ತುಮಕೂರು: ಕನ್ನಡ ನಾಡಿಗೆ ಇರುವ ಸಾಹಿತ್ಯ ಶ್ರೀಮಂತಿಕೆ ಬೇರೆ ಸಾಹಿತ್ಯಕ್ಕೆ ಇಲ್ಲ, ಇವನ್ನು ರಕ್ಷಿಸಿ ಮುಂದಿನ ಪೀಳಿಗಾಗಿ ಉಳಿಸುವ ಕೆಲಸ ಆಗಬೇಕು ಎಂದು ಶಾಸಕ ಬಿ.ಜ್ಯೋತಿಗಣೇಶ್ ಹೇಳಿದರು.
ಅವರು ಇಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ‍್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಾಧಕರಿಗೆ ಸನ್ಮಾನ ಸಮಾರಂಭ – ೨೦೨೨ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಡಳಿತವು ಸಮಿತಿಯ ಮೂಲಕ ಪ್ರಶಸ್ತಿಗೆ ಅರ್ಹರನ್ನು ಪಟ್ಟಿ ಮಾಡಿ ಗುರುತಿಸಿ, ಸಾಧಕರಿಗೆ ಪ್ರಶಸ್ತಿ ನೀಡುತ್ತಿದೆ, ಸಾಹಿತ್ಯ, ಕಲೆ, ಸಂಸ್ಕೃತಿ, ನೃತ್ಯ, ಇತ್ಯಾಧಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಉತ್ತಮ ಸಮಾಜ ನಿರ್ಮಾಣಕ್ಕೆ ನಿರ್ಲಿಪ್ತ ಭಾವನೆಯಿಂದ ಸೇವೆ ಮಾಡುತ್ತಿದ್ದಾರೆ, ಇಂತಹ ಸ್ವಂತ ಪರಿಶ್ರಮ, ಪರೋಪಕಾರದ ಭಾವನೆಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ, ಹೃದಯ ವೈಶಾಲ್ಯತೆ, ಸ್ವಾಭಿಮಾನಿ ಗುಣ, ಪರಿಶ್ರಮ, ಸಹಿಷ್ಣುತೆಗಳಲ್ಲಿ ಢಕನ್ನಡಿಗರಿಗೆ ಕನ್ನಡಿಗರೇ ಸಾಟಿ. ಕನ್ನಡ ಭಾಷೆಯು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಶ್ರೀಮಂತವಾಗಿದ್ದು, ಕನ್ನಡ ಭಾಷಾ ಸಾಹಿತ್ಯವನ್ನು ಪ್ರತಿಯೊಬ್ಬರು ಅರಿತು ಉಳಿಸಿ-ಬೆಳೆಸಿ ಸಮೃದ್ಧ ವಾಗಿಸಬೇಕು ಎಂದರು.

ಜಿಲ್ಲಾಧಿಕಾರಿ ವ್ಯೆ.ಎಸ್. ಪಾಟೀಲ ಮಾತನಾಡಿ, ನಾವೆಲ್ಲರೂ ಇಲ್ಲಿ ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಸಾಧನೆ ಮಾಡಿದಂತಹ ವಿಶೇಷ ಪ್ರತಿಭೆಗಳಿಗೆ ಸನ್ಮಾನ ಮಾಡಲು ಸೇರಿದ್ದೆವೆ, ಸಾಧಕರ ಶ್ರಮ ಹಾಗೂ ಸಾಧನೆಗಳ ಹಾಗೂ ಸರ್ಕಾರದ ಮಾನದಂಡ ಮೇಲೆ ಆಯ್ಕೆಮಾಡಲಾಗಿದೆ ಎಂದರು
ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವ್ಯೆ.ಎಸ್. ಪಾಟೀಲ ಸಾಧನೆ ಮಾಡಿದಂತಹ ವಿಶೇಷ ಪ್ರತಿಭೆಗಳಿಗೆ ಸನ್ಮಾನಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಸ್ವಾಗತಿಸಿದರು
ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾದ ಮಹನೀಯರ ಪಟ್ಟಿ:-
ರಂಗಭೂಮಿ ಕ್ಷೇತ್ರ : ಹೆಚ್.ಟಿ.ದಾಸಪ್ಪ, ಹಾರ್ಮೋನಿಯಂ ಮಾಸ್ಟರ್ ಮತ್ತು ನಾಟಕ ಸಂಗೀತ ನಿರ್ದೇಶಕರು, ಗುಬ್ಬಿ ತಾಲ್ಲೂಕು, ಎಲ್ ಹೆಚ್ ರಂಗನಾಥಪ್ಪ ಶಿರಾ ತಾಲ್ಲೂಕು.ಗಂಗಣ್ಣ ತುಮಕೂರು ತಾಲ್ಲೂಕು.ಟಿ ಸಿ ಹನುಮಂತರಾಜು, ನಾಟಕ ನಿರ್ದೇಶಕರು, ತುಮಕೂರು.ಮಲ್ಲಿಕಾರ್ಜುನಯ್ಯ ಜಿ (ಮೀಸೆ), ಚಿಕ್ಕನಾಯಕನಹಳ್ಳಿ ತಾಲ್ಲೂಕು, ಕುಮಾರಸ್ವಾಮಿ ಜಿ.ಸಿ (ಕುಮಾರ್ ಗುಬ್ಬಿ ವೀರಣ್ಣ), ತುಮಕೂರು, ಚಂದ್ರಪ್ಪ.
ಜಾನಪದ ಕ್ಷೇತ್ರ: ಆರ್.ಎನ್ ಲಿಂಗಪ್ಪ ಪಾವಗಡ ತಾಲ್ಲೂಕು. ಎಂ.ಬಿ.ಬಸವಚಾರ್, ತುರುವೇಕೆರೆ ತಾಲ್ಲೂಕು, ಪುಟ್ಟಸ್ವಾಮಿ ಎ ಆರ್ ತಿಪಟೂರು ತಾಲ್ಲೂಕು. ತಿಮ್ಮಯ್ಯ ಗುಬ್ಬಿ ತಾಲ್ಲೂಕು,ವಿಶ್ವನಾಥ್ ಚಿಕ್ಕೆನಹಳ್ಳಿ,
ಪತ್ರಿಕೋದ್ಯಮ ಕ್ಷೇತ್ರ:ಎಂ ಡಿ ಮೋಹನ್, ವರದಿಗಾರರು, ಚಿಕ್ಕನಾಯಕನಹಳ್ಳಿ ತಾಲ್ಲೂಕು. ಟಿ.ಎಸ್.ಕೃಷ್ಣಮೂರ್ತಿ ಸಂಪಾದಕರು, ಪ್ರಜಾಮನ ಕನ್ನಡ ದಿನಪತ್ರಿಕೆ, ತುಮಕೂರು,ಕೆ.ಎ. ರಾಜೇಂದ್ರ ಕುಮಾರ್, ಜೆ.ಪಿ. ಇಮೇಜಸ್, ತುಮಕೂರು. ವಿ ಎನ್ ಉಮಾಶಂಕರ್, ಪತ್ರಕರ್ತರು, ಕೊರಟಗೆರೆ ಟೌನ್.ಸುಲೋಜನ, ಜೆ.ಎಸ್, ಗೋವಿಂದಪ್ಪ,
ಸAಗೀತ ಮತ್ತು ನೃತ್ಯ ಕ್ಷೇತ್ರ: ಲಲಿತಾಂಬ ಎಲ್, ಲಾಲಿತ್ಯ ಸಂಗೀತ ಶಾಲೆ, ಮಧುಗಿರಿ.ಸಿದ್ದಲಿಂಗಯ್ಯ ಹಿರೇಮಠ್, ಹಿಂದೂಸ್ಥಾನಿ ಸಂಗೀತ ಗಾಯಕರು, ತುಮಕೂರು.ನಾಗಭೂ಼ಷಣ್,
ಸಮಾಜ ಸೇವೆ: ಸುನಂದ ಬಿ ಹೆಚ್, ಶ್ರೀ ಸತ್ಯಪ್ರೇಮಾ ಸಾಯಿ ಮಹಿಳಾ ಸಮೂಹ(ರಿ), ತುಮಕೂರು.ಕೆ.ವಿ.ಗುರುಪ್ರಸಾದ್ ತುಮಕೂರು. ಎಂ ಎಸ್ ಸ್ವರ್ಣಗೌರಿ, ತಿಪಟೂರು ಟೌನ್ ಸಂತ ಗ್ರಿಗೋರಿಯಸ್ ಕುಣಿಗಲ್ ತಾಲ್ಲೂಕು. (ಸಂಸ್ಥೆ). ನವೀನ್ ಕುಮಾರ್.
ಕ್ರೀಡಾ ಕ್ಷೇತ್ರ:ಪುಟ್ಟಸ್ವಾಮಿ, ಹಿರಿಯ ನಾಗರೀಕರು, ತುಮಕೂರು. ಕೆ ಹೆಚ್ ಪ್ರಜ್ವಲ್ ತುಮಕೂರು. ಟಿ ಸಿ ಮುಕ್ತಾಂಭ ತುಮಕೂರು. ರಘು,ನರೇಶ್ ಬಾಬು,
ಸಂರ್ಕೀಣ: ಉಮಾ ಮಹೇಶ್ ತುಮಕೂರು ಸುನೀತಾ ಮೂರ್ತಿ, ತುಮಕೂರು ಪ್ರೊ.ಕೆ.ಸಿದ್ಧಪ್ಪ, ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕರು, ತುಮಕೂರು.
ಸಾಹಿತ್ಯ: ಡಾ|| ಪ್ರಕಾಶ್ ಕೆ ನಾಡಿಗ್, ತಾಲ್ಲೂಕು. ಎಂ ವಿ ಶಂಕರಾನAದ, ತುಮಕೂರು.
ಶೈಕ್ಷಣಿಕ : ಕೆ.ವಿ.ಕೃಷ್ಣಮೂರ್ತಿ ನಿವೃತ್ತ ಪ್ರಾಧ್ಯಾಪಕರು, ತುಮಕೂರು. ಲಕ್ಷ್ಮಮ್ಮ, ಕಾರ್ಯದರ್ಶಿಗಳು, ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮ, ತುಮಕೂರು ತಾಲ್ಲೂಕು.
ವೈದ್ಯಕೀಯ :ಡಾ|| ಜಿ.ಎಸ್.ಶ್ರೀಧರ್, ಕುಮಾರ್ ಆಸ್ಪತ್ರೆ, ತಿಪಟೂರು. ಡಾ.ಬಿ.ನಂಜುAಡಸ್ವಾಮಿ ತುಮಕೂರು.
ಕೃಷಿ: ಬಸವರಾಜು, ತಿಪಟೂರು ಟೌನ್.
ಸಂಶೋಧನೆ: ಡಾ. ಎನ್.ನಂದಿಶ್ವರ, ಇತಿಹಾಸ ಸಂಶೋಧಕರು, ಶಿರಾ ಟೌನ್.
ಗಡಿನಾಡ ಸೇವೆ :ಎಂ ಎನ್ ನರಸಿಂಹಮೂರ್ತಿ,ಮಧುಗಿರಿ ತಾಲ್ಲೂಕು.
ಕನ್ನಡ ಪರ ಸಂಘಟನೆ :ವಿಷ್ಣುವರ್ಧನ್, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣಗೌಡ ಬಣ) ತುಮಕೂರು ಜಿ.ಟಿ.ಯಲ್ಲೇಶ್ ಗೌಡ, ತುಮಕೂರು ತಾ: ಸೋಮಶೇಖರ್, ತುಮಕೂರು. ಸುಧೀರ್ ಸಿ.ಪಿ, ತುಮಕೂರು. ಆನಂದ, ಅನಿಲ್ ಕುಮಾರ್,
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಲಾವಿಧರು, ಕಲಾಭಿಮಾನಿಗಳು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.