ಬಾದಾಮಿ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಬಾದಾಮಿಯಲ್ಲಿ ಅಖಿಲ ಕರ್ನಾಟಕ ನಾಯಕ ಮಹಾಸಭಾ ತಾಲೂಕಾ ಘಟಕ ಬಾದಾಮಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಶ್ರೀ ಪ್ರಸ ನ್ನಾ ನಂದ ಪುರಿ ಮಹಾಸ್ವಾಮಿಗಳವರ ಅಭಿನಂದನಾ ಮಹಾಸಭೆ ಹಾಗೂ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವ ಭಾವಿ ಸಭೆ ನಡೆಸಲಾಯಿತು

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಲ್ಲಿಂದು ಬಾದಾಮಿಯಲ್ಲಿ ಅಖಿಲ ಕರ್ನಾಟಕ ನಾಯಕ ಮಹಾಸಭಾ ತಾಲೂಕಾ ಘಟಕ ಬಾದಾಮಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಶ್ರೀ ಪ್ರಸ ನ್ನಾ ನಂದ ಪುರಿ ಮಹಾಸ್ವಾಮಿಗಳವರ ಅಭಿನಂದನಾ ಮಹಾಸಭೆ ಹಾಗೂ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವ ಭಾವಿ ಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..

ಬಾದಾಮಿ ನಗರದ ಅಂಬೇಡ್ಕರ್ ವೃತ್ತದ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.ನಗರದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಶ್ರೀ ಪ್ರಸನ್ನ ನ್ನಾನಂದ ಪುರಿ ಮಹಾಸ್ವಾಮಿಗಳ ವರು ವಿರಾಜಮಾ ನರಾಗಿದ್ದರು. ಮಹರ್ಷಿ ವಾಲ್ಮೀಕಿ ಗುರುಗಳ ಭಾವಚಿತ್ರದ ವಾಹನದ ಜೊತೆ ಡೊಳ್ಳು ಕುಣಿತ ಅದರಲ್ಲೂ ಬಾಲಕ ಬಾಲಕಿಯರ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು. ಮುಖ್ಯ ರಸ್ತೆಯಲ್ಲಿರುವ ವೀರ ಸಿಂಧೂರ ಲಕ್ಷ್ಮಣ ನ ಭಾವಚಿತ್ರಕ್ಕೆ ಹಾಗೂ ಸಂಗೊಳ್ಳಿ ರಾಯಣ್ಣ ,ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾಗಿದ ಮೆರವಣಿಗೆ ನಗರದ ಗಣೇಶ ಗುಡಿಯಲ್ಲಿ ಕಾರ್ಯಕ್ರಮ ಆಯೋಜನೆ ಆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಾಯಕ ಹಾಗೂ ವಾಲ್ಮೀಕಿ ಸಮಾಜದ ಗುರುಗಳಾದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಆಶೀರ್ವಚನ ದಲ್ಲಿ ಮಾತನಾಡಿ ಹಿಂದಿನ ಕಾಲದಿಂದಲೂ ಶೋಷಣೆಗೆ ತುಳಿತಕ್ಕೆ ಒಳಗಾದ ಸಮುದಾಯವಾಗಿದ್ದು, ಇದಕ್ಕೋಸ್ಕರ ನಾವು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಸತ್ಯಾಗ್ರಹ ಮಾಡುವುದರ ಮೂಲಕ ನಾವು ಇಂದು ಮೀಸಲಾತಿ ಹೋರಾಟ ಯಶಸ್ವಿಯಾಗಿದೆ ಸರಕಾರ ಮೀಸಲಾತಿ ಘೋಷಣೆ ಮಾಡಿದ್ದು ಇದಕ್ಕೆ ಬೆಂಬಲಿಸಿದ ಮಾಜಿ ಮುಖ್ಯಮಂತ್ರಿ ಬ್ಯಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯ ನವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮುಖ್ಯ ಮಂತ್ರಿ ಬಸಾವರಾಜ ಬೊಮ್ಮಾಯಿಯವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ನಂದ ಪುರಿ ಮಹಾಸ್ವಾಮಿ ಗಳಿಗೆ ನಾಯಕ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರು ನಿವೃತ್ತ ತಹಶೀಲ್ದಾರ್ ಶ್ರೀ ಭೀಮಪ್ಪ ತಳವಾರ ಹಾಗೂ ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಹನ ಮಂತ ಮಾವಿನಮರ ದ ಹಾಗೂ ಬಿ. ಜೆ. ಪಿ.ಜಿಲ್ಲಾಧ್ಯಕ್ಷ ಶಾಂತ ಗೌಡ. ಟಿ.ಪಾಟೀಲ,, ಕುರುಬ ಸಮಾಜದ ಮುಖಂಡರು ಇನ್ನೂ ಅನೇಕ ಸಮುದಾಯಗಳ ಮುಖಂಡರು ಮಹಾಸ್ವಾಮಿಗಳು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಆಶೀರ್ವಾದ ಪಡೆದುಕೊಂಡರು..

ಕಾರ್ಯಕ್ರಮದಲ್ಲಿ ಬಾದಾಮಿ ತಾಲೂಕಾ ನಾಯಕ ವಾಲ್ಮೀಕಿ ಸಮುದಾಯಗಳ ಹಿರಿಯ ನಾಯಕರು ಹಾಗೂ ನಿವೃತ್ತ ತಹಶೀಲ್ದಾರ್ ರಾಗಿದ್ದ ಶ್ರೀ ಭೀಮಪ್ಪ.ತಳವಾರ, ಬಿ. ಜೆ. ಪಿ. ಪಕ್ಷದ ಜಿಲ್ಲಾಧ್ಯಕ್ಷ ಶಂತಾಗೌಡ. ಟಿ.ಪಾಟೀಲ,,ಹಾಗೂ ಜೆ.ಡಿ.ಎಸ್.ಪಕ್ಷ ದ ಜಿಲ್ಲಾಧ್ಯಕ್ಷ ಹನಮಂತನ.ಮಾವಿನಮರದ, ವಾಲ್ಮೀಕಿ ನಾಯಕ ಸಮಾಜದ ಮುಖಂಡ ಲಕ್ಷಣ ಮರಡಿ ತೋಟ, ವಾಲ್ಮೀಕಿ ನಾಯಕ ಸಮಾಜದ ತಾಲೂಕಾಧ್ಯಕ್ಷ ಪ್ರಕಾಶ ನಾಯ್ಕರ, ಬಹುಜನ ಸಂಘದ ಮುಖಂಡ ನಾಗೇಶ್ ದೊಡಮನಿ, ಪಿ.ಎಸ್.ಕವಡಿಮಟ್ಟಿ, ಹಾಗೂ ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಹಿಂದುಳಿದ ವರ್ಗಗಳ ಮುಖಂಡರು ಸೇರಿದಂತೆ ಅನೇಕ ಬಂಧುಗಳು ಸಮಾಜದ ಮಹಿಳೆಯರು ಉಪಸ್ಥಿತರಿದ್ದರು.

ವರದಿ:- ರಾಜೇಶ್ ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!