ಕೊರಟಗೆರೆ: ಕಡಲೆಕಾಯಿ ಗುಡ್ಡೆ ಮಾಡುವ ಸಮಯದಲ್ಲಿ ವಿದ್ಯುತ್ ತಂತಿಗೆ ತಾಕಿ ವ್ಯಕ್ತಿ ಓರ್ವ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊರಟಗೆರೆ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ
ನಡೆದಿದೆ.
ತಾಲೂಕಿನ ಕೋಲಾಲ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿ ಕಡಲೆ ಕಾಯಿ ಗುಡ್ಡೆ ಮಾಡುವ ಸಮಯದಲ್ಲಿ ವ್ಯಕ್ತಿಯೋರ್ವನಿಗೆ ವಿದ್ಯುತ್ ತಂತಿ ತಾಕಿ ಆಸ್ಪತ್ರೆಗೆ ದಾಖಲಾಗಿದ್ದು. ಇದೇ ವಿಷಯಕ್ಕಾಗಿ ಹಲವು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ವಿಷಯವನ್ನು ಗ್ರಾಮಸ್ಥರು ತಿಳಿಸಿದ್ದು ಯಾರು ಕೂಡ ಇತ್ತ ಕಡೆ ಗಮನ ಹರಿಸದೆ ಇರುವುದರಿಂದ ಇಂದು ವ್ಯಕ್ತಿಯೊಬ್ಬ ವಿದ್ಯುತ್ತಂತಿಗೆ ತಗಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಮಾರು 3-4 ವರ್ಷಗಳಿಂದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಕೂಡ ಯಾರು ಗಮನಹರಿಸದೆ ಇರುವುದು ವಿಪರ್ಯಾಸವೇ ಸರಿಯಾಗಿದೆ. ವ್ಯಕ್ತಿಯೊಬ್ಬ ಕಡಲೆ ಕಾಯಿ ಗುಡ್ಡೆ ಮಾಡಲೆಂದು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ತಲೆಗೆ ವಿದ್ಯುತ್ ತಂತಿ ಶಾಕ್ ಹೊಡೆದಿದೆ ಸುಮಾರು 11 ಕೆವಿ ವೋಲ್ಟೇಜ್ ನಷ್ಟು ಈ ಲೈನ್ ಸಾಮರ್ಥ್ಯ ಹೊಂದಿರುತ್ತದೆ. ಇದೇ ರೀತಿ ಮುಂದುವರೆದರೆ ಊರಿನ ಗ್ರಾಮಸ್ಥರು ಪ್ರತಿಭಟನೆಗೆ ಮಾಡುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಮಂಜು ಎಂಬ ವ್ಯಕ್ತಿಯ ಯೋಗಕ್ಷೇಮವನ್ನು ವಿಚಾರಿಸಲು ಇಂದು ಶಾಸಕರಾದ ಜಿ ಪರಮೇಶ್ವರ ರವರು ಆಸ್ಪತ್ರೆಗೆ ಆಗಮಿಸಿದ್ದರು. ಕೂಡಲೇ
ಬೆಸ್ಕಾಂ ಅಧಿಕಾರಿಗಳಿಗೆ ಕೂಡಲೇ ಆ ಲೈನನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ.