ನಿಟ್ಟೂರು ಗ್ರಾಮದಲ್ಲಿ ಸ್ವಚ್ಛ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಿದ ಗ್ರಾಪಂ

ನಿಟ್ಟೂರು : ಮಾದರಿ ಗ್ರಾಮ ಪಂಚಾಯಿತಿ ಎನಿಸಿ ಜನತೆಯ ಆರೋಗ್ಯ ಕಾಳಜಿ ವಹಿಸಿದ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವತಿಯಿಂದ ನಿಟ್ಟೂರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪ್ರತಿ ವಾರಕ್ಕೊಮ್ಮೆ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನ ನಿಟ್ಟೂರು ಗ್ರಾಮದ ಸ್ವಚ್ಚತೆ ಆದ್ಯತೆ ನೀಡಿದ್ದು, ಎಲ್ಲಾ ಕಾರ್ಮಿಕರೊಟ್ಟಿಗೆ ಕಸ ವಿಲೇವಾರಿ ವಾಹನ ಬಳಸಿಕೊಂಡು ಶನಿವಾರದಂದು ಇಡೀ ದಿನ ಸ್ವಚ್ಚ ಕಾರ್ಯ ನಡೆಸುವ ಅಭಿಯಾನ ಆರಂಭಿಸಲಾಗಿದೆ.

ಗ್ರಾಮದ ಸಂತೆ ಬೀದಿಯಲ್ಲಿ ರಾಶಿ ರಾಶಿ ಬಿದ್ದಿದ್ದ ಕಸದ ರಾಶಿಯನ್ನು ವಿಲೇವಾರಿ ವಾಹನದಲ್ಲಿ ತುಂಬಿ ಘಟಕದತ್ತ ಸಾಗಿಸಲಾಯಿತು. ವ್ಯಾಪಾರ ಕೇಂದ್ರವಾದ ನಿಟ್ಟೂರು ಊರಿನ ಹೆದ್ದಾರಿ ಬದಿ, ಮೈಸೂರು ರಸ್ತೆ, ಚೇಳೂರು ರಸ್ತೆ ಸೇರಿದಂತೆ ಗ್ರಾಮದ ಎಲ್ಲಾ ಬಡಾವಣೆಯ ರಸ್ತೆ ಅಚ್ಚುಕಟ್ಟು ಮಾಡುವ ಮೂಲಕ ಅಭಿಯಾನ ನಡೆದಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಊರಿನ ಸ್ವಚ್ಛತೆ ಮಾಡುವಲ್ಲಿ ಉತ್ಸಾಹದಲ್ಲಿ ಮುಂದಾಗಿದ್ದ ಕಾರ್ಮಿಕರಿಗೆ ಪಂಚಾಯಿತಿ ಮೂಲ ಸೌಲಭ್ಯ ಒದಗಿಸಬೇಕು. ಜೊತೆಗೆ ಕಸ ವಿಲೇವಾರಿ ಕೆಲಸಕ್ಕೆ ಅಗತ್ಯ ಸಲಕರಣೆ ಒದಗಿಸಬೇಕು ಎಂದು ಸಾರ್ವಜನಿಕ ಗ್ರಂಥಾಪಾಲಕ ಈರಯ್ಯ ತಿಳಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!