ಕೊರಟಗೆರೆ ;- ನ.೧ ರಂದು ಕೊರಟಗೆರೆ ತಾಲೂಕಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಸನ್ಮಾನಿಸಲು ಆಯ್ಕೆ ಸಮಿತಿ ಸಭೆ ಸೇರಿ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ೮ ವಿವಿಧ ಕ್ಷೇತ್ರಗಳಿಂದ ೧೬ ಮಂದಿ ಸಾದಕರನ್ನು ಆಯ್ಕೆ ಮಾಡಿದೆ.
ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾರ್ಗದರ್ಶನದಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಿದ್ದು ಸಮಿತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ದೊಡ್ಡಸಿದ್ದಪ್ಪ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ೨೯ ಅರ್ಜಿಗಳಲ್ಲಿ ಅಯ್ಕೆ ಸಮಿತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೬ ಮಂದಿ ಸಾದಕರನ್ನು ಅಯ್ಕೆ ಮಾಡಲಾಗಿದೆ.
ಆಯ್ಕೆಯಾದ ಸಾದಕರು;-ಕೃಷಿ ಕ್ಷೇತ್ರದಿಂದ ಸಾವಯವ ಕೃಷಿಕ ತಾಲೂಕಿನ ಚನ್ನರಾಯನ ದುರ್ಗಾ ಹೋಬಳಿಯ ಬರಕ ಗ್ರಾಮದ ದೊಡ್ಡಯ್ಯ ಬಿನ್ ವೀರಣ, ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿಯ ಶಿವಣ್ಣ, ಸರ್ಕಾರಿ ನೌಕರರ ಕ್ಷೇತ್ರದಿಂದ ಕನ್ನಡ ಶಿಕ್ಷಕರಾದ ಬುಕ್ಕಾಪಟ್ಟಣ ಕಾಂತರಾಜು ಬಿನ್ ರಾಮಯ್ಯ, ಕನ್ನಡ ಪರ ಹೋರಾಟ ಕ್ಷೇತ್ರದಿಂದ ಕೊರಟಗೆರೆ ಪಟ್ಟಣದ ಬಿ.ಎಸ್.ಪ್ರಸನ್ನಕುಮಾರ್ ಬಿನ್ ಸಿ.ಹನುಮಂತರಾಜು ಮತ್ತು ಖಲೀಂಉಲ್ಲಾ ಬಿನ್ ಸುಕೂರ್‌ಸಾಬ್, ಮಾದ್ಯಮ ಕ್ಷೇತ್ರದಿಂದ ಸಿದ್ದರಾಜು.ಕೆ ಬಿನ್ ಕೃಷ್ಣಪ್ಪಟಿ ಕೊರಟಗೆರೆ, ಟಿ.ಸಿ.ನಾಗೇಂದ್ರ ಬಿನ್ ಚಿಕ್ಕನರಸಯ್ಯ ತೋವಿನಕೆರೆ, ಕ್ರೀಡಾ ಕ್ಷೇತ್ರದಿಂದ ಎಸ್.ವಿಜಯಲಕ್ಷ್ಮಿ ಬಿನ್ ಹೆಚ್.ಆರ್.ರಾಮಾಚಾರ್ ಮತ್ತು ದತ್ತಾತ್ರೆಯ ರಾಮಚಂದ್ರಶರ್ಮ ಬಿನ್ ಬಾಸ್ಕರ ಶರ್ಮ ತುಂಬಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಾಧುಸೂದನ ಬಿನ್ ನಾಗರಾಜು ಬೈಚೇನಹಳ್ಳಿ ಹಾಗೂ ತಿಮ್ಮರಾಜು ಬಿನ್ ಪುಟ್ಟತಿಮ್ಮಯ್ಯ ಬುಕ್ಕಪಟ್ಟಣ, ಸಮಾಜಸೇವೆ ಕ್ಷೇತ್ರದಲ್ಲಿ ಆರ್.ರಮೇಶ್ ಬಿನ್ ರಾಮಣ್ಣ ಅರಸಾಪುರ, ರಂಗಭೂಮಿ ಕ್ಷೇತ್ರದಿಂದ ಎಮ್.ವಿ.ವೆಂಕಟಪ್ಪ ಬಿನ್ ವೆಂಕಟಶ್ಯಾಮಯ್ಯ ಮಾವತ್ತೂರು, ಜಯಶ್ರೀ ಬಿನ್ ಮರುತಿಗೌಡ ಹುಲುವಂಗಲ, ಡಿ.ಎಂ.ರವಿ ಕುಮಾರ್ ಬಿನ್ ಮಾರಣ್ಣ ದಾಸರಹಳ್ಳಿ, ನರೇಂದ್ರ ಬಿನ್ ಕದಿರಯ್ಯ ಗಾಂಧಿನಗರ ರವರನ್ನು ಅಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಆಯ್ಕೆ ಸಮಿತಿಯ ಸಭೆಯಲ್ಲಿ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ.ಇಓ ಡಾ.ದೊಡ್ಡಸಿದ್ದಯ್ಯ, ಕಾರ್ಯದರ್ಶಿ ಕೃಷಿ ಸಹಾಯಕ ನಿದೇರ್ಶಕ ನಾಗರಾಜು, ತಾ.ಪಂ. ಕಛೇರಿಯ ವ್ಯವಸ್ಥಾಪಕಿ ಪವಿತ್ರ, ವಿಷಯನಿರ್ವಹಕ ರಮೇಶ್‌ಬಾಬು, ಸಾಕ್ಷರತಾ ಸಂಯೋಜಕ ಚಂದ್ರಶೇಖರ್, ರಾಜ್ಯೋತ್ಸವ ಪುರಸ್ಕೃತ ಮೈಲಾರಪ್ಪ, ಕ.ರ.ವೇ ಅಧ್ಯಕ್ಷ ನಟರಾಜು, ಡಾ.ಜಿ.ಪರಮೇಶ್ವರ್ ಕ್ರೀಡಾ ಮತ್ತು ಸಾಂಸ್ಕೃತಿ ವೇದಿಕೆ ಅದ್ಯಕ್ಷ ಕೆ.ಆರ್.ಓಬಳರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪರುಷೋತ್ತಮ್, ಹಿರಿಯ ಪತ್ರಕರ್ತ ಎನ್.ಪದ್ಮನಾಭ್, ಕಸಾಪ ಅಧ್ಯಕ್ಷ ಕೃಷ್ಣಮೂರ್ತಿ, ಡಾ.ರಾಜಕುಮಾರ್ ಅಭಿಮಾನಿಸಂಘದ ಅಧ್ಯಕ್ಷ ಕೆ.ಆರ್.ನಾಗೇಂದ್ರ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪುಟ್ಟಣ್ಣ ಉಪಸ್ಥಿತರಿದ್ದರು.