ತೆಂಗಿನಮರ ಹತ್ತುವವರಿಗೆ 5 ಲಕ್ಷ ರೂಗಳ ವಿಮೆ ಅವಕಾಶ : ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಪ್ಪ

ಗುಬ್ಬಿ: ಕೇಂದ್ರ ಸರ್ಕಾರ ಹಾಗೂ ತೆಂಗು ಅಭಿವೃದ್ದಿ ಮಂಡಳಿ ಅವರ ಸಹಯೋಗದಲ್ಲಿ ಕೇರಾ ಸುರಕ್ಷಾ ವಿಮಾ ಯೋಜನೆಯಡಿ 5 ಲಕ್ಷ ರೂಗಳ ವಿಮೆ ಪಾಲಿಸಿ ಪಡೆಯುವ ಅವಕಾಶವಿದ್ದು ಇದೇ ತಿಂಗಳು 25 ರೊಳಗೆ ಅರ್ಜಿ ಪಡೆಯಲು ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಪ್ಪ ತಾಲ್ಲೂಕಿನ ರೈತರಲ್ಲಿ ಮನವಿ ಮಾಡಿದ್ದಾರೆ.

ತೆಂಗು ಅಭಿವೃದ್ದಿ ಮಂಡಳಿಯು ಓರಿಯೆಂಟಲ್ ವಿಮಾ ಕಂಪೆನಿ ಸಹಯೋಗದಲ್ಲಿ ಕೇರಾ ಸುರಕ್ಷಾ ವಿಮಾ ಯೋಜನೆ ಜಾರಿಗೆ ತಂದಿದ್ದು ತೆಂಗಿನಮರ ಹತ್ತುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗು ಕೊಯ್ಲು ಮಾಡುವವರಿಗೆ ಮತ್ತು ತೆಂಗಿನಮರಗಳ ಸ್ನೇಹಿತರು ತರಬೇತಿದಾರಿಗೆ ಗರಿಷ್ಠ 5 ಲಕ್ಷ ರೂಗಳ ಆಕಸ್ಮಿಕ ವಿಮಾ ರಕ್ಷಣೆ ಒದಗಿಸಲಿದೆ ಎಂದರು.

99 ರೂಗಳ ಫಲಾನುಭವಿ ಷೇರಿನಲ್ಲಿ ಈ ವಿಮೆ ಇದೇ ತಿಂಗಳು 31 ರಂದು ಮುಕ್ತಾಯವಾಗಲಿದೆ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಈ ಜೊತೆಗೆ ಅಪಘಾತ ವಿಮಾ ಯೋಜನೆಯ ಇದ್ದು ಒಂದು ಲಕ್ಷ ರೂಗಳವರೆಗೆ ಆಸ್ಪತ್ರೆಗೆ ವೆಚ್ಚದ ವಿಮೆ ಜಾರಿಯಾಗಲಿದೆ. ಈ ಅವಕಾಶವನ್ನು ರೈತರು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ಕೋರಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!