ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಧುಗಿರಿ : ಕೊಲೆ ಪ್ರಕರಣವೊಂದರಲ್ಲಿ ಶುಕ್ರವಾರ ಇಬ್ಬರು ಆರೋಪಿಗಳಿಗೆ ಇಲ್ಲಿನ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಯಾದವ ಕರಕೇರ ರವರು ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಪಾವಗಡ ತಾಲೂಕಿನ ನೇರೆಳೆಕುಂಟೆ ಗ್ರಾಮದ ರಾಮಾಂಜಿ ಬಿನ್ ರಾಮಪ್ಪ ( 40), ಸುಬ್ಬಮ್ಮ ಬಿನ್ ರಾಮಪ್ಪ (58), ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು. ಗ್ರಾಮದ ಅಂಜಿನಪ್ಪ, ರಾಮಂಜಿ, ಸುಬ್ಬಮ್ಮ ಇವರು ಮೃತ ಮೂಗಪ್ಪನ ಮೊಮ್ಮೊಕ್ಕಳಾಗಿದ್ದು, ಇವರು 2019 ಫೆಬ್ರವರಿ 17 ರಂದು ರಾತ್ರಿ 9 ಗಂಟೆ ಸಮಯದಲ್ಲಿ ತಾತ ಮೂಗಪ್ಪನ ತಿಥಿ ಕಾರ್ಯಗಳನ್ನು ಅಂಜಿನಪ್ಪ ನಡೆಸಿದ್ದರೂ ಸಹ ಆರೋಪಿಗಳು ನಾವುಗಳೇ ತಾತ ಮೂಗಪ್ಪನ ತಿಥಿಕಾರ್ಯಗಳನ್ನು ಮಾಡಿರುತ್ತೇವೆಂದು ಅಂಜಿನಪ್ಪರವರೊಂದಿಗೆ ಜಗಳ ತೆಗೆದು ಮನೆಯ ಪಕ್ಕದಲ್ಲಿದ್ದ ಕೂಳೆ ಹೊಡೆದಿರುವ ಕಟ್ಟಿಗೆಯಿಂದ ಕೊಲೆ ಮಾಡುವ ಉದ್ದೇಶದಿಂದ ಅಂಜಿನಪ್ಪನ ಹಣೆ ಮತ್ತು ಬಲಕಿವಿಯ ಬಳಿಗೆ ಜೋರಾಗಿ ಹೊಡೆದಿದ್ದರಿಂದ ಗಂಬೀರವಾಗಿ ಗಾಯಗೊಂಡಿದ್ದ ಅಂಜಿನಪ್ಪ ಚಿಕಿತ್ಸೆ ಪಲಕಾರಿಯಾಗದೇ ಮಾರನೇ ದಿನ ಮೃತಪಟ್ಟಿದ್ದರು. ಪ್ರಕರಣದ ಬಗ್ಗೆ ಅಂದಿನ ತನಿಖಾಧಿಕಾರಿ ಸಿಪಿಐ ವೆಂಕಟೇಶ್‌ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮೇಲ್ಕಂಡಂತೆ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ದೂರುದಾರರಾದ ರಾಮಾಂಜಿಗೆ 75 ಸಾವಿರ ರೂಗಳನ್ನು ಪರಿಹಾರವಾಗಿ ನೀಡಲು ಆದೇಶಿರುತ್ತಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!