ಪಾವಗಡ: ಸರ್ಕಾರಿ ಪ್ರೌಢಶಾಲೆ, ಅರಸೀಕೆರೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ವನ್ನು ಉದ್ಘಾಟಿಸಲಾಯಿತು.
ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ರವರಿಂದ ಪ್ರಾಯೋಜಕತ್ವವನ್ನು ವಹಿಸಿದ್ದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಬೇಕೆಂಬ ಸದುದ್ದೇಶದಿಂದ ಈ ವರ್ಷ ರಾಜ್ಯಾದ್ಯಂತ ಸುಮಾರು 27 ಶಾಲೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವ್ಯವಸ್ಥಾಪಕರಾದ ಶ್ರೀ ಓಂ ಪ್ರಕಾಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ರಾದ ಗೋವಿಂದಪ್ಪ.ಡಿ.ಎನ್, ವಿರ್ಬ್ಯಾಕ್ ಸಂಸ್ಥೆಯ ವ್ಯವಸ್ಥಾಪಕರಾದ ಓಂಪ್ರಕಾಶ್, ಕಾರ್ಯದರ್ಶಿ ಗಳಾದ ನಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುರಾಜ್,ಉಪಾಧ್ಯಕ್ಷಿಣಿಯಾದ ಶ್ರೀಮತಿ ಲಕ್ಕಮ್ಮ, ಸದಸ್ಯರುಗಳಾದ ಗೀತಮ್ಮ,ರತ್ನಮ್ಮ,ಶಿಕ್ಷಕರಾದ ರೇಣುಕಾರಾಜ್.ಜಿ.ಹೆಚ್,ರವಿ.ಎಸ್,ಹನುಮೇಶ್.ಎನ್,ಮೋಹನ್ ಕುಮಾರ್, ಅಭಿಷೇಕ್, ಶ್ರೀಮತಿ ವಿಮಲಾ.ಆರ್, ರಶ್ಮೀ.ಸಿ.ಎಸ್,ಮಾನಸ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.