ಕೊರಟಗೆರೆ ಕೊಳ್ಳಾಲ ಹೋಬಳಿ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ಯುವರತ್ನ ಕನ್ನಡದ ಮನೆ ಮಗ. ಕರ್ನಾಟಕ ರತ್ನ. ದಿ. ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಯನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಅಪಾರ ಅಭಿಮಾನಿಗಳು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದಿಂದ ಆಚರಿಸಲಾಗಿತು.
ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ. ದಿವಂಗತ ಪುನೀತ್ ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು ಪುನೀತ್ ರಾಜಕುಮಾರ್ ರವರ ಮೊದಲ ವರ್ಷದ ಪುಣ್ಯ ಸ್ಮರಣೆ ದೇಶದ ಹಲವಾರು ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿ ಭಾವಚಿತ್ರ ಇಟ್ಟು ಪುಣ್ಯಸ್ಮರಣೆ ಮಾಡುತ್ತಿದ್ದು ನಮ್ಮ ಗ್ರಾಮದಲ್ಲಿ ಚಿಕ್ಕ ಹಾಗೂ ಹಿರಿಯರ ಅಭಿಮಾನಿಗಳ ಸಮ್ಮುಖದಲ್ಲಿ ಪುಣ್ಯಸ್ಮರಣೆ ಮಾಡುತ್ತಿದ್ದು. ಅವರನ್ನು ಕಳೆದುಕೊಂಡ ಇಂದು ಒಂದು ವರ್ಷ ಕಳೆದಿದ್ದು ನಮ್ಮಗಳಿಗೆ ತುಂಬಲಾರದ ನಷ್ಟವಾಗಿದೆ ಹಾಗೂ ಪುನೀತ್ ರಾಜಕುಮಾರ್ ಅವರ ನಡೆದು ಬಂದ ಹಾದಿಯಲ್ಲಿ ಸಾವಿರಾರು ಸಂಘಟನೆಗಳು. ಸಂಘ ಸಂಸ್ಥೆಗಳು ಒಂದು ವರ್ಷದಿಂದ ಹಲವಾರು ಕೆಲಸಗಳನ್ನು ಮಾಡಿಕೊಂಡು ಬಂದಿದ್ದು ಅದರಂತೆ ನಮ್ಮ ಸಂಘವು ಕೂಡ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇಂದಿಗೆ ರಾಜರತ್ನ ಪುನೀತ್ ರಾಜಕುಮಾರ್ ರವರ ಅಪಾರ ಅಭಿಮಾನಿಗಳು ಕಂಬನಿ ಮಿಡಿದ ಇಂದಿಗೆ ಒಂದು ವರ್ಷ ಕಳೆದಿದೆ. ಆದಕಾರಣ ಇಂದು ನಮ್ಮ ಊರಿನಲ್ಲಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಪುಣ್ಯಸ್ಮರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯದರ್ಶಿ ಎಲ್.ಐ.ಸಿ. ಮೂತಿ೯ ಮಾತನಾಡಿ ಪುನೀತ್ ರಾಜಕುಮಾರ್ ಅವರು ಹಲವು ಸಾಮಾಜಿಕ ಕಾರ್ಯಗಳನ್ನ ಮಾಡುವ ಮೂಲಕ ದೇಶ ರಾಜ್ಯದ ಜನತೆಯ ಮನದಾಳದಲ್ಲಿ ಅಚ್ಚಳಿಯದೆ ಉಳಿಯುವ ಅನೇಕ ಕೆಲಸಗಳನ್ನು ಮಾಡಿದ್ದಾರೆ ಹಾಗಾಗಿ ಅವರ ಪರಿಸರ ಪ್ರೇಮ ಕಾಳಜಿ ನಿಜಕ್ಕೂ ಅವಿಸ್ಮರಣೀಯ ಹಾಗಾಗಿ ಅವರ ನೆನಪಿನಲ್ಲಿ ಸಾರ್ವಜನಿಕ ಉತ್ತಮವಾದ ಕೆಲಸಗಳನ್ನು ಮಾಡಲು ಮುಂದಿನ ದಿನಗಳಲ್ಲಿ ನಮ್ಮ ಸಂಘ ಸಿದ್ಧವಾಗಿರುತ್ತದೆ ಎಂದು ಹೇಳಿದರು. ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಂಕೇತ. ಭಾಗ್ಯಮ್ಮ. ಮಾಜಿ ಸದಸ್ಯ ಹೊಸಳಪ್ಪ. ಯಜಮಾನ್ ಗಂಗಾಧರಯ್ಯ. ಪಟೇಲ್ ಚಂದ್ರಯ್ಯ. ತಿಪ್ಪೇಸ್ವಾಮಿ. ಶಂಕರ್. ಆಟೋ ಕಿಟ್ಟಿ. ರಾಮಕೃಷ್ಣಪ್ಪ. ಸ್ವಾಮಿ. ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್ ರವರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.