ರಕ್ತ ಸಮಯಕ್ಕೆ ಸಿಕ್ಕಾಗ ಜೀವ ಉಳಿಸಬಹುದು: ತಹಶೀಲ್ದಾರ್ ನಾಹಿದಾ

ಕೊರಟಗೆರೆ : ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸವಿ ಯುವಜನ ಸಂಘ ಹಾಗೂ ಸಂಜೀವಿನಿ ರಕ್ತನಿಧಿ ಕೇಂದ್ರ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ತಾಲ್ಲೂಕಿನ ಜನಸ್ನೇಹಿ ಅಧಿಕಾರಿ ತಹಶೀಲ್ದಾರ್ ನಾಹಿದಾ ಜಮ್ ಜಮ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ನಂತರ ಮಾತನಾಡಿ, ರಕ್ತದಾನ ಮಾಡುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವಾಗಿದೆ. ಬೇರೊಬ್ಬರು ಜೀವನ್ಮರಣದ ನಡುವೆ ಹೋರಾಡುತ್ತಿರುವಾಗ ರಕ್ತಕ್ಕಾಗಿ ಬಹಳಷ್ಟು ಪ್ರಯತ್ನ ಪಡುತ್ತಾರೆ. ಅಂತಹವರಿಗೆ ಅವಶ್ಯಕತೆ ಇರುವ ರಕ್ತವು ನಿಮ್ಮಂತಹ ದಾನಿಗಳ ಮುಖೇನ ಸಿಗುವುದರಿಂದ ಜೀವ ಉಳಿಸಿದಂತಾಗುತ್ತದೆ. ಇಂತಹ ಅದ್ಭುತ ಕಾಯ್ಕçಮವನ್ನು ಏಪ್ಡಿಸಿರುವ ವಾಸವಿ ಯುವಜನ ಯುವಕರಿಗೆ ತಹಶೀಲ್ದಾರ್ ರವರು ಅಭಿನಂದನೆ ತಿಳಿಸಿದರು.

ಇನ್ನೂ ರಕ್ತದಾನ ಶಿಬಿರದಲ್ಲಿ ಅನೇಕ ಯುವಕರು, ಮಹಿಳೆಯರು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಿದರು.


ನಮ್ಮ ಜಿಲ್ಲೆಗಳಲ್ಲಿ ರಕ್ತನಿಧಿ ಕೇಂದ್ರಗಳು ಎಲ್ಲೆಲ್ಲಿ ಇದ್ದಾವೆ ಎನ್ನುವುದರ ಮಾಹಿತಿ ಸಾರ್ವಜನಿಕರಿಗೆ ಶೀಘ್ರವಾಗಿ ತಿಳಿಯಬೇಕು, ಇಂತಹ ಗುಂಪಿನ ರಕ್ತ ಬೇಕು ಎಂದಾಗ ಒಂದು ಕಡೆ ಸಿಗದೇ ಇದ್ದಾಗ ಮತ್ತೊಂದು ಕಡೆ ಸಿಗುವ ಮಾಹಿತಿ ಶೀಘ್ರವಾಗಿ ಸಾರ್ವಜನಿಕರಿಗೆ ತಿಳಿಯಬೇಕು. ಏಕೆಂದರೆ ಸಮಸ್ಯೆ ಬಂದಾಗ ಆದಷ್ಟು ಬೇಗ ಅಂತಹ ವ್ಯಕ್ತಿಗಳಿಗೆ ಅವಶ್ಯಕತೆಯಿರುವ ರಕ್ತ ಸಿಕ್ಕಾಗ ಅಂತಹ ಜೀವವನ್ನು ಉಳಿಸಿದ ಭಾಗ್ಯ ನಮ್ಮದಾಗುತ್ತದೆ. ಇಂತಹ ಕೆಲಸ ಮಾಡುವುದು ಕೆಲವು ಸ್ಥಳೀಯ ವಾಟ್ಸಪ್ ಗ್ರೂಪ್ ಗಳು ನಿರ್ವಹಿಸುತ್ತಿವೆ, ಇದು ರಾಜ್ಯದಲ್ಲೇ ಆದರೆ ತುಂಬಾ ಒಳ್ಳೆಯದು ಎಂದು ನನ್ನ ಅನಿಸಿಕೆ.

  • ತಹಶೀಲ್ದಾರ್ ನಾಹಿದಾ

ರಕ್ತ ಎಂಬುದು ದೇಹ ಇರುವ ನಮಗೆಲ್ಲಾ ಜೀವಂತ ಶಕ್ತಿ, ಅನಿರೀಕ್ಷಿತವಾಗಿ ವ್ಯಕ್ತಿಯ ಪ್ರಾಣ ಅಪಾಯಕ್ಕೊಳಗಾದಾಗ ಅದನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ, ವ್ಯಕ್ತಿಯ ದೇಹಕ್ಕೆ ರಕ್ತದ ಅವಶ್ಯಕತೆ ಉಂಟಾಗಿ ಜೀವನ್ಮರಣದ ಸಮಸ್ಯೆ ಬಂದಾಗ ಅಂತಹವರ ಪ್ರಾಣ ಉಳಿಸಲು ನಾವು ರಕ್ತದಾನ ಮಾಡುವುದು ಪವಿತ್ರ ಕರ್ತವ್ಯವಾಗಿದೆ.
ಈ ಶಿಬಿರದಲ್ಲಿ ವಾಸವಿ ಯುವಜನ ಸಂಘದ ಅಧ್ಯಕ್ಷರಾದ .ದಿನೇಶ್, ಉಪಾಧ್ಯಕ್ಷರಾದ ಡಾಕ್ಟರ್ ಹರೀಶ್, ಖಜಾಂಚಿ ರಘು, ಮುಖ್ಯ ಅತಿಥಿಗಳಾದ ಡಾಕ್ಟರ್ ವಿನಯ್, ಬ್ಲಡ್ ಬ್ಯಾಂಕ್ ನ ಅರುಣ್ ಕುಮಾರ್, ಕಾರ್ಯದರ್ಶಿ ಎಚ್ ಪಿ ಸಾಗರ್, ನಿರ್ದೇಶಕರಾದ ಪ್ರಸಾದಿ, ನಾಗಶಯನ, ಬಾಲಾಜಿ, ಶಿವಶಂಕರ್, ಮನೋಜ್, ಬಾಲಾಜಿ, ದರ್ಶನ, ವಿಘ್ನೇಶ್, ಎಚ್ ಎನ್ ಲೋಕೇಶ್, ಮಿಥುನ್ ಸೇರಿದಂತೆ ಅನೇಕ ಯುವಕರು ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ-ಹರೀಶ್ ಬಾಬು ಬಿ.ಹೆಚ್. ಕೊರಟಗೆರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!