ಬಿ.ಜೆ.ಪಿ ವಿರುದ್ಧ ಜನಾಕ್ರೋಶ ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ಸಂಗ್ರಹದ ರಥಯಾತ್ರೆಯಲ್ಲ ಇದು ಬಿ.ಜೆ.ಪಿ ಪ್ರಚಾರದ ಯಾತ್ರೆ


ತಿಪಟೂರು : ನವೆಂಬರ್ 11ರಂದು ಬೆಂಗಳೂರಿನಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆಗಾಗಿ ಕೆಂಪೇಗೌಡರ ರಾಜ್ಯದಾದ್ಯಂತ ಎಲ್ಲಾ ಗ್ರಾಮಗಳಿಂದಲು ಮೃತ್ತಿಕೆ ಸಂಗ್ರಹ ಕಾರ್ಯನಡೆಯುತ್ತಿದ್ದು ಇಂದು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಚಿಕ್ಕಹೊನ್ನವಳ್ಳಿ ಗ್ರಾಮದಲ್ಲಿ ರಥಕ್ಕೆ ತಡೆದ ಘಟನೆ ಜರುಗಿದ್ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಗ್ರಾಮದೊಳಗೆ ಬರದಂತೆ ತಡವಾಗಿ ಬೆಳಕಿಗೆ ಬಂದಿದೆ.


ತಾಲ್ಲೂಕಿನಾದ್ಯಂತ ಸೂಸೂತ್ರವಾಗಿ ನಡೆಯುತ್ತಿದ್ದ ಮೃತಿಕೆ ಸಂಗ್ರಹವು ಸಚಿವರ ಉಪಸ್ಥಿತಿಯಲ್ಲಿಯೇ ಜರುಗುತ್ತಿತ್ತು ಆದರೆ ಚಿಕ್ಕಹೊನ್ನವಳ್ಳಿ ಗ್ರಾಮದಲ್ಲಿ ಈ ರಥಯಾತ್ರೆಯಲ್ಲಿ ಒಕ್ಕಲಿಗರ ಸ್ವಾಮೀಜಿಗಳಾದ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು, ಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಲ್ಲ, ನಾವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾವಚಿತ್ರ ನಮ್ಮ ಅಭ್ಯಂತರವಿಲ್ಲ, ಆದರೆ ಪ್ರಧಾನಿ ಮೋದಿಯವರಿಗೂ ಇದಕ್ಕೂ ಏನು ಸಂಬAಧ ಏನೂ, ಹೋಗಲಿ ಕರ್ನಾಟಕದ ಹೆಮ್ಮೆಯ ಮಾಜಿ ಪ್ರಧಾನಿ ಭಾವಚಿತ್ರವನ್ನು ಹಾಕಿಲ್ಲ ಏಕೆ ಎಂದು ಕೆಲವು ಗ್ರಾಮಸ್ಥರು ಪ್ರಶ್ನಿಸಿದ ಸಂದರ್ಭದಲ್ಲಿ ಕೆಲಕಾಲ ಉದ್ವಿಘ್ನವಾದ ವಾತಾವರಣ ನಿರ್ಮಾಣವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ಸಂದರ್ಭದಲ್ಲಿ ಹಿರಿಯರ ಮದ್ಯಸ್ಥಿಕೆಯಿಂದ ಮೃತಿಕೆ ಸಂಗ್ರಹದ ಕಾರ್ಯಕ್ರಮವನ್ನು ಜರುಗಿಸಿದರು.

ವರದಿ ಆನಂದ್ ತಿಪ್ಟೂರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!