ಅಕ್ರಮ ಮರಳು ಸಾಗಾಟ ಪೋಲಿಸ್ರ ನೋಡಿ ಟ್ರಾಕ್ಟರ್ ಬಿಟ್ಡು ಚಾಲಕ ಪರಾರಿ

ಕೊರಟಗೆರೆ: ಪೋಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಟ್ರಾಕ್ಟರ್ ಗೆ ಮರಳು ತುಂಬಿಕೊಂಡು ಚಾಲನೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ಎದುರಿಗೆ ಬಂದ ಪೋಲೀಸರನ್ನು ನೋಡಿ
ಟ್ರಾಕ್ಟರ್ ನ್ನು ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಟ್ಟ ಶಂಭೋನಹಳ್ಳಿ ಗ್ರಾಮದ ಕಡೆಯಿಂದ ಬಿಟ್ಟನಕುರಿಕೆ ಗ್ರಾಮಕ್ಕೆಹೋಗುವ ಮಣ್ಣಿನ ರಸ್ತೆಯ ದಾರಿಯಲ್ಲಿ ಜರುಗಿದೆ.

ವಿವರ;
ಸೀಮೆಎಣ್ಣೆ ಸಿದ್ದರಾಜುರವರ ಶೆಡ್ ನ ಸಮೀಪದ ಮಣ್ಣಿನ ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಒಂದು ಮರಳು ತುಂಬಿದ ಟ್ರಾಕ್ಟರ್ ಸಮವಸ್ತ್ರದಲ್ಲಿದ್ದು ಪೋಲೀಸರನ್ನು ನೋಡಿ ಟ್ರಾಕ್ಟರ್ ನ್ನು ಮಣ್ಣಿನ ರಸ್ತೆಯಲ್ಲಿ ನಿಲ್ಲಿಸಿ ಓಡಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.
ನಂತರ ಟ್ರಾಕ್ಟರ್ ನ್ನು ಸಾರ್ವಜನಿಕರ‌ ಸಹಾಯದಿಂದ ಮರಳು ತುಂಬಿರುವ ಟ್ರಾಕ್ಟರ್ ನ್ನು ಠಾಣೆಯ ಬಳಿ ತರಲು ತರಲಾಗಿದೆ.
ಟ್ರಾಕ್ಟರ್ ಟ್ರೈಲರ್ ಚಾಲಕನ ವಿಳಾಸ ಪತ್ತೆಯಾಗಿದ್ದು ಚಾಲಕ ರಘುಬಿನ್ ದೊಡ್ಡರಂಗಪ್ಪ ಯಾವುದೇ ಪರವಾನಗಿ ಇಲ್ಲದಯೇ ಮರಳು ತುಂಬಿರುವುದಾಗಿ ತಿಳಿದು ಬಂದಿದೆ.
ಈ ಸಂಭಂದ ಪಿರ್ಯಾದಿ ಮುಖ್ಯಪೇದೆ ಹನುಮಂತರಾಯಪ್ಪ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಚೇತನ್ ಕುಮಾರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!