ಕೊರಟಗೆರೆ: ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಣದ ಶ್ರೀ ಕಟ್ಟೆ ಗಣಪತಿ ದೇವಸ್ಥಾನದ ೮ನೇ ವಾರ್ಡಿನ ಮನೆಯೊಂದರಲ್ಲಿ ಮಹಿಳೆಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಲಕ್ಷ್ಮಿ (೩೦), ಮಹಿಳೆಯು ಮನೆಯಲ್ಲಿ ಒಬ್ಬಳೆ ಇರುವಾಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಮಾದ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಸಾವಿಗೀಡಾಗಿರುವ ಲಕ್ಷ್ಮಿ ಎನ್ನುವ ಮಹಿಳೆಗೆ ತಂದೆ ತಾಯಿ ಒಬ್ಬ ತಮ್ಮ ಇದ್ದರೆ ಅವರು ಕೂಡ ಬೇರೆ ವಸ್ತುವಾಗಿತ್ತು
ಮೃತ ಲಕ್ಷ್ಮಿಗೆ ನಾಲ್ಕು ವರ್ಷದ ಗಂಡು ಮಗು ಇದ್ದು ಅದು ಕೂಡ ಸಂಬಂಧಿಕರ ಮನೆಯಲ್ಲಿ ಬೆಳೆಯುತ್ತಿದ್ದ ಮೃತ ಲಕ್ಷ್ಮಿಯು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು ಎಂದು ತಿಳುದುಬಂದಿದೆ.
ಇನ್ನೂ ಘಟನೆ ಕುರಿತು ಮಾದ್ಯಮಗಳೊಂದಿಗೆ ಸ್ಥಳೀಯರು ಒಂಟಿಯಾಗಿದ್ದ ಲಕ್ಷ್ಮಿ ಮನೆಗೆ ಆಗಾಗ ಮನು ಎಂಬ ವ್ಯಕ್ತಿ ಆಗಾಗ ಬಂದು ಹೋಗುತ್ತಿದ್ದ ತಿಳಿಸಿದ್ದಾರೆ.
ಲಕ್ಷ್ಮೀ ಸಾವನ್ನಪ್ಪುವ ೧ ಗಂಟೆಯ ಮುಂಚಿತವಾಗಿ ಮನು ಆ ಮಹಿಳೆಯ ಮನೆಯಲ್ಲೇ ಇದ್ದ ಎಂದು ಕೂಡಾ ಮಾಹಿತಿ ತಿಳಿಸಿದ್ದಾರೆ.
ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ಮೃತ ಲಕ್ಷ್ಮಿಯು ತನ್ನ ಸ್ನೇಹಿತೆಯಾಗಿದ್ದು, ನನಗೆ ಹಣ ಕೊಡಬೇಕಾದ್ದರಿಂದ ಲಕ್ಷ್ಮಿಗೆ ಕರೆ ಮಾಡಿದೆ. ಕರೆ ಸ್ವೀಕರಿಸದ ಕಾರಣ ಸ್ನೇಹಿತೆ ಲಕ್ಷ್ಮಿಯ ಮನೆಗೆ ಹೋದಾಗ ಈ ಘಟನೆಯನ್ನು ಕಂಡು ಗಾಬರಿಗೊಂಡು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ .
ಘಟನಾ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಕೊರಟಗೆರೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ಸಬ್ ಇನ್ಸ್ ಪೆಕ್ಟರ್ ಚೇತನ್ ಗೌಡ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಸಿಬ್ಬಂದಿಗಳಾದ ಸಂಜೀವ್, ರಾಜು, ಧರ್ಮಪಾಲ್, ನಾಯಕ್, ದೊಡ್ಡಲಿಂಗಯ್ಯ ಸೇರಿದಂತೆ ಸ್ಥಳೀಯರು ಹಾಜರಿದ್ದರು.
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ