲವು ಕ್ರೀಡೆಯಿಂದ ಪ್ರಶಸ್ತಿ ಪಡೆದವರಲ್ಲಿ 600 ಮಂದಿ ಇದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಿದೇವಮ್ಮ, ಭೈರಮ್ಮ, ಉಪಾಧ್ಯಕ್ಷೆ ಮಂಜುಳಾ, ಸದಸ್ಯೆ ಲತಾ, ನರೇಗಾ ಸಹಾಯಕ ನಿರ್ದೇಶಕ ಇಂದ್ರೇಶ್, ಪಿಡಿಓಗಳಾದ ಶ್ರೀನಿವಾಸ್, ರಾಜಣ್ಣ, ಆರೋಗ್ಯ ನಿರೀಕ್ಷಕ ಜಯಣ್ಣ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!