ಕೊರಟಗೆರೆ: ಪಟ್ಟಣದ ಶ್ರೀ ಕಟ್ಟೆ ಗಣಪತಿ ದೇವಸ್ಥಾನದ 8ನೇ ವಾರ್ಡಿನ
ಮನೆಯೊಂದರಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು ..
ಲಕ್ಷ್ಮೀ ಲೇಟ್ ನಾಗರಾಜ್ 30 ವರ್ಷದ ಒಂಟಿ ಮಹಿಳೆ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ
ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ .
ಇನ್ನೂ ಸಾವಿಗೀಡಾಗಿರುವ ಲಕ್ಷ್ಮಿ ಎನ್ನುವ ಮಹಿಳೆಗೆ 4ವರ್ಷದ ಗಂಡು ಮಗು ಇದೆ .
ಒಂಟಿಯಾಗಿದ್ದ ಲಕ್ಷ್ಮಿ ಮನೆಗೆ ಆಗಾಗ ಮನು ಎನ್ನುವ ವ್ಯಕ್ತಿ ಬಂದು ಹೋಗುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ ..
ಲಕ್ಷ್ಮಿ ಸಾವನ್ನಪ್ಪುವ 1ಗಂಟೆಯ ಮುಂಚಿತವಾಗಿ ಮನು ಮನೆಯಲ್ಲೇ ಇದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ
ಲಕ್ಷ್ಮಿಯ ಪತಿ ನಾಗರಾಜು ನಿಧನನಾದ ನಂತರ
ಲಕ್ಷ್ಮಿ ಕೆಲಸ ಮಾಡುವ ಸ್ಥಳದಲ್ಲಿ ಮನು ಎನ್ನುವ ಶಕ್ತಿಯ ಪರಿಚಯವಾಗುತ್ತದೆ
ಆತನು ಲಕ್ಷ್ಮಿಯ ಮನೆಗೆ ಬಂದು ಹೋಗುತ್ತಿರುವುದನ್ನು ಅಕ್ಕಪಕ್ಕದ ಮನೆಯವರು ಗಮನಿಸಿದ್ದಾರೆ
ಸುಮಾರು 3ವರ್ಷಗಳಿಂದ ಆತ ಲಕ್ಷ್ಮಿಯ ಮನೆಗೆ ಬಂದು ಹೋಗುತ್ತಿದ್ದ
ಘಟನೆ ನಡೆದ ನಿನ್ನೆಯೂ ಕೂಡ ಆತ ಮನೆಯಲ್ಲೇ ಇದ್ದ ಆತ ಮನೆಯಿಂದ ಹೊರಹೋಗಿದ್ದನ್ನು ಅಕ್ಕಪಕ್ಕದ ಮನೆಯವರು ಗಮನಿಸಿದ್ದಾರೆ ..
ಮೃತ ಲಕ್ಷ್ಮಿಯು ತನ್ನ ಸ್ನೇಹಿತೆ ಗೀತಾಳಿಗೆ ಹಣ ಕೊಡಬೇಕಾದ್ದರಿಂದ ಗೀತಾಳು ಲಕ್ಷ್ಮಿಗೆ ಕರೆ ಮಾಡಿರುತ್ತಾಳೆ ಕರೆ ಸ್ವೀಕರಿಸದ ಕಾರಣ ಗೀತಾ ತನ್ನ ಸ್ನೇಹಿತೆ ಲಕ್ಷ್ಮಿಯ ಮನೆಗೆ ಹೋದಾಗ ಈ ಘಟನೆಯನ್ನು ಕಂಡು ಗಾಬರಿಗೊಂಡ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ
ಘಟನಾ ಸ್ಥಳಕ್ಕೆ ಮಧುಗಿರಿಯ ಡಿವೈಎಸ್ಪಿ ವೆಂಕಟೇಶ್ ನಾಯ್ಡು ,ಕೊರಟಗೆರೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ,ಸಬ್ ಇನ್ಸ್ ಪೆಕ್ಟರ್ ಚೇತನ್ ಗೌಡ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ …
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ