ಹಿಂದೂ ವಿರೋಧಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿಯನ್ನು ಬಂಧಿಸಿ: ಸೊಗಡು ಶಿವಣ್ಣ

ತುಮಕೂರು: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‌ನ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಸರ್ಕಾರ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ಕೋಟಿ ದೇವರುಗಳನ್ನು ಕಂಡ ಈ ದೇಶಲ್ಲಿ ಬಸವಣ್ಣ, ಕನಕದಾಸ, ಪುರಂದರದಾಸ, ವಾಲ್ಮೀಕಿಯಂತಹ ಮಹಾನುಭಾವರು ಜನಿಸಿದ ನಾಡಿನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿರುವ ಮಾತನಾಡಿರುವ ಸತೀಶ್ ಜಾರಕಿಹೊಳಿಯನ್ನು ತಕ್ಷಣ ಬಂಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ತನ್ನ ಮಾತನ್ನು ವಾಪಸ್ ಪಡೆಯುವುದಾಗಿ ಹೇಳಿರುವ ಸತೀಶ್ ಜಾರಕಿಹೊಳಿ, ಇದನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ಇವರನ್ನು ಬಂಧಿಸಬೇಕು, ಮಾಡಬಾರದ್ದನ್ನು ಮಾಡಿ ಆ ನಂತರ ತಪ್ಪಾಗಿದೆ ಎಂದು ಕ್ಷಮಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಇಷ್ಟೊತ್ತಿಗೆ ಸರ್ಕಾರ ಬಂಧಿಸಬೇಕಿತ್ತು. ಸಾಮಾನ್ಯ ವ್ಯಕ್ತಿ ಮಾತನಾಡಿದ್ದರೆ ಕೂಡಲೇ ಆತನನ್ನು ಬಂಧಿಸಿ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ದೊಡ್ಡವರು ಏನು ಬೇಕಾದರೂ ಮಾತನಾಡಬಹುದು, ಅವರ ಮೇಲೆ ಕ್ರಮ ಜರುಗಿಸಬಾರದು ಎಂದು ಎಲ್ಲಿಯೂ ಇಲ್ಲ, ಕೂಡಲೇ ಸತೀಶ್‌ರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಅವಳಿ ಮಕ್ಕಳ ತಾಯಿ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಸಾಂತ್ವಾನ ಕೇಂದ್ರದಲ್ಲಿರುವ ಅವರ ಮತ್ತೊಂದು ಮಗುವನ್ನು ಭೇಟಿ ಮಾಡಿ ಮಾತನಾಡಿಸಲು ಹೋಗಿದ್ದಾಗ, ಅಲ್ಲಿ ೧೮ ವರ್ಷದೊಳಗಿನ ಹೆಣ್ಣುಮಕ್ಕಳು ಸುಮಾರು ೫೦ ಮಂದಿಗೂ ಹೆಚ್ಚಿನವರಿದ್ದಾರೆ. ಹೈಸ್ಕೂಲ್ ಮತ್ತು ಪಿಯುಸಿ ಓದುತ್ತಿರುವವರೇ ಹೆಚ್ಚಾಗಿದ್ದಾರೆ. ಸರ್ಕಾರ ಆ ಹೆಣ್ಣು ಮಕ್ಕಳ ಶಿಕ್ಷಣದ ಜೊತೆಗೆ ಅವರಿಗೆ ಸೂಕ್ತ ರಕ್ಷಣೆಯನ್ನು ಕಲ್ಪಿಸುವ ಅಗತ್ಯವಿದೆ ಎಂದರು.

ಸಾಂತ್ವಾನ ಕೇಂದ್ರದಲ್ಲಿರುವ ಹೆಣ್ಣುಮಕ್ಕಳ ಪೋಷಕರು ಹಾಗೂ ಅವರ ಕುಟುಂಬಸ್ಥರು ಯಾರಾದರೂ ಇದ್ದರೆ, ಅವರ ವಿಳಾಸವನ್ನು ಪತ್ತೆಹಚ್ಚಿ ಅವರಿಗೆ ಮಕ್ಕಳನ್ನು ಒಪ್ಪಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ಅಮಾನಿಕೆರೆ ಉದ್ಯಾನವನದಲ್ಲಿ ಪ್ರೇಮಿಗಳೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಲವ್ ಜಿಹಾದ್ ನಡೆಯುವ ಸಾಧ್ಯತೆಗಳು ಹೆಚ್ಚಲಿವೆ. ಶಾಲಾ, ಕಾಲೇಜು, ಹಾಸ್ಟೆಲ್‌ಗಳ ಬಳಿ ಯುವಕರ ಗುಂಪುಗಳು ಹೆಚ್ಚು ಹೆಚ್ಚು ಕಂಡು ಬರುತ್ತಿದ್ದು, ಯುವಕರಿಗೆ ಅಲ್ಲಿ ಏನು ಕೆಲಸವಿರುತ್ತದೆ. ಇಂತಹ ಕಡೆಗಳಲ್ಲಿ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.

ಜನ ಜಾನುವಾರುಗಳಿಗೆ ಕುಡಿಯುವ ನೀರು ಅತ್ಯಮೂಲ್ಯವಾಗಿದ್ದು, ಇಂತಹ ನೀರು ಕಲುಷಿತವಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನಗರದ ಕೋಡಿ ಬಸವೇಶ್ವರ ದೇವಸ್ಥಾನದ ಬಳಿ ಯುಜಿಡಿ ನೀರು ಹರಿದು ಕುಡಿಯುವ ನೀರಿಗೆ ಮಿಶ್ರಣವಾಗಿ ಮಾರ್ಕೋನಹಳ್ಳಿ ಡ್ಯಾಂವರೆಗೆ ಇರುವ ಎಲ್ಲಾ ಕೆರೆಗಳಿಗೂ ಕಲುಷಿತಗೊಳ್ಳಲಿದೆ. ಆದ್ದರಿಂದ ಕೂಡಲೇ ಎಚ್ಚತ್ತು, ಯುಜಿಡಿ ದುರಸ್ಥಿಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಯಸಿಂಹರಾವ್, ಕೆ.ಎಲ್.ಹರೀಶ್, ನವೀನ್ ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!