ಯುವ ಬ್ರಿಗೇಡ್ ಗೆ ಬಾಗಲಕೋಟೆ ಜಿಲ್ಲೆ ಆವೃತ್ತಿಗೆ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸಿತಾನವಾದ ಬಾದಾಮಿಗೆ ಬರುವ ಪ್ರವಾಸಿಗರಿಗೆ ಐತಿಹಾಸಿಕ ನಗರಿಯ ಬಗ್ಗೆ ಪ್ರವಾಸಿ ಮಾರ್ಗದರ್ಶನ ಮಾಡುವ ಪ್ರವಾಸಿ ಮಾರ್ಗ ದರ್ಶ ಕರಿಗೆ ಒಟ್ಟಾರೆಯಾಗಿ ಸುಮಾರು 11 ಜನ ಪ್ರವಾಸಿ ಮಾರ್ಗದರ್ಶಕರನ್ನು ಚಾಲುಕ್ಯರ ಕಾಲದ ಮೇನ ಬಸದಿ ಗುಹೆಗಳ ಎದುರು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗುಹೆಗಳು ಮೇಣ ಬಸದಿ ನೋಡಲು ಆಗಮಿಸಿದ ಪ್ರವಾಸಿಗರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಪಟ್ಟರು ಹಾಗೆಯೇ ಎಲ್ಲರಿಗೂ ಅಖಂಡ ಭಾರತದ ಭಾವಚಿತ್ರ ನೀಡಿ ದೀಪಾವಳಿ ಹಬ್ಬದಂದು ಅಖಂಡ ಭಾರತ ಸಂಕಲ್ಪ ಮಾಡಲಾಯಿತು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ