ವೀರ ವನಿತೆ ಜನಿಸಿರುವ ಈ ಭೂಮಿ ನಿಜಕ್ಕೂ ಪುಣ್ಯಭೂಮಿ: ತಹಶೀಲ್ದಾರ್ ನಾಹಿದಾ ಜಮ್ ಜಮ್

ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ವೀರವನಿತೆ ಒನಕೆ ಓಬವ್ವ ಹಾಗೂ ಕನಕದಾಸರ ಜಯಂತಿಯನ್ನು ತಹಶೀಲ್ದಾರ್ ನಾಹಿದಾ ಜಮ್ ಜಮ್ ನೇತೃತ್ವದಲ್ಲಿ ಆಚರಿಸಲಾಯಿತು…

ಕೊರಟಗೆರೆ :-ತಾಲ್ಲೂಕು ಆಡಳಿತ ವತಿಯಿಂದ ವೀರವನಿತೆ ಒನಕೆ ಓಬವ್ವ ಹಾಗೂ ಕನಕದಾಸರ ಜಯಂತಿಯನ್ನು ತಹಶೀಲ್ದಾರ್ ರವರ ಕಚೇರಿ ಆವರಣದಲ್ಲಿ ತಾಲ್ಲೂಕು ಕುರುಬ ಸಮುದಾಯದ ಸದಸ್ಯರು ಹಾಗೂ ಚಲವಾದಿ ಸಮುದಾಯದ ಸದಸ್ಯರೊಂದಿಗೆ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ಸರಳವಾಗಿ ಆಚರಿಸಲಾಯಿತು…

ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ :-ನಮ್ಮ ನಾಡಿಗೆ ಕೀರ್ತಿ ತರುವ ಪಾತ್ರದಲ್ಲಿ ವೀರ ವನಿತೆಯರ ಪಾತ್ರವೂ ಬಹುಮುಖ್ಯವಾಗಿದೆ ಅದರಲ್ಲೂ ವೀರವನಿತೆ ಒನಕೆ ಓಬವ್ವ ಎಂದ ಕೂಡಲೇ ನೆನಪಾಗುವುದು ಚಿತ್ರದುರ್ಗದ ಕೋಟೆ ಹೈದರಾಲಿಯ ಸೇನೆಯೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವ ಆಕೆ ಸಾಹಸದ ಕಥೆಯನ್ನು ಮುಂದಿನ ಪೀಳಿಗೆಗೂ ಸಾರುವಂತದ್ದು .ಅಂತಹ ವೀರ ವನಿತೆಯರು ಜನಿಸಿರುವ ಈ ಭೂಮಿ ನಿಜಕ್ಕೂ ಪುಣ್ಯಭೂಮಿ ಎಂದರೆ ತಪ್ಪಾಗಲಾರದು ಇಂತಹ ಮಹಾನ್ ವೀರ ವನಿತೆಯರ ಜಯಂತಿಯನ್ನು ಆಚರಿಸಲು ಸರಕಾರವು ಅನುವು ಮಾಡಿಕೊಟ್ಟ ಹಿನ್ನೆಲೆ ತಾಲೂಕಿನ ತಹಶೀಲ್ದಾರ್ ಸೇರಿದಂತೆ ಸಾರ್ವಜನಿಕರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು …

ತಾಲ್ಲೂಕು ಕುರುಬ ಸಮುದಾಯದ ಅಧ್ಯಕ್ಷ ಮೈಲಾರಪ್ಪ ಮಾತನಾಡಿ :- ಕನಕದಾಸರು ಕೇವಲ ಕುರುಬ ಸಮುದಾಯಕ್ಕೆ ಮಾತ್ರ ಸೇರಿದವರಲ್ಲ ನಾಡಿನ ಸಮಸ್ತ ಸಮುದಾಯಗಳಿಗೆ ಸೇರಿದವರು ಅವರ ಕೊಡುಗೆಯನ್ನು ನಾವುಗಳು ಪ್ರತಿನಿತ್ಯ ಸ್ಮರಿಸಬೇಕು ಅಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು ..
ತಾಲ್ಲೂಕು ಕುರುಬ ಸಮುದಾಯದ ಮುಖಂಡರಾದ ರಂಗಧಾಮಯ್ಯ ಮಾತನಾಡಿ ..ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಸಹಕಾರಿಯಾಗಿ ಜನಮನ್ನಣೆ ಗಳಿಸಿದ ಇವರು ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಏಕೈಕ ಶುದ್ಧ ದಾಸರು ಇವರು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ನಮ್ಮ ಕನಕದಾಸರು ಅವರ 535ನೇ ಜನ್ಮದಿನಾಚರಣೆ ಆಚರಿಸುವ ಭಾಗ್ಯ ನಮ್ಮದಾಗಿದೆ ಎಂದು ತಿಳಿಸಿದರು ..

ಇನ್ನೂ ಕಾರ್ಯಕ್ರಮದ ಸಂದರ್ಭದಲ್ಲಿ ತಾಲ್ಲೂಕು ಕುರುಬ ಸಮುದಾಯದ ಅಧ್ಯಕ್ಷರಾದ ಮೈಲಾರಪ್ಪ , ಜಿಲ್ಲಾ ನಿರ್ದೇಶಕರಾದ ನಾಗಭೂಷಣ್ , ರಂಗಶಾಮಯ್ಯ, ರಂಗರಾಜು, ನಂಜುಂಡ ,ಲಕ್ಷ್ಮೀಪ್ರಸಾದ್, ಆನಂದ್ ಸೇರಿದಂತೆ ತಾಲ್ಲೂಕು ಛಲವಾದಿ ಸಮುದಾಯದ ಅಧ್ಯಕ್ಷರಾದ ಜಿ ಎಸ್ ಹನುಮ ಮೂರ್ತಿ, ಉಪಾಧ್ಯಕ್ಷ ಹನುಮಂತರಾಯಪ್ಪ, ಕಾರ್ಯದರ್ಶಿ ಪುಟ್ಟರಾಜು, ಖಜಾಂಚಿ ಗಿರೀಶ್ ಸೇರಿದಂತೆ ಮುಖಂಡರು ಪದಾಧಿಕಾರಿಗಳು ಹಾಗೂ ತಾಲ್ಲೂಕು ಕಚೇರಿಯ ಎಲ್ಲ ಅಧಿಕಾರಿ ವರ್ಗದವರು ಹಾಜರಿದ್ದರು …

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!