ಹಾಗಲವಾಡಿ : ಶಾಸಕ ಶ್ರೀನಿವಾಸ್ ಅವರ ತಂದೆಯ ಕಾಲದಿಂದಲೂ ಕಾಂಗ್ರೆಸ್ ನವರು, ಅವರ ತಂದೆ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಅವರಿಗೆ ಅಂದು ಟಿಕೆಟ್ ನೀಡದ ಕಾರಣ ಮಗ ಶ್ರೀನಿವಾಸ್ ಸ್ವತಂತ್ರ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಗೆದ್ದಿದ್ದರು ಎಂದು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಮಾಜಿ ಸದಸ್ಯ ರಂಗಸ್ವಾಮಯ್ಯ ಹೇಳಿದರು.
ಮಂಚಲ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚವೀರನ ಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಶ್ರೀನಿವಾಸ್ ಹಾಗೂ ಅವರ ತಂದೆ ಮೂಲತಹ ಕಾಂಗ್ರೆಸ್ ಪಕ್ಷದವರೇ ಬಹಳ ಪೂರ್ವ ಕಾಲದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಶಾಸಕರಾಗಬೇಕಿದ್ದ ತಂದೆ ರಾಮೇಗೌಡರು,ಆದರೆ ಕೆಲವರು ಕಾಲು ಎಳೆದು ಟಿಕೆಟ್ ತಪ್ಪಿಸಿದ್ದರು ನಂತರ ಮಗ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ಗೆಲುವು ಪಡೆದು ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಕುಮಾರಸ್ವಾಮಿ ಹಾಗೂ ದೇವೇಗೌಡರು ಜನರ ಮತ ಪಡೆದು ರಾಜ್ಯಕ್ಕೆ ಮೋಸ ಮಾಡಿದ್ದಾರೆ ಈಗಲಾದರೂ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವುದು ಸಂತೋಷ ತಂದಿದೆ ಮತ್ತು ಟಿಕೆಟ್ ಅವರಿಗೆ ಸಿಗುತ್ತದೆ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡ ರಮೇಶ್ ಮಾತನಾಡಿ ನಮ್ಮ ರಕ್ತದಲ್ಲಿಯೂ ಸಹ ಜೆಡಿಎಸ್ ಪಕ್ಷ ಒಳ ಹೊಕ್ಕಿತ್ತು ಆದರೆ ನಮ್ಮ ಶಾಸಕರಿಗೆ ಅನ್ಯಾಯ ಮಾಡಿದ ಮೇಲೇ ನಾವು ಸಹ ಆ ಪಕ್ಷದಲ್ಲಿ ಇರಲು ಸಿದ್ದವಿಲ್ಲ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಉಚ್ಚಾಟಿತ ತಾಲೂಕು ಘಟಕದ ಅಧ್ಯಕ್ಷ ಗುರು ರೇಣುಕಾರಾಧ್ಯ ಯುವ ಘಟಕದ ಅಧ್ಯಕ್ಷ ವೆಂಕಟೇಶ್,ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಕರಿಯಮ್ಮ ರಮೇಶ್, ಸಣ್ಣ ರಂಗಯ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಿದ್ದಗಂಗಮ್ಮ ಉಪಾಧ್ಯಕ್ಷ ಕೆ ಟಿ ರಾಜು ಮುಖಂಡರಾದ ಕರಿಬಸವಯ್ಯ. ತಿಮ್ಮಣ್ಣ. ಮುದ್ದ ರಂಗಪ್ಪ. ಶಶಿಕಲಾ. ದೇವರಾಜು ವಿ ಎಸ್ ಎಸ್ ಎನ್ ಅಧ್ಯಕ್ಷ ಪುಟ್ಟ ಸಿದ್ದಪ್ಪ. ಬಸವರಾಜು, ಲಿಂಗರಾಜುಮಠ ಪುಟ್ಟರಾಜು. ಮಂಜುನಾಥ್ ಸೇರಿದಂತೆ ಇನ್ನಿತರರರು ಹಾಜರಿದ್ದರು.