ಕೊರಟಗೆರೆ : ಲೋಕ ಅದಾಲತ್ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರಗಳ ಬಗ್ಗೆ ಹಾಗೂ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಿರಿಯ ಸಿವಿಲ್ ನ್ಯಾಯಾಧೀಶರ ನೇತೃತ್ವದಲ್ಲಿ ವಕೀಲರ ತಂಡ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್ ಜೆ.ಎನ್ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ ಅವರಲ್ಲಿ ಕಾನೂನಿಗೆ ಬಗ್ಗೆ ತಿಳುವಳಿಕೆ ಮೂಡಿಸುವ ಮೂಲಕ ಕಾನೂನಿನ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂಬುದು ಈ ಜಾಥಾದ ಉದ್ದೇಶವಾಗಿದೆ ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಜಾಥ ಮಾಡುತ್ತಾ ಜನಸಾಮಾನ್ಯರಿಗೆ ಉಚಿತ ಕಾನೂನು ನೆರವಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಎಲ್ಲ ಪದಾಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕರು ಇದ್ದಲ್ಲಿಯೇ ತೆರಳಿ ಅವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಎಲ್ ನಾಗರಾಜು ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಮಾರ್ಗದರ್ಶನಗಳು ನಮ್ಮೆಲ್ಲರಿಗೂ ಸ್ಫೂರ್ತಿ, ಅವರಂತೆ ಮುಂದಿನ ಪೀಳಿಗೆಯೂ ದೇಶಕ್ಕೆ ಮಾದರಿಯಾಗಬೇಕು ಹಾಗೂ ಭಾರತದಲ್ಲಿ ಜಾರಿಯಾಗಿರುವ ಹಲವು ಕಾನೂನು ಕ್ರಮಗಳು ಹಾಗೂ ಕಾನೂನಿಗೆ ಸಂಬAಧಪಟ್ಟ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಸುವುದು ವಕೀಲರಾದ ನಮ್ಮೆಲ್ಲರ ಕರ್ತವ್ಯ, ಅದರಂತೆ ಇಂದು ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕ ಪಕ್ಕದಲ್ಲಿರುವ ಅಂಗಡಿ ಮಾಲೀಕರಿಗೆ, ಸಾರ್ವಜನಿಕರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಭಾರತದ ಸಂವಿಧಾನದ ಮಹತ್ವ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, ಮೋಟಾರು ವಾಹನ ಅಧಿನಿಯಮ, ೨೦೦೫ರ ಹಿಂದೂ ವಾರಸಾ ಅಥವಾ ತಿದ್ದುಪಡಿ ಅಧಿನಿಯಮ ಇನ್ನೂ ಅನೇಕ ಜನಸಾಮಾನ್ಯರ ಕುಂದು ಕೊರತೆಗಳ ಬಗ್ಗೆ ಅರಿವು ಮೂಡಿಸುವುದೇ ಈ ಉಚಿತ ಕಾನೂನು ಸಲಹೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ಹೆಚ್.ವಿ ಶಿವಕುಮಾರ್, ಎಂ.ಸಿ ಮಲ್ಲಿಕಾರ್ಜುನ್, ಸಂತೋಷ್, ಲಕ್ಷಿ÷್ಮ, ಜಿ.ಎಂ ಕೃಷ್ಣಮೂರ್ತಿ, ಡಿ.ಸಿ ಶಿವರಾಮಯ್ಯ, ಬಿ.ಎಸ್ ನಾಗೇಂದ್ರಪ್ಪ, ಟಿ.ಕೃಷ್ಣ ಮೂರ್ತಿ, ಬಿ.ಪುಟ್ಟರಾಜಯ್ಯ, ಸಂಜೀವ ರಾಜು, ನರಸಿಂಹರಾಜು, ಎಚ್.ಆರ್ ರಾಮಚಂದ್ರಯ್ಯ, ಟಿ.ಕೃಷ್ಣಪ್ಪ, ಕೆ.ವಿ ಅನಿಲ್ ಕುಮಾರ್, ಪಿ.ಸುನೀಲ್, ಅರುಂಧತಿ, ಕೆಂಪರಾಜಮ್ಮ, ವೃಂದ, ಪ್ರಕಾಶ್, ಮಧುಸೂದನ್, ಕೋಮಲ ಗಿರೀಶ್, ಕೆ.ಸಿ ನಾಗರಾಜು, ತಿಮ್ಮೇಶ್, ಎಂ.ಹೆಚ್ ಮಂಜುನಾಥ್, ಎಸ್.ಎನ್ ಹನುಮಂತರಾಜು, ಎ.ಎಂ ಕೃಷ್ಣಮೂರ್ತಿ, ವೃಷಭೇಂದ್ರಸ್ವಾಮಿ, ಅನಂತರಾಜು, ಎಂ.ಎಸ್ ಸಂತೋಷ್, ಕೆ.ಕೃಷ್ಣಮೂರ್ತಿ, ಡಿ.ಜಿ ತಿಮ್ಮರಾಜು, ಹುಸೇನ್ ಪಾಷಾ ಸೇರಿದಂತೆ ಪೊಲೀಸ್ ಇಲಾಖೆಯ ಎ.ಎಸ್.ಐ ಮಂಜುನಾಥ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ-ಹರೀಶ್ ಬಾಬು ಬಿ.ಹೆಚ್. ಕೊರಟಗೆರೆ.