ಪಾವಗಡ : ಗಡಿನಾಡು ಪಾವಗಡ ಸುತ್ತಲೂ ಆಂದ್ರಪ್ರದೇಶ ಸುತ್ತುವರೆದರು ತಾಲೂಕು ಅಭಿವೃದ್ದಿ ಸಾಗುತ್ತಿದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ತಾಲೂಕು ಆಡಳಿತ, ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಅಮ್ಮಿಕೊಂಡಿದ್ದಾ 67 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನೆಲಜಲ ರಕ್ಷಣೆಗಾಗಿ ಹಲವರ ಹೋರಾಟದ ಫಲವಾಗಿದ್ದು, ಗಡಿನಾಡಿನಲ್ಲಿ ಕನ್ನಡ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದ್ದು, ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೋಳೆ, ತುಂಗಭದ್ರಾ ಕುಡಿಯುವ ನೀರಿನ ಯೋಜನೆಗಳು ಬರದಿಂದ ಸಾಗುತ್ತಿವೆ, ಜೋತೆಗೆ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚು ಒತ್ತನ್ನ ನೀಡಲಾಗಿದೆ ಅಲ್ಲದೆ ಪಾವಗಡ ತಾಲೂಕು ಹಲವು ನೀರಾವರಿ ಯೋಜನೆಗಳು, ರೈಲ್ವೆ ಮಾರ್ಗ ಸೇರಿದಂತೆ ಇತರೇ ಅಭಿವೃದ್ದಿ ಕಾಮಗಾರಿಗಳಿಂದ ಅಭಿವೃದ್ದಿಯತ್ತ ಸಾಗುತ್ತಿದೆ ಎಂದರು.
67 ಕನ್ನಡ ರಾಜ್ಯೋತ್ಸವದ ಪ್ರಾಸ್ತಾವಿಕ ನುಡಿಗಳನ್ನಾಡಿದ ತಹಸೀಲ್ದಾರ್ ವರದರಾಜು ಹಸಿರಾಗಲಿ ಕನ್ನಡನಾಡು ಉಸಿರಾಗಲಿ ಕನ್ನಡ, ಹಲವರ ಹೋರಾಟದ ಪ್ರತಿ ಫಲದಿಂದ ಉದಯವಾಯಿತ್ತು ಚೆಲುವಕನ್ನಡನಾಡು, ವಿಜಯ ನಗರ ಅರಸರ ನೆಚ್ಚಿನ ಬೀಡು ಕನ್ನಡನಾಡು ಎಂದಾ ಅವರು ಪಾವಗಡದಲ್ಲಿ ವಿಶ್ವದ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ವಿಶ್ವಕ್ಕೆ ತಾಲೂಕನ್ನ ಪರಿಚಯಿಸಿದೆ, ಹಲವು ಅಭಿವೃದ್ದಿ ಯೋಜನೆಗಳಿಂದ ತಾಲೂಕು ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ ಎಂದರು.
ಕಸಾಪ ಅಧ್ಯಕ್ಷರಾದ ಕಟ್ಟಾ ನರಸಿಂಹ್ಮಮೂರ್ತಿರವರು ಮಾತನಾಡಿ ಕೋವಿಡ್ ಕರಿನೆರಳಿನ ಎರಡು ವರ್ಷಗಳ ನಂತರ ಆದ್ದೂರಿ ಕನ್ನಡ ರಾಜ್ಯೋತ್ಸವವನ್ನ ಆಚರಣೆ ಮಾಡುತ್ತಿದ್ದು, ಶಾಸಕರು ಮತ್ತು ಪುರಸಭೆ ವತಿಯಿಂದ ಕನ್ನಡ ಭವನಕ್ಕೆ ನಿವೇಶನ ನೀಡಿದ್ದಾರೆ, ಕರ್ನಾಟಕ್ಕೆ ಪಾವಗಡ ಮೇರಗು, ರಾಜ್ಯದಲ್ಲೇ ಪಾವಗಡವನ್ನ ಪ್ರತಿನಿಧಿಸುವಂತಹ ಕಲಾವಿದರನ್ನ ಈ ತಾಲೂಕು ಪಡೆದಿದೆ ನವೆಂಬರ್ 14 ರಿಂದ ಡಿಸೆಂಬರ್ 18ರವರೆಗೂ ಶಾಲೆಗೊಂದು ಕನ್ನಡ ಕಾರ್ಯಕ್ರಮವನ್ನ ಅಮ್ಮಿಕೊಂಡಿದ್ದು ಪ್ರತಿಯೋಬ್ಬರು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದರು.
ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ : ಜನಪದಕಲೆ ಕ್ಷೇತ್ರದಿಂದ : ಆರ್.ಎನ್.ಲಿಂಗಪ್ಪ, ಕೆ.ನರೇಶ್, ನಾಗರಾಜು, ನವೀನ್,ಹನುಂಮತರಾಯ, ಸಾಹಿತ್ಯ ಕ್ಷೇತ್ರದಿಂದ : ಡಿ.ವಿ.ಪ್ರಹ್ಲಾದ, ರಂಗಭೂಮಿ : ಎಂ.ಗೋವಿಂದಪ್ಪ, ತಿಪ್ಪೇಸ್ವಾಮಿ, ಕೆ.ಜಿ.ಲಕ್ಷ್ಮಿನಾರಾಯಣ, ಸಮಾಜಸೇವೆ : ವಿ.ಎಸ್.ನಾಗೇಶ್, ಬಿ.ಎಂ.ನಾಗರಾಜು, ಶ್ರೀಧರಗುಪ್ತ, ಹಾಗೂ ಪೌರ ಕಾರ್ಮಿಕರಾದ ಓಬಳೇಶಪ್ಪ, ಲಕ್ಷ್ಮಿನರಸಮ್ಮ, ಪಾರಂಪರಿಕ ವೈದ್ಯರಾದ ಗೌಡತಿಮ್ಮನ ಹಳ್ಳಿ ಕಾವಲಪ್ಪ, ಗಡಿನಾಡು ಕನ್ನಡಸೇನೆಯ ನರಸೀಪಾಟೀಲ್, ಕೆ.ಎಂ.ಶ್ರೀನಿವಾಸುಲು, ಮಾಧ್ಯಮ ಕ್ಷೇತ್ರದಿಂದ: ರಾಮಪುರಂ ನಾಗೇಶ್ ಪಿ.ಜಿ.ಶ್ರೀನಾಥ್, ಚಂದ್ರಪ್ಪ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಇಒ ಶಿವರಾಜಯ್ಯ, ಕಸಪಾ ಮಾಜಿ ಅಧ್ಯಕ್ಷರಾದ ಆರ್.ಟಿ.ಖಾನ್, ರೈತ ಮುಖಂಡರಾದ ಪೂಜಾರಪ್ಪ, ನರಸಿಂಹ್ಮರೆಡ್ಡಿ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.