ಬಾದಾಮಿ: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ ಎಲ್ಲಾ ಸಮುದಾಯದವರ ಮೆಚ್ಚುಗೆ ಗಳಿಸುವಲ್ಲಿ ಆಮ್ ಆದ್ಮಿ ಒಂದು ಹೆಜ್ಜೆ ಮುಂದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ದಲ್ಲಿಯ ಆಮ್ ಆದ್ಮಿ ಪಕ್ಷ ದ ಸದಸ್ಯತ್ವ ನೋಂದಣಿ ಹಮ್ಮಿಕೊಳ್ಳಲಾಗಿತ್ತು.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಬೀದಿ ಬಸವೇಶ್ವರ ದೇವಸ್ಥಾನದಿಂದ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ ನೋಂದಣಿ ಪ್ರಾರಂಭವಾಯಿತು. ನಂತರ ಮುಖ್ಯ ಮಾರ್ಕೆಟ್ ನಲ್ಲಿ ಸಂಚರಿಸಿ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಯಲ್ಲಿ ನ ಜನಪರ ಕೆಲಸಗಳ ಬಗ್ಗೆ ವಿವರಣೆ ನೀಡುತ್ತಾ ಜನರಿಗೆ ತಿಳಿ ಹೇಳುತ್ತಾ ಸಾಗಿದ ಅಭಿಯಾನ, ಜನರೇ ಸ್ವ ಇಚ್ಛೆಯಿಂದ ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಿಕೊಂಡು ಪಕ್ಷ ಸೇರ್ಪಡೆ ಯಾದರು.
ಸಾಕಷ್ಟು ಜನ ಮಹಿಳೆಯರು ಪುರುಷರು ಸೇರಿದಂತೆ ಸ್ವಯಂ ಪ್ರೇರಿತವಾಗಿ ಆಮ್ ಆದ್ಮಿ ಸದಸ್ಯತ್ವ ನೋಂದಣಿ ಮಾಡಿಕೊಂಡು ಆಮ್ ಆದ್ಮಿಗೆ ಸೇರ್ಪಡೆಯಾಗಿ ಅರವಿಂದ ಕೇಜ್ರಿವಾಲ್ ಅವರ ಆಡಳಿತವನ್ನು ಮೆಚ್ಚಿ ಪಕ್ಷಕ್ಕೆ ಸೇರಿದರು.
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಬಾದಾಮಿ ಮತಕ್ಷೇತ್ರದ ಸಂಯೋಜಕರಾದ ಮಲ್ಲಿಕಾರ್ಜುನ್ ಕಲಾದಗಿ,, ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿ ಅರವಿಂದ್ ಮುಚಖಂಡಿ,,ಜಿಲ್ಲಾ ಉಪಾಧ್ಯಕ್ಷರಾದ ಕೆ. ಎಚ್.ಕಲಾದಗಿ ಭಾಗವಹಿಸಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ