ಪಾವಗಡ: ತಾ ದೇವಲಕೆರೆ ಗ್ರಾಮದಲ್ಲಿ ಇಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಾವಗಡ ತಾ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕೇಶ್ ಪಾಳೆಗಾರ ವಿಶ್ವಕ್ಕೆ ರಾಮ ಲಕ್ಷ್ಮಣ ಸೀತೆ ಲವ ಕುಶ ಹನುಮಂತನನ್ನು ಪರಿಚಯಿಸಿದ ಕೀರ್ತಿ ಭಾಗವಾನ್ ಮಹರ್ಷಿ ವಾಲ್ಮೀಕಿ ರವರಿಗೆ ಸಲ್ಲಬೇಕು ಮಹರ್ಷಿ ವಾಲ್ಮೀಕಿ ರವರು ರಾಮಾಯಣ ರಚಿಸಿ ವಿಶ್ವಕ್ಕೆ ಮಹಾನ್ ಗ್ರಂಥ ನೀಡಿದ್ದಾರೆ ರಾಮಾಯಣದ ಮೂಲಕ ಶ್ರೀರಾಮರನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ ಅದರ ಜೊತೆಗೆ ಮಹಾತ್ಮ ಗಾಂಧೀಜಿ ರವರಿಗೆ ರಾಮರಾಜ್ಯದ ಪರಿಕಲ್ಪನೆ ಮುದಿದ್ದು ಮಹರ್ಷಿ ವಾಲ್ಮೀಕಿ ರವರು ರಚಿಸಿದ ರಾಮಾಯಣದಿಂದ ಅನ್ನೋದು ತಾವೆಲ್ಲರೂ ಮರೆಯಬಾರದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಮಾಯಣ ಕತೃ ಭಗವಾನ್ ಮಹರ್ಷಿ ವಾಲ್ಮೀಕಿ ರವರನ್ನು ಮರೆತು ಹಿಂದೂ ಧರ್ಮದ ಹೆಸರಿನಲ್ಲಿ ಒಬ್ಬ ರಾಮನನ್ನು ಮಾತ್ರ ಆರಾಧನೆ ಮಾಡುವ ಕೆಲಸಕ್ಕೆ ಮುಂದಾಗಿದೆ ರಾಮಾಯಣ ಮೂಲಕ ಶ್ರೀರಾಮನನ್ನು ವಾಲ್ಮೀಕಿ ರವರು ಜಗತ್ತಿಗೆ ಪರಿಚಯಿಸದೆ ಹೋಗಿದ್ದರೆ ರಾಮ ಯಾರು ಅನ್ನೋದು ಜಗತ್ತಿಗೆ ತಿಳಿಯುತ್ತಿರಲಿಲ್ಲ ಅದನ್ನು ಸರ್ಕಾರಗಳು ಮರೆಯಬಾರದು ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ರಾಮನಿಗೆ ಕೊಡುವ ಸತ್ಕಾರಗಳು ಮಹರ್ಷಿ ವಾಲ್ಮೀಕಿ ರವರಿಗೆ ನೀಡಬೇಕೆಂದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ
ಸಮುದಾಯದ ಮಕ್ಕಳು ಶಿಕ್ಷಣ ಕಡ್ಡಾಯವಾಗಿ ಪಡೆಯಬೇಕು ತನ್ನ ಕುಟುಂಬ ಪೋಷಣೆ ಮತ್ತು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅವಕಾಶ ಆಗುತ್ತದೆ ತಮ್ಮ ತಮ್ಮ ಮನೆಯ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಮುಂದೆ ಸಾಗಬೇಕೆಂದರು ತಿಳಿಸಿದರು ಕಾರ್ಯಕ್ರಮದಲ್ಲಿ ಮಹಿಳೆಯರು ಕುಂಭಗಳಳೊಂದಿಗೆ ಮೆರವಣಿಗೆ ಮೂಲಕ ರಾಜಬಿದಿಗಳಲ್ಲಿ ಮೆರವಣಿಗೆ ಸಾಗಿ ಕಲಾ ತಂಡಗಳೊಂದಿಗೆ ವಾಲ್ಮೀಕಿ ದೇವಸ್ಥಾನ ತಲುಪಿ ಪೂಜೆ ಸಲ್ಲಿಸಿ ಸ್ವಾಮಿ ಕೃಪೆಗೆ ಪಾತ್ರರಾದರು ಕಾರ್ಯಕ್ರಮದಲ್ಲಿ ಕೆ ಟಿ ಹಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪರಮೇಶ್ ಶಾಲಾ ಮುಖ್ಯ ಶಿಕ್ಷಕಿ ಭಾರತಿ ಪಾಳೆಗಾರ್ ಅಧ್ಯಕ್ಷರಾದ ಓಬಮ್ಮ ಸದಸ್ಯರಾದ ಆದಿಲಕ್ಷ್ಮಿ ನರಸಿಂಹ ನಾಯಕ ಓಂಕಾರ ನಾಯಕ ಶೈಲಾಪುರ ಮಂಜುನಾಥ್ ತಿಮ್ಮಣ್ಣ ಚಿಕ್ಕತಿಮ್ಮನಹಟ್ಟಿ ಭಾಸ್ಕರ್ ನಾಯಕ ಬಲರಾಮ್ ದ್ಯಾವೀರಪ್ಪ ರವಿ ಓಬಳಾಪುರ ಅನಂತ ತಳವಾರ ಮಂಜುಳಾ ಬೋರ ನಾಯಕ ಕಲಾವಿದ ಶಿವಣ್ಣ ಹನುಮಂತನಹಳ್ಳಿ ಬೆಳ್ಳಿಬಟ್ಲು ಬಲರಾಮ್ ಸ್ಟುಡಿಯೋ ವೆಂಕಟೇಶ್ ಗ್ರಾಮದ ಮುಖಂಡರಾದ ಅಂಜನಪ್ಪ ಓಬಣ್ಣ ನಾಗೇಶ್ ಮಂಜುನಾಥ್ ಓಬಳೇಶ್ ಶ್ರೀಧರ್ ಪುಟ್ಟರಾಜು ಶಬರಿ ಶ್ರೀ ಶಕ್ತಿ ಮಹಿಳಾ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು