ಪಂಚರತ್ನ ಯೋಜನೆ ಬಗ್ಗೆ ವಿನೂತನ ಪ್ರಚಾರಕ್ಕೆ ಚಾಲನೆ ನೀಡಿದ ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜು

ಗುಬ್ಬಿ: ಜೆಡಿಎಸ್ ಪಕ್ಷದಿಂದ ಜನೋಪಯೋಗಿ ಪಂಚರತ್ನ ಯೋಜನೆ ಬಗ್ಗೆ ಗ್ರಾಮೀಣ ಜನರಲ್ಲಿ ಮನದಟ್ಟು ಮಾಡಲು ವಿನೂತನ ಪ್ರಯೋಗ ಮಾಡಿದ ಗುಬ್ಬಿ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ನಗರದಲ್ಲಿನ ಆಟೋರಿಕ್ಷಾ ಮೇಲೆ ಪಂಚರತ್ನ ಯೋಜನೆಯ ಬಿತ್ತಿಚಿತ್ರ ಅಂಟಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಗುಬ್ಬಿಯ ಜೈ ಭುವನೇಶ್ವರಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘದೊಂದಿಗೆ ಚರ್ಚಿಸಿದ ನಾಗರಾಜು ಅವರು ತಾಲ್ಲೂಕಿನಲ್ಲಿ ಜನಸೇವೆ ಮಾಡುವ ಆಟೋಗಳ ಬಳಸಿ ಈ ರೀತಿ ಪ್ರಚಾರ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಂಚರತ್ನ ಯೋಜನೆ ಮುಗ್ದ ಮತದಾರರಲ್ಲಿ ತಿಳಿಸಬೇಕು. ನವಂಬರ್ 20 ರಂದು. ಪಂಚರತ್ನ ಯೋಜನೆ ಭವ್ಯ ರಥ ಗುಬ್ಬಿ ಕ್ಷೇತ್ರಕ್ಕೆ ಬರಲಿದೆ. ಜೊತೆಗೆ ಮಾಜಿ ಸಿಎಂ ಕುಮಾರಣ್ಣ ಕೂಡಾ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಈ ನಿಟ್ಟಿನಲ್ಲಿ ಪಂಚರತ್ನ ಯೋಜನೆ ಬಗ್ಗೆ ಇಡೀ ಕ್ಷೇತ್ರದಲ್ಲಿ ಪ್ರಚುರಗೊಳಿಸಲು ಸನ್ನದ್ಧವಾಗಿ ಸಕಲ ಸಿದ್ಧತೆ ನಡೆಸಿದ್ದೇವೆ ಎಂದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!