ಕ್ರೀಡಾಸಕ್ತರನ್ನು ಆಕರ್ಷಿಸಿದ ಗ್ರಾಮೀಣ ಕಬಡ್ಡಿ ಹಾಗೂ ಖೋಖೋ ಆಟಗಳು

ಗುಬ್ಬಿ: ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ಇಲಾಖೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಎರಡು ದಿನಗಳ ಕಾಲ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗ್ರಾಮೀಣ ಆಟಗಳು ಸಾಕಷ್ಟು ಕುತೂಹಲಗಳ ನಡುವೆ ನಡೆಯಿತು.

ಸರ್ಕಾರದ ಆದೇಶದಂತೆ ನಡೆದ ಈ ಕ್ರೀಡಾಕೂಟ ಕಬಡ್ಡಿ ಹಾಗೂ ಖೋಖೋ ಆಟ ಆಡಲು ಬಹುತೇಕ ಗ್ರಾಮ ಪಂಚಾಯಿತಿಯಿಂದ ಆಗಮಿಸಿದ ತಂಡಗಳ ಪೈಕಿ ಕಬಡ್ಡಿ ಅಂತಿಮ ಪಂದ್ಯ ಜಿ.ಹೊಸಹಳ್ಳಿ ಮತ್ತು ಸಿ.ಎಸ್.ಪುರ ಪಂಚಾಯಿತಿ ನಡುವೆ ನಡೆದು ಜಿ.ಹೊಸಹಳ್ಳಿ ವಿಜೇತರಾಗಿ ಸಿ.ಎಸ್.ಪುರ ಎರಡನೇ ಸ್ಥಾನ ಗಳಿಸಿತು. ಖೋಖೋ ಆಟದಲ್ಲಿ ಹೇರೂರು ಮತ್ತು ಜಿ.ಹೊಸಹಳ್ಳಿ ನೇರ ಹಣಾಹಣಿ ಬಂದು ಅಂತಿಮವಾಗಿ ಹೇರೂರು ಪಂಚಾಯಿತಿ ಮೊದಲ ಸ್ಥಾನ ಪಡೆದು, ಜಿ.ಹೊಸಹಳ್ಳಿ ಎರಡನೇ ಸ್ಥಾನ ಪಡೆದು ಟ್ರೋಫಿ, ಪದಕಗಳ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್ ಮಾತನಾಡಿ ಹಳ್ಳಿಗಾಡಿನಲ್ಲಿ ಸ್ಥಳೀಯ ನಡೆಯುವ ಈ ಕ್ರೀಡೆ ಮುಂದಿನ ಉತ್ತಮ ಆಟಗಾರರ ವೇದಿಕೆ ಆಗಲಿದೆ. ಗ್ರಾಮೀಣ ಸೊಗಡಿನ ಕಬಡ್ಡಿ ಖೋಖೊ ಆಟವನ್ನು ಮಾತ್ರ ಈ ಬಾರಿ ಅಡಿಸಲಾಗಿದೆ. ಸ್ಪರ್ಧಾತ್ಮಕ ಮನಸ್ಥಿತಿಯಲ್ಲಿ ಆಟದ ಪ್ರದರ್ಶನ ಕಂಡು ಬಂತು ಎಂದರು.

ನರೇಗಾ ಸಹಾಯಕ ನಿರ್ದೇಶಕ ಇಂದ್ರೇಶ್, ಹೇರೂರು ಗ್ರಾಪಂ ಅಧ್ಯಕ್ಷ ಸೋಮಶೇಖರ್, ಜಿ.ಹೊಸಹಳ್ಳಿ ಸದಸ್ಯರಾದ ಮೋಹನ, ವಿದ್ಯಾಸಾಗರ, ರೇಣುಕಾ ಪ್ರಸಾದ್, ಮಡೇನಹಳ್ಳಿ ಲೋಕೇಶ್, ಪಿಡಿಓಗಳಾದ ಭಾನುಮತಿ, ಮಂಜುನಾಥ್, ತಾಪಂ ಸಿಬ್ಬಂದಿ ರಾಘವೇಂದ್ರ, ಕಡೇಪಾಳ್ಯ ರಾಮು ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!