ಕ್ಷೇತ್ರದ ಜನತೆಯ ಅಭಿಮಾನ ವಿಶ್ವಾಸ ಹೀಗೆ ಇರಲಿ: ಕೆ ಎನ್ ರಾಜಣ್ಣ

ಮಧುಗಿರಿ : ಕ್ಷೇತ್ರದ ಜನತೆಯ ಅಭಿಮಾನ ವಿಶ್ವಾಸ ಹೀಗೆ ಇರಲಿ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ತಿಳಿಸಿದರು. 

ಪಟ್ಟಣದ ಸ್ವಗೃಹದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ಮತ್ತು ಆಟೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಟ್ಟಣದ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ರಸ್ತೆಗಳಲ್ಲಿ ಸಂಚರಿಸುವಾಗ ಚಾಲಕರು ಅನುಭವಿಸುವ ಸಂಕಷ್ಟದ ಅರಿವಿದೆ. ಇದರ ಬಗ್ಗೆ ಕನ್ನಡಪರ ಸಂಘಟನೆಗಳು ಧ್ವನಿ ಎತ್ತುವ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಹೋರಾಟ ನಡೆಸಿರುವುದು ಶ್ಲಾಘನೀಯ. ಮುಂದೆಯೂ ಸಹ ಕನ್ನಡಪರ ಸಂಘಟನೆಗಳು ಪ್ರಗತಿಪರ ಹೋರಾಟಗಳನ್ನು ಮಾಡುವಂತಾಗಲಿ ಎಂದ ಅವರು ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ನಿಮ್ಮ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದರು. 

ಇದೇ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ರಾಘವೇಂದ್ರ ನೇತೃತ್ವದಲ್ಲಿ ಕನ್ನಡಾಂಬೆಯ ಬಾವುಟ ಮತ್ತು ಪುನೀತ್ ರಾಜ್ ಕುಮಾರ್ ರವರ ಬಾವಚಿತ್ರವನ್ನು ಹಿಡಿದು ಕನ್ನಡಪರ ಘೋಷಣೆಗಳನ್ನು ಕೂಗುತ್ತಾಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆಯನ್ನು ಮಾಡಲಾಯಿತು. 

ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಶಿವಲಿಂಗಪ್ಪ, ನಗರ ಕಾರ್ಯಧ್ಯಕ್ಷ ರೋಹಿತ್, ನಗರ ಕಾರ್ಯದರ್ಶಿ ಪ್ರದೀಪ್, ಆಟೋ ಚಾಲಕರ ಘಟಕ ಅಧ್ಯಕ್ಷ ಹರೀಶ್, ಹಳೆ ತಿಮ್ಮನಹಳ್ಳಿ ಘಟಕ ಅಧ್ಯಕ್ಷ ನಂಜಪ್ಪ, ಪದಾಧಿಕಾರಿಗಳಾದ ಹೇಮಂತ್, ಮಹೇಶ್, ಲಕ್ಷ್ಮೀಶ, ಮಂಜು, ಜಯಪ್ರಕಾಶ್, ರಂಜಿತ್ ಇತರರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!