ಶಿವನೇಹಳ್ಳಿ ಹಾಗೂ ಅರೇಹಳ್ಳಿ ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಒತ್ತು: ಅರೇಹಳ್ಳಿ ನಟರಾಜು

ಎಂ ಎನ್ ಕೋಟೆ : ನನ್ನ ಕ್ಷೇತ್ರದ ಶಿವನೇಹಳ್ಳಿ ಹಾಗೂ ಅರೇಹಳ್ಳಿ ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಹೋತ್ತು ನೀಡಲಾಗುತ್ತಿದೆ ಚುನಾವಣೆ ವೇಳೆ ನಾನು ಮಾತು ‌ಕೊಟ್ಟಿದೆ ಅದರಂತೆ ಅಭಿವೃದ್ದಿ ಮಾಡಲಾಗುತ್ತಿದೆ ಎಂದು ನೂತನ ಗ್ರಾಮ ಪಂಚಾಯಿತಿ ಸದಸ್ಯ ಅರೇಹಳ್ಳಿ ನಟರಾಜು ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಶಿವನೇಹಳ್ಳಿ ರಸ್ತೆಗೆ ಭಾನುವಾರ ಗುಂಡಿಗಳನ್ನು ಮುಚ್ಷುವ ಕಾರ್ಯಕ್ರಮ್ಮಕ್ಕೆ ಚಾಲನೇ ನೀಡಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನಾನು ಮತದಾರರಿಗೆ ಮಾತುಕೊಟ್ಟಿದೆ ಚುನಾವಣೆಯಲ್ಲಿ ಗೆದ್ದರೆ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಡುತ್ತೇನೆ ಅಂಥ ಚುನಾವಣೆಯಲ್ಲಿ ಒಂದು ಮತದಿಂದ ಸೋತ್ತಿದ್ದೆ ಆದರೂ ಮತ ಎಣಿಕೆಯಲ್ಲಿ ಗೊಂದಲವಿದೆ ಎಂದು ನಾನು ಕೋರ್ಟ್ ಗೆ ದಾವಿ ಹೋಗಿದೆ ಸುಮಾರು ಎರಡು ವರ್ಷಗಳ ನಂತರ ಹೈಕೋರ್ಟ್ ವಿಜೇತ ಅಭ್ಯರ್ಥಿ ಎಂದು ಚುನಾವಣೆ ಪತ್ರವನ್ನು ನೀಡಿ ಆದೇಶ ಹೊರಡಿಸಿತ್ತು. ಆದರಂತೆ ನನ್ನ ಕ್ಷೇತ್ರಕ್ಕೆ ಕೊಟ್ಟ ಮಾತಿನಂತೆ ಶಿವನೇಹಳ್ಳಿ ರಸ್ತೆಯಿಂದ ಸುಮಾರು 4 ಕಿಮೀ.ವರೆಗೂ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು ಸುಮಾರು ಎರಡು ಲಕ್ಷದಲ್ಲಿ ಸ್ವಂತ ಖರ್ಚಿನಿಂದ ರಸ್ತೆ ಹಾಗೂ ಜಲ್ಲಿಗಳನ್ನು ಹಾಕಿ ಮುಚ್ಷಿಲಾಗಿದೆ ಈ ರಸ್ತೆಯಲ್ಲಿ ಸಾಕಷ್ವು ಗುಂಡಿಗಳು ಬಿದಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಈಗ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದ ಅವರು ಗ್ರಾಮಗಳ ಸಮಗ್ರ ಅಭಿವೃದ್ದಿಗೆ ನಾನು ಮುಂದೇನು ಸಹ ಇದೇ ರೀತಿ ಸಹಕಾರ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ಗ್ರಾಮದ ಮುಖಂಡ ಜಯಣ್ಣ ಎಸ್. ಮಾತನಾಡಿ ಸುಮಾರು 30 ವರ್ಷಗಳು ಕಳೆದರೂ ನಮ್ಮೂರಿಗೆ ರಸ್ತೆಯನ್ನು ಯಾರು ಮಾಡಿಕೊಟ್ಟಿಲ್ಲ ಶಾಸಕರುಗೆ ಸುಮಾರು ಭಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಕಿರಣ್ ಕುಮಾರ್ ಅವರು ಶಾಸಕರು ಆಗಿದ್ದಾಗ ಕಾಲದಲ್ಲಿ ಶಿವನೇಹಳ್ಖಿ ರಸ್ತೆಯನ್ನು ಮಾಡಿದ್ದರು.ಆದರೆ ಇದು ವರೆಗೂ ಶಿವನೇಹಳ್ಳಿ ರಸ್ತೆಯನ್ನು ಯಾರು ಮಾಡಿಕೊಟ್ಟಿಲ್ಲ ಮಳೆ ಬಂದರೆ ತುಂಬ ತೊಂದರೆಯಾಗುತ್ತಿತ್ತು ಆದರೆ ಈಗ ಅರೇಹಳ್ಳಿ ನಟರಾಜು ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಮೇಲೆ ಶಿವನೇಹಳ್ಳಿ ರಸ್ತೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ ಅವರ ಸಹಕಾರ ಶಿವನೇಹಳ್ಳಿ ಗ್ರಾಮಕ್ಕೆ ಹೀಗೆ ಇರಲಿ ಇನ್ನೂ ಹೆಚ್ಚು ಅಭಿವೃದ್ದಿಯನ್ನು ಮಾಡಲಿ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಮುಖಂಡರಾದ ಶಿವನೇಹಳ್ಳಿ ಎಸ್.ಇ. ಮಲ್ಲೇಶ್ , ಪಲ್ಲಕ್ಕಿ ರುದ್ರೇಶ್ , ಎಸ್.ವಿ. ಬಸವರಾಜು , ಜಯಣ್ಣ , ಶಾಂತರಾಜು , ಗಂಗಾಧರ್ , ಪಂಚಾಕ್ಷರಿ , ಕರಿಬಸವಯ್ಯ , ಗ್ರಾಮಸ್ಥರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!