ಪಾವಗಡ: ಸಾಲಭಾದೆ ತಾಳಲಾರದೆ ಮನನೊಂದ ಯುವ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಪೋಲೀಸ್ ಠಾಣೆ ವ್ಯಾಪ್ತಿಯ ಚೆನ್ನಮ್ಮರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ(೨೬) ಮೃತ ದುರ್ದೈವಿಯಾಗಿದ್ದಾನೆ, ತಾಲೂಕಿನ ಚೆನ್ನಮ್ಮರೆಡ್ಡಿಹಳ್ಳಿ ಗ್ರಾಮದ ವೆಂಕಟೇಶಪ್ಪ ರವರ ಮಗನಾಗಿದ್ದಾನೆ, ಕೃಷಿ ಚಟುವಟೆಕೆಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಮನ ನೊಂದು ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಕೃಷಿಗಾಗಿ ಪಿ.ಎಲ್.ಡಿ. ಬ್ಯಾಂಕ್‌ನಲ್ಲಿ ೭೦ ಸಾವಿರ ಸಾಲ, ಕೊಳವೆ ಬಾವಿ ಕೊರೆಸಲು ೩ ಲಕ್ಷ ಕೈಸಾಲ ಮಾಡಿದ್ದ ಮಲ್ಲಿಕಾರ್ಜುನ ಕೊಳವೆ ಬಾವಿಯಲ್ಲಿ ನೀರು ಸಿಗದ ಕಾರಣ ಮನ ನೊಂದಿದ್ದ, ಹಾಗೂ ಸಾಲ ತೀರಿಸಲು ಭಯ ಬೀತನಾಗಿದ್ದ ಎಂದು ತಿಳಿದುಬಂದಿದೆ.
ಘಟನೆ ತಿಳಿದು ಪಾವಗಡ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದೂರು ದಾಖಲಿಸಿಕೊಂಡಿದ್ದಾರೆ.