ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಕ್ರಾಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ನಾಗರಾಜು ರವರ ಮೇಲೆ ಏಕಾಏಕಿ 6 ಜನ ಆರೋಪಿಗಳು ಹಲ್ಲೆ ಮತ್ತು ಪೋಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಅಕ್ಕಿರಾಂಪುರ ಕುರಿ ಮೇಕೆ ಸಂತೆಯು ಜಿಲ್ಲಾಧಿಕಾರಿ ಗಳ ಆದೇಶದ ಮೇರೆಗೆ ಶನಿವಾರದ ಸಂತೆಯನ್ನು ನಡೆಸದಂತೆ ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಪೋಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿತ್ತು. ಅದರೆ ಎಂದಿನಂತೆ ಕುರಿ ಮೇಕೆ ವ್ಯಾಪಾರಸ್ಥರು ಬೊಲೆರೊ ವಾಹನದಲ್ಲಿ ಕುರಿ ಮೇಕೆಗಳನ್ನು ಸಂತೆ ವ್ಯಾಪಾರಕ್ಕೆ ವಾಹನದಲ್ಲಿ ತುಂಬಿಕೊಂಡು ಅರಸಾಪುರ ಗ್ರಾಮದ ಕಡೆಯಿಂದ ಬೈಚಾಪುರ ಕಡೆಗೆ ವಾಹನದಲ್ಲಿ ಬರುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೋಲೀಸ್ ಸಿಬ್ಬಂದಿಗಳು ವಾಹನವನ್ನು ತಡೆದು ವಾಪಸ್ಸು ಕಳಿಸಲು ಮುಂದಾದಾಗ ಏಕಾಎಕಿ 6 ಜನ ಆರೋಪಿಗಳು ಮುಖ್ಯಪೇದೆ ನಾಗರಾಜುರವರ ಮೇಲೆ ಹಲ್ಲೆಗೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿ,ಅವಾಚ್ಯ ಶಬ್ದಗಳಿಂದ ನಿಂದಿಸಿ,ಮಾತಿಗೆ ಮಾತು ಬೆಳೆದು ಪೋಲಿಸರ ಮೇಲೆ ಹಲ್ಲೆಗೆ ಮತ್ತು ಕರ್ತವ್ಯ ಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.ಅರಸಾಪುರ ಅಗ್ರಹಾರ ಗ್ರಾಮದ ವಾಸಿಗಳು ಎಂದು ತಿಳಿದುಬಂದಿದೆ.
ಆರೋಪಿಗಳಾದ ಚನ್ನಪ್ಪ 54 ವರ್ಷ,ನರಸಿಂಹರಾಜು28ವರ್ಷ, ನವೀನ್ ಕುಮಾರ್ 28ವರ್ಷ,ಲಕ್ಷ್ಮೀ ಪತಿ26 ವರ್ಷ ಮತ್ತು ನಾಗೇಶ್22 ವರ್ಷ ಮತ್ತು ಮತ್ತೊಬ್ಬ ಎ1 ಆರೋಪಿ ತಲೆಮರೆಸಿಕೊಂಡಿದ್ದಾನೆ.
ಈ ಸಂಭಂದ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸುರೇಶ್.ಕೆ ಪಿಎಸ್ಐ ಚೇತನ್ ಕುಮಾರ್ ಎಎಸ್ಐ ಯೋಗೀಶ್,ಮುಂಜುನಾಥ್, ಧರ್ಮೇಗೌಡ ಮುಖ್ಯ ಪೇದೆಗಳಾದ ಸಂಜೀವ್, ರಂಗರಾಜು,ಪೇದೆಗಳಾದ ದಯಾನಂದ್,ಪ್ರದೀಪ್,ಮಲ್ಲೇಶ್ ಇತರರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಬಂಧಿತ 5 ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾರ್ವಜನಿಕರು, ವ್ಯಾಪಾರಸ್ಥರು ಯಾರೇ ಆಗಿರಲಿ ಪೋಲೀಸರ ಜೊತೆ ಸೌಹಾರ್ದ ಯುತವಾಗಿ ಶಾಂತಿಯುತವಾಗಿ
ವರ್ತಿಸಬೇಕು. ಪೋಲೀಸರ ಜೊತೆ ಹಲ್ಲೆ ಮತ್ತು ವಾಗ್ವಾದಕ್ಕೆ ಇಳಿಯಬಾರದು.
ಕಾನೂನನ್ನು ಯಾರೇ ಕೈಗೆತ್ತಿಕೊಳ್ಳಬಾರದು ಎಂದು ಈ ಮೂಲಕ ಪಿಎಸ್ಐ ಚೇತನ್ ಕುಮಾರ್ ಮನವಿ ಮಾಡಿದ್ದಾರೆ.