ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ರನ್ನು ಅಭಿನಂದಿಸಿದ ಗುಬ್ಬಿ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರು

ಗುಬ್ಬಿ: ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಮಾಡಿದ ಶಾಸಕರ ಪೈಕಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವರನ್ನು ಗುಬ್ಬಿ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.

ಶಾಸಕರ ಕೆಲಸದ ವೈಖರಿ ಇಡೀ ಜಿಲ್ಲೆಗೆ ಹೆಸರು ತಂದಿದೆ. ಅವರ ಬಳಿ ನಮ್ಮ ಸಂಘದ ಕೆಲ ವಿಚಾರ ಪ್ರಸ್ತಾಪಿಸಿ ಮನವಿ ನೀಡಲು ತುರುವೇಕೆರೆಯ ಶಾಸಕರ ಕಚೇರಿಗೆ ತೆರಳಿ ಶಾಸಕರನ್ನು ಅಭಿನಂದಿಸಿ ನಮ್ಮ ಬೇಡಿಕೆ ಸಲ್ಲಿಸಿ ಸಂಘದ ಕಟ್ಟಡ ನಿರ್ಮಾಣಕ್ಕೆ ಅವರ ಸಹಕಾರ ಕೋರಿದ್ದೇವೆ ಎಂದು ಸಂಘದ ನಿರ್ದೇಶಕ ಹಾಗೂ ಎಪಿಎಂಸಿ ಮಾಜಿ ಸದಸ್ಯ ವೀರಭದ್ರಯ್ಯ ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಶಾಸಕ ಮಸಾಲಾ ಜಯರಾಮ್ ಮಾತನಾಡಿ ನಿವೃತ್ತ ನೌಕರರ ತುಂಬು ಜೀವನಕ್ಕೆ ಸರ್ಕಾರದಿಂದ ಮತ್ತಷ್ಟು ಅನುವು ಮಾಡಲು ಸಿದ್ಧವಿದೆ. ಹಿರಿಯ ನಾಗರೀಕರಿಗೆ ಸಿಗುವ ಸೌಲಭ್ಯ ಹೆಚ್ಚಿಸಿ ಜೊತೆಗೆ ಸಂಘದ ಕಟ್ಟಡಕ್ಕೆ ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಸಹಕಾರ ನೀಡುವ ಭರವಸೆ ಕೊಟ್ಟರು.

ಈ ಸಂದರ್ಭದಲ್ಲಿ ಗುಬ್ಬಿ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ರಾಮಯ್ಯ, ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್, ನಿರ್ದೇಶಕರಾದ ಆರ್.ಬಿ.ಜಯಣ್ಣ, ಶಿವನಂಜಯ್ಯ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!