ಆಟದ ಮೈದಾನಕ್ಕೆ ಪೂಜೆ ಸಲ್ಲಿಸಿದ ಎಸ್ ಸಿ ವೈ ಸಿ ಕ್ರೀಡಾ ಸಂಘ : ಸಾಂಪ್ರದಾಯಕ ಉಡುಗೆ ತೊಟ್ಟ ಕ್ರೀಡಾಪಟುಗಳು

ಗುಬ್ಬಿ: ಗುಬ್ಬಿಯ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ವಿಶೇಷ ಕೂಡುಗೆ ನೀಡಿದ ಶ್ರೀ ಚನ್ನಬಸವೇಶ್ವರ ಯುವಕ ಸಂಘ ಪ್ರತಿ ವರ್ಷದಂತೆ ಆಟದ ಮೈದಾನಕ್ಕೆ ಪೂಜೆ ಸಲ್ಲಿಸಿದ ಸಂಘದ ಎಲ್ಲಾ ಕ್ರೀಡಾಳುಗಳು ಸಾಂಪ್ರದಾಯಕ ಉಡುಗೆ ತೊಟ್ಟು ಎಲ್ಲರನ್ನೂ ಆಕರ್ಷಿಸಿದರು.

ಸಂಜೆ ವೇಳೆ ಖೋಖೊ ಹಾಗೂ ವಾಲಿಬಾಲ್ ಮೈದಾನಕ್ಕೆ ದೀಪದ ಅಲಂಕಾರ ಮಾಡಿದ ಕ್ರೀಡಾಪಟುಗಳು ನೂರಾರು ದೀಪಗಳನ್ನು ಹಚ್ಚಿ ಆಟದ ಮೈದಾನವನ್ನು ದೀಪದ ಬೆಳಕಿನಲ್ಲಿ ಕಂಗೊಳಿಸಿದರು.

ದೀಪ ಹಚ್ಚುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ ಗ್ರಾಮೀಣ ಸೊಗಡಿನ ಖೋಖೊ ಹಾಗೂ ಕಬಡ್ಡಿ ಆಟವು ಉತ್ತಮ ಆರೋಗ್ಯ ನೀಡುತ್ತದೆ. ದೈಹಿಕ ಕಸರತ್ತು ನೀಡುವ ಈ ಆಟಗಳು ಇಂದಿನ ಮಕ್ಕಳು ಆಸಕ್ತಿ ತೋರುತ್ತಿಲ್ಲ. ಕೇವಲ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಶ್ರೀ ಚನ್ನಬಸೇಶ್ವರ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಕಳೆದ ನಲವತ್ತು ವರ್ಷದಿಂದ ನಿರಂತರ ಕ್ರೀಡಾ ಚಟುವಟಿಕೆ ನಡೆಸಿದ ನಮ್ಮ ಸಂಘ ರಾಜ್ಯ ಮಟ್ಟದ ಖೋಖೊ, ವಾಲಿಬಾಲ್ ಕ್ರೀಡೆಯನ್ನು ನಡೆಸುತ್ತಾ ಬಂದಿದೆ. ನಮ್ಮ ಸಂಘದಲ್ಲಿ ತಯಾರಾದ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಊರಿಗೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಆಟದ ಮೈದಾನ ಪೂಜೆ ನಡೆಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪಪಂ ನಾಮಿನಿ ಸದಸ್ಯ ಜಿ.ಆರ್.ಪ್ರಕಾಶ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಸವರಾಜು, ಹಿರಿಯ ಆಟಗಾರ ಮಲ್ಲಿಕ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!