ತುಮಕೂರು: ನಗರ ಸರ್ಕಾರದಿಂದ ಎಸ್ಸಿ ಎಸ್ಟಿ ಸಮುದಾಯಗಳ ಒಕ್ಕೂಟ ತುಮಕೂರು ಮೀಸಲಾತಿ ಹೆಚ್ಚಳದ ವಿಜಯೋತ್ಸವವನ್ನು ನಗರದ ಟೌನ್ ಹಾಲ್ ನಲ್ಲಿ ಅಚರಿಸಲಾಯಿತು
ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನ ಮಹಾಸ್ವಾಮಿಗಳ ನಿರಂತರ 257 ದಿನಗಳ ಧರಣಿ ಸತ್ಯಾಗ್ರಹದ ಫಲವಾಗಿ ಹಾಗೂ ಈ ಹಿಂದೆ ಶ್ರಮಿಸಿದ ಹಲವಾರು ಸಂಘ ಸಂಸ್ಥೆಗಳ ಹೋರಾಟಗಾರರ ಹೋರಾಟದ ಫಲವಾಗಿ ಇಂದು ಜಸ್ಟಿಸ್ ನಾಗಮೋಹನ್ ದಾಸ್ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ವರದಿಯನ್ನು ಇಂದು ಸರ್ಕಾರ ಯಥಾವತ್ತಾಗಿ ಎತ್ತಿ ಹಿಡಿದು ಸುಗ್ರೀವಾಜ್ಞೆ ಹೊರಡಿಸಿರುವುದು ಎಸ್ಸಿ ಎಸ್ಟಿ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುವ ಭರವಸೆಯಿಂದ ಎಸ್ಸಿ ಎಸ್ಟಿ ಸಮುದಾಯಗಳಲ್ಲಿ ಸಂತಸ ಮೂಡಿಸಿದೆ
ಈ ಹೋರಾಟದಲ್ಲಿ ಶ್ರಮಿಸಿದ ಎಲ್ಲಾ ಹೋರಾಟಗಾರರಿಗೆ ಹಾಗೂ ಮಾನ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ನಾಯಕ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ವಿಜಯೋತ್ಸದಲ್ಲಿ ಮರಳುರು ನಾಗರಾಜ್, ಬಂಡೆ ಕುಮಾರ್, ಮಾರಣ್ಣ ಪಾಳೇಗಾರ, ಕುಪ್ಪೂರು ಶ್ರೀಧರ್ ನಾಯಕ, ರಂಗನಾಥ್, ಪ್ರಕಾಶ್ GS, ಭರತ್ ರಾಜ್, ಅರುಣ್ ಕುಮಾರ್, ಗೂಳೂರು ರಾಜಣ್ಣ, ಗೋಪಾಲ್, ರಂಜನ್ ಕುಮಾರ್,ಶಂಕರಪ್ಪ, ರಾಜಣ್ಣ, ನರಸಿಂಹ ಮೂರ್ತಿ, ಮೋಹನ್, ಹಾಗೂ ಸಮುದಾಯದ ಮುಖಂಡರು ಬಾಗವಹಿಸಿದ್ದರು.