ಕೊರಟಗೆರೆ :- ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಭಕ್ತಿ ಸಂಪ್ರದಾಯದ ಮಹಾನ್ ನಾಯಕ, ಕವಿ ಎಂದರೆ ಅದು ಕನಕದಾಸರು ಇವರ ಜೀವನ ಚರಿತ್ರೆಯು ಸಾಹಸ ಮತ್ತು ಪವಾಡಗಳಿಂದ ತುಂಬಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದರಾಜು ತಿಳಿಸಿದರು.
ಅವರು ತಾಲೂಕಿನ ಶಕುನಿ ತಿಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರೀ ಕನಕದಾಸರ ಜಯಂತಿಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿ ಭಕ್ತ ಕನಕದಾಸರು ಜಾತಿ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಧಾರ್ಮಿಕ ಚಳುವಳಿಯನ್ನು ಮುನ್ನಡೆಸಿದ ಕ್ರಾಂತಿಕಾರಿ ಯಾಗಿದ್ದರು, ಇವರ ಕೃತಿಗಳು ನಿಜಕ್ಕೂ ಕೂಡ ನಾವೆಲ್ಲರೂ ಮರೆಯಲಾಗದಂತಹ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರು ಸರಿಸುಮಾರು 316 ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ ಇವರ ಆದೇಶ ತತ್ವಗಳನ್ನು ನಾವೆಲ್ಲರೂ ಪ್ರತಿನಿತ್ಯ ಪಾಲನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್ ಮಾತನಾಡಿ ಭಕ್ತ ಕನಕದಾಸರು 15-16 ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಹರಿದಾಸರಲ್ಲಿ ಒಬ್ಬರಾಗಿದ್ದರು, ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನ ಕಾರ ರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನು ಇಟ್ಟವರು ಶ್ರೀ ಕನಕದಾಸರು.
ಇವರ ಸಾಹಿತ್ಯ, ಕೀರ್ತನೆಗಳು, ಕೃತಿಗಳು ನಿಜಕ್ಕೂ ಕೂಡ ಅಪಾರವಾದದ್ದು ಶ್ರೀ ಕನಕದಾಸರವರನ್ನು ನಾವು ಕೇವಲ ಜಯಂತಿ ಎಂದು ಮಾತ್ರ ನೆನಪಿಸಿಕೊಳ್ಳುವುದಲ್ಲದೆ ಪ್ರತಿನಿತ್ಯವೂ ಇವರು ರಚಿಸಿದ ಕೃತಿಗಳನ್ನೆಲ್ಲ ಓದುತ್ತಾ ಇವರನ್ನು ಸ್ಮರಿಸಬೇಕಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಮಹೇಶ್ ಎಸ್, ಹೇಮಂತ್ ಕುಮಾರ್, ಸವಿತಾ ಅಂಗನವಾಡಿ ಶಿಕ್ಷಕಿ ರತ್ನಮ್ಮ ಎಸ್ ಡಿ ಎಂ ಸಿ ಸದಸ್ಯರಾದ ಶಂಕರ್ ನಾಯಕ್ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಜರಿದ್ದರು.