ತೋವಿನಕೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆ

ಕೊರಟಗೆರೆ:- ಜಾತ್ಯಾತೀತ ಜನತಾದಳ ಪಕ್ಷದ ಭದ್ರಕೋಟೆ ಕೊರಟಗೆರೆ ವಿಧಾನಸಭಾ ಕ್ಷೇತ್ರ. ನಮ್ಮ ಜೆಡಿಎಸ್ ಪಕ್ಷದಲ್ಲಿ ಸಾವಿರಾರು ಜನ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರ ಪಡೆ ಇದೆ. ತೋವಿನಕೆರೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯ ನವೀನ್ ಕಂಪರ್ಟ್ ಸಭಾಂಗಣದಲ್ಲಿ ಜಾತ್ಯಾತೀತ ಜನತಾದಳ ಪಕ್ಷದಿಂದ ಗುರುವಾರ ಏರ್ಪಡಿಸಲಾಗಿದ್ದ ತೋವಿನಕೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ವಿಎಸ್‌ಎಸ್‌ಎನ್ ಅಧ್ಯಕ್ಷರ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕರುನಾಡಿನ ಮಾಜಿ ಸಿಎಂ ಕುಮಾರಣ್ಣ ನೇತೃತ್ವದ ಜೆಡಿಎಸ್ ಪಕ್ಷ ಈಗಾಗಲೇ ಸದೃಢವಾಗಿದೆ. ಕರ್ನಾಟಕದಲ್ಲಿ ಮತ್ತೇ ಕುಮಾರಣ್ಣ ಮುಖ್ಯಮಂತ್ರಿ ಮಾಡೋದೇ ಜನತೆಯ ಬಹುದೊಡ್ಡ ಕನಸಾಗಿದೆ. ಕೊರಟಗೆರೆ ಕ್ಷೇತ್ರದ ಸಾವಿರಾರು ಜನ ಕಾರ್ಯಕರ್ತರು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಆಗಮಿಸುತ್ತೀದ್ದಾರೆ. 2023ರಲ್ಲಿ ಕೊರಟಗೆರೆ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂಬುದು ಮತ್ತೋಮ್ಮೆ ಸಾಭಿತು ಆಗಲಿದೆ ಎಂದು ಹೇಳಿದರು.

ಪಿ.ಆರ್.ಸುಧಾಕರಲಾಲ್. ಮಾಜಿ ಶಾಸಕ.

ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು ಮಾತನಾಡಿ ನಾನೋರ್ವ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ. 20 ವರ್ಷದಿಂದ ನಾನು ಸತತವಾಗಿ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾಂಗ್ರೇಸ್ ಪಕ್ಷದಲ್ಲಿ ಕಳೆದ 20ತಿಂಗಳಿಂದ ನನಗೇ ಉಸಿರುಗಟ್ಟುವ ವಾತವರಣ ಇತ್ತು. ಈಗ ಸ್ವಇಚ್ಚೆಯಿಂದ ಜೆಡಿಎಸ್ ಪಕ್ಷಕ್ಕೆ ಮರಳಿ ಗೂಡು ಸೇರಿದ್ದೇನೆ. ಕೊರಟಗೆರೆ ಕ್ಷೇತ್ರದಿಂದ 2023ಕ್ಕೆ ಸುಧಾಕರಲಾಲ್ ಶಾಸಕರಾಗಿ ಆಯ್ಕೆ ಆಗೋದು ಖಚಿತವಾಗಿದೆ ಎಂದು ಹೇಳಿದರು.

ನಾಗರಾಜು. ಗ್ರಾಪಂ ಅಧ್ಯಕ್ಷ. ತೋವಿನಕೆರೆ

ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಹನುಮಂತರಾಯಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣ್, ಮುಖಂಡರಾದ ಕುಮಾರಣ್ಣ, ಮಂಜುನಾಥ, ಪ್ರಸನ್ನಕುಮಾರ್, ರಾಮಾಂಜನೇಯ ಸೇರಿದಂತೆ ಹತ್ತಾರು ಕಾಂಗ್ರೇಸ್ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೇಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಕೊರಟಗೆರೆಯ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಸಮ್ಮುಖದಲ್ಲಿ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ವಕ್ತಾರ ಲಕ್ಷ್ಮೀಶ್, ಕೋಳಾಲ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಮಾಜಿ ತಾಪಂ ಸದಸ್ಯ, ಬೋರಣ್ಣ, ಎಲ್.ವಿ.ಪ್ರಕಾಶ್, ಪಪಂ ಸದಸ್ಯ ಲಕ್ಷ್ಮೀನಾರಾಯಣ ಮುಖಂಡರಾದ ಸಿದ್ದಮಲ್ಲಪ್ಪ, ರಮೇಶ್, ಕಾಮರಾಜು, ವೀರಕ್ಯಾತರಾಯ, ಕಾಕಿಮಲ್ಲಯ್ಯ, ಸಾಕರಾಜು ಸೇರಿದಂತೆ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!