ಜೆ ಡಿ.ಎಸ್.ಪಕ್ಷದ ರಾಜ್ಯ ಉಪಾಧ್ಯಕ್ಷ ನಿವೃತ್ತ ತಹಶೀಲ್ದಾರ್ ಭೀಮಪ್ಪ.ತಳವಾರ ರಾಜೀನಾಮೆ

ಬಾದಾಮಿ: ಬಾದಾಮಿಯಲ್ಲಿ ಇಂದು ಜೆ ಡಿ.ಎಸ್.ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿವೃತ್ತ ತಹಶೀಲ್ದಾರ್ ಭೀಮಪ್ಪ.ತಳವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಕೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಇಂದು ಜೆ.ಡಿ.ಎಸ್.ಪಕ್ಷದ ರಾಜ್ಯ ಉಪಾಧ್ಯಕ್ಷರು ನಿವೃತ್ತ ತಹಶೀಲ್ದಾರ್ ಆದ ಭೀಮಪ್ಪ.ತಳವಾರ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರು.

ತಾಲೂಕು ಹಾಗೂ ಜಿಲ್ಲೆಯಲ್ಲಿ ತಮ್ಮದೇ ಆದ ಜನ ಬಳಗವನ್ನು ಹಾಗೂ ಹಿಂದುಳಿದ ವರ್ಗಗಳ ಅಪಾರ ಬೆಂಬಲ ಹೊಂದಿರುವ ನಿವೃತ್ತ ತಹಶೀಲ್ದಾರ್ ಕೂಡ ಆಗಿದ್ದ ಭೀಮಪ್ಪ.ತಳವಾರ ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದಲ್ಲಿ ರಾಜ್ಯ ಉಪಾಧ್ಯಕ್ಷ ಸ್ಥಾನ ಇದ್ದರೂ ಕೂಡ ಸ್ಥಾನ ಮಾನ ಸಮಾನತೆಯನ್ನು ಕೊಡದೆ ಅಸಮಾಧಾನ ಆಗಿರುವುದನ್ನು ಅರಿತ ನನ್ನ ಅಪಾರ ಬೆಂಬಲಿಗರು ರಾಜೀನಾಮೆ ನೀಡಲು ಸಮ್ಮತಿಸಿದ ಕಾರಣ ನನ್ನ ಅಪಾರ ಹಿಂದುಳಿದ ವರ್ಗಗಳ ಜನರ ಜೊತೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಧ್ಯಮದ ಎದುರು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಪಿ.ಎಸ್.ಕವಡಿಮಟ್ಟಿ,ಸಿದ್ದಪ್ಪ ಬಿ.ತಳವಾರ,ನಾಗರಾಜ್ ದೊಡಮನಿ,ಕನಕಪ್ಪ.ಪರಸನ್ನವರ.ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!